Welcome to jagruthibelaku   Click to listen highlighted text! Welcome to jagruthibelaku
Tuesday, October 13, 2026
HomeUncategorizedಕಣ್ಣು ದಾನ ಮಾಡಿದ ಅಂಬ್ಯುಲೇನ್ಸ್ ಚಾಲಕ,ರಾಮ್ ಬಾಬು.

ಕಣ್ಣು ದಾನ ಮಾಡಿದ ಅಂಬ್ಯುಲೇನ್ಸ್ ಚಾಲಕ,ರಾಮ್ ಬಾಬು.

ವಿಜಯನಗರ (ಜಾಗೃತಿ ಬೆಳಕು ಸುದ್ದಿ)

ಹೊಸಪೇಟೆಯಲ್ಲಿ ಮಾನವೀಯತೆ ಮೆರೆದ ಕುಟುಂಬ, ಮಗನ ಸಾವಿನ ದುಃಖದಲ್ಲೂ ನೇತ್ರದಾನ ಮಾಡಿದ ಕುಟುಂಬ..

ಆಂಬುಲೆನ್ಸ್ ಚಾಲಕ ರಾಮ್ ಬಾಬು (44) ಅಕಾಲಿಕ ನಿಧನರಾಮ್ ಬಾಬು ಅವರ ಎರಡು ಕಣ್ಣುಗಳ ದಾನದಿಂದ್ದ,ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನೇತ್ರದಾನ…

ಬಳ್ಳಾರಿ ವಿಮ್ಸ್ ನೇತ್ರ ಬ್ಯಾಂಕ್‌ಗೆ ಕಣ್ಣುಗಳ ದಾನನಿವೃತ್ತ ಆಂಬುಲೆನ್ಸ್ ಚಾಲಕ ಬಾಬುರಾವ್ ಕುಟುಂಬದಿಂದ ಮಾದರಿ ಕಾರ್ಯಭಗತ್ ಸಿಂಗ್ ರಕ್ತದಾನಿಗಳ ಸಂಘದ ಕೆ.ಎಂ. ಸಂತೋಷ್ ಕುಮಾರ್ ನೇತೃತ್ವದಲ್ಲಿ ನೇತ್ರದಾನಕ್ಕೆ ನೆರವು…

ಸತ್ತ ಮೇಲೂ ಬದುಕಿದ ಹೊಸಪೇಟೆಯ ಆಂಬುಲೆನ್ಸ್ ಚಾಲಕ ರಾಮ್ ಬಾಬು: ಎರಡು ಕಣ್ಣುಗಳ ದಾನದಿಂದ ಇಬ್ಬರ ಬಾಳಿಗೆ ಬೆಳಕು

ಒಬ್ಬ ವ್ಯಕ್ತಿ ಸತ್ತ ನಂತರವೂ ಬದುಕಿರಬಹುದು ಎನ್ನುವ ಮಾತಿಗೆ ಇದೊಂದು ಜೀವಂತ ಉದಾಹರಣೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂದು ನಡೆದಿದೆ.

ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ರಾಮ್ ಬಾಬು (44) ಇಂದು ಅಕಾಲಿಕ ನಿಧನ ಹೊಂದಿದರು.ಮಗನನ್ನು ಕಳೆದುಕೊಂಡ ದುಃಖದಲ್ಲೂ ಬಾಬುರಾವ್ ಕುಟುಂಬ ಮಹಾನ್ ಮಾನವೀಯತೆ ಮೆರೆದಿದೆ. ಮೃತ ರಾಮ್ ಬಾಬು ಅವರ ಎರಡೂ ಕಣ್ಣುಗಳನ್ನು *ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಯ ನೇತ್ರ ಬ್ಯಾಂಕ್‌ಗೆ ದಾನ* ಮಾಡುವ ಮೂಲಕ ಇಬ್ಬರು ಅಂಧ ವ್ಯಕ್ತಿಗಳ ಬಾಳಿಗೆ ಬೆಳಕಾಗಿದ್ದಾರೆ.ಈ ಮಹತ್ಕಾರ್ಯಕ್ಕೆ *ಹೊಸಪೇಟೆಯ ಭಗತ್ ಸಿಂಗ್ ರಕ್ತದಾನಿಗಳ ಸಂಘದ ಅಧ್ಯಕ್ಷರಾದ ಕೆ.ಎಂ. ಸಂತೋಷ್ ಕುಮಾರ್* ಅವರು ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ಜಮೀರ್ ಸೇತುವೆಯಾದರು. ಅವರು ಕೂಡಲೇ ಹೊಸಪೇಟೆಯ ರೋಟರಿ ಉಚಿತ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಮತ್ತು ಬಳ್ಳಾರಿ ವಿಮ್ಸ್ ನೇತ್ರ ಘಟಕದ ತಜ್ಞ ವೈದ್ಯರ ತಂಡವನ್ನು ಸಂಪರ್ಕಿಸಿದರು.ವೈದ್ಯರ ತಂಡ ಹೊಸಪೇಟೆಗೆ ಆಗಮಿಸಿ, ರಾಮ್ ಬಾಬು ಅವರ ಮನೆ ಮುಂಭಾಗದಲ್ಲೇ ತಂದೆ, ತಾಯಿ, ಮಡದಿ, ಮಕ್ಕಳು ಮತ್ತು ಸಹೋದರರ ಸಮ್ಮುಖದಲ್ಲಿ ಅತ್ಯಂತ ಗೌರವಯುತವಾಗಿ ನೇತ್ರ ಸಂಗ್ರಹ ಪ್ರಕ್ರಿಯೆ ನೆರವೇರಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಅವರು, “ಗೆಳೆಯ ರಾಮ್ ಬಾಬು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ . ಇಂದು ರಾಮ್ ಬಾಬು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕಣ್ಣುಗಳ ಮೂಲಕ ಇಬ್ಬರ ಪ್ರಪಂಚವನ್ನು ನೋಡುತ್ತಾ ಅವರು ಬದುಕಿರುತ್ತಾರೆ. ರಾಮ್ ಬಾಬು ಮಗನನ್ನು ಕಳೆದುಕೊಂಡರೂ ಕಣ್ಣು ದಾನ ಮಾಡಿದ ಕುಟುಂಬದ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಲಿ” ಎಂದು ಆಶಿಸಿದರು.ರಾಮ್ ಬಾಬು ಅವರು ತಮ್ಮ ತಂದೆಯಂತೆ ಆಂಬುಲೆನ್ಸ್ ಚಾಲಕರಾಗಿ ನೂರಾರು ರೋಗಿಗಳಿಗೆ ಜೀವದಾನ ಮಾಡಿದ್ದರು.

ವರದಿ :-ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!