Welcome to jagruthibelaku   Click to listen highlighted text! Welcome to jagruthibelaku
Tuesday, June 2, 2026
Homeಹೊಸಪೇಟೆಕಾರ್ಮಿಕ ಸಚಿವ ಸಂತೋಷ ಲಾಡ್ ಹುಟ್ಟು ಹಬ್ಬವನ್ನು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಿದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಹುಟ್ಟು ಹಬ್ಬವನ್ನು ಯುವ ಕಾಂಗ್ರೆಸ್ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಿದರು.

ವಿಜಯನಗರ /ಹೊಸಪೇಟೆ,(ಜಾಗೃತಿ ಬೆಳಕು ನ್ಯೂಸ್)

ಫೆ, 27,ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಂಗೋಲಿಯಲ್ಲಿ ಬೃಹತ್ ಆಕಾರದ ಸಂತೋಷ್ ಲಾಡ್ ಅವರ ಭಾವಚಿತ್ರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷವಾಗಿ ನಿರ್ಮಾಣ ಮಾಡಲಾಗಿತ್ತು, ಒಂದು ಕ್ವಿಂಟಲ್ ಗೂ ಅಧಿಕ ರಂಗೋಲಿ ಬಳಸಿ 7 ಜನ ಕಲಾವಿದರಿಂದ 14 ತಾಸುಗಳ ಕಾಲ ಸಮಯದಲ್ಲಿ ರಂಗೋಲಿಯಿಂದ 100 ಅಡಿ ಉದ್ದ 100 ಅಡಿ ಅಗಲ ಸಂತೋಷ್ ಲಾಡ್ ಭಾವಚಿತ್ರ ನಿರ್ಮಾಣ ಮಾಡಲಾಗಿದೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ಸಿದ್ದು ಹಳ್ಳೇಗೌಡ್ರ ನೇತೃತ್ವದ ಅನುಪಸ್ಥಿತಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಭರತ್ ಕುಮಾರ್ ಸಿಆರ್ ರಿಂದ ನಿರ್ಮಿಸಿ, ಸಂತೋಷ ಲಾಡ್ ಗೆ ವಿಭಿನ್ನ ರೀತಿಯಲ್ಲಿ ಹುಟ್ಟು ಹಬ್ಬದ ಶುಭ ಹಾರೈಸಿದರು.ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರು‌, ಕೇಕ್ ಕತ್ತರಿಸಿ, ಸಂಭ್ರಮಿಸಿ, ಹುಟ್ಟು ಹಬ್ಬದ ನಿಮಿತ್ತ ಅನ್ನಸಂತರ್ಪಣೆ ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್,ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲ್ತಾಫ್,ಅರ್ಬಾಜ್ ಖಾನ್,ಶಿವಕುಮಾರ್, ಇಮ್ತೀಯಾಜ್, ಪ್ರದೀಪ್, ಸುಹೇಲ್, ಹಾರೂನ್,ರಿಯಾಜ್, ನವೀನ್ ಕುಮಾರ್ ಸಿಆರ್ ಸೇರಿದಂತೆ ಇತರರಿದ್ದರು.

ವರದಿ :ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!