ವಿಜಯನಗರ/ಹೊಸಪೇಟೆ, ಜಾಗೃತಿ ಬೆಳಕು ನ್ಯೂಸ್

ಮಾ, 17.ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿ ತಮ್ಮ ಪ್ರೀತಿಯ ನಟನಿಗೆ ನಮನ ಸಲ್ಲಿಸಿದರು.ಕಾರ್ಯಕ್ರಮದ ಅಂಗವಾಗಿ ಅಭಿಮಾನಿಗಳಿಗೆ ಪ್ರಸಾದ ರೂಪದಲ್ಲಿ ಪುನೀತ್ ಅವರಿಗೆ ಇಷ್ಟವಾಗಿದ್ದ ಪಲಾವ್ ಮತ್ತು ಚಿಕನ್ ಊಟವನ್ನು ವಿತರಿಸಲಾಯಿತು. ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಸಿದ ದೃಶ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.ವಿಶೇಷವಾಗಿ, ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಮಾಲೆ ಧರಿಸುವ ಸಂಪ್ರದಾಯದಂತೆ, ಕೊಪ್ಪಳ ಮೂಲದ ಹನುಮಂತ ಯಂಬ ಅಭಿಮಾನಿಯೊಬ್ಬರು ಪುನೀತ್ ಅವರ ಪುತ್ತಳಿಯ ಮುಂದೆ ಮಾಲೆ ಧರಿಸಿ ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದ ಘಟನೆ ಗಮನಸೆಳೆಯಿತು.

ಈ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಪುನೀತ್ ಅಭಿಮಾನಿಗಳಾದ ಕಿಚಿಡಿ ವಿಶ್ವ, ಜೋಗಿ ಕಾಮನ್ ಮ್ಯಾನ್, ಹೊನ್ನೂರ್ ವಳಿ ಗುರುಗಳು (ದಿಲ್ಲಿ ಸಾಹೇಬ್) ಸೇರಿದಂತೆ ಅನೇಕರು ಶ್ರದ್ಧೆಯಿಂದ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಸೇವಾ ಮನೋಭಾವ ಮತ್ತು ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು.

ಜೋಗಿ ಕಾಮನ್ ಮ್ಯಾನ್ ಹಾಗೂ ಬಂಗಾರ ಬುಡ್ಡಿಚಿತ್ರ ತಂಡ ಪುನೀತ್ ಪುತ್ಥಳಿಯ ಮುಂದೆ ತಮ್ಮ ಚಿತ್ರ ಯಶಸ್ವಿಗೋಸ್ಕರ ಪ್ರಾರ್ಥಿಸಿ ಚಿತ್ರದ ಪ್ರಚಾರ ಮಾಡಿದರು.
ವರದಿ :ಮಹಮ್ಮದ್ ಗೌಸ್
