Welcome to jagruthibelaku   Click to listen highlighted text! Welcome to jagruthibelaku
Friday, May 22, 2026
Homeಹೊಸಪೇಟೆಎಸ್.ಎಫ್.ಸಿ ಯೋಜನೆಯಡಿ ಅರ್ಜಿ ಆಹ್ವಾನ,!

ಎಸ್.ಎಫ್.ಸಿ ಯೋಜನೆಯಡಿ ಅರ್ಜಿ ಆಹ್ವಾನ,!

ವಿಜಯನಗರ(ಹೊಸಪೇಟೆ), ಜಾಗೃತಿ ಬೆಳಕು ನ್ಯೂಸ್

ಮೇ.22:ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಂ.ಬಿ.ಬಿ.ಎಸ್, ಬಿ.ಇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ರೂ.50000 ಮೀರದಂತೆ ಸಹಾಯಧನ ಮತ್ತು ನಗರಸಭೆ ವ್ಯಾಪ್ತಿಗೆ ಬರುವ ವಿಕಲಚೇತನರಿಗೆ ಶ್ರವಣ ಸಾಧನ ವಿತರಣೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನವಾಗಿದೆ.ಫಲಾನುಭವಿಗಳು ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅರ್ಜಿದಾರರ ಕುಟುಂಬದ ಆದಾಯ ಕುರಿತು ಮತ್ತು ಇತರೆ ಯಾವುದೇ ದಾಖಲೆಗಳ ತಪ್ಪು ಮಾಹಿತಿ ನೀಡಿ ಯೋಜನೆಯಡಿ ಸೌಲಭ್ಯ, ಸಹಾಯಧನವನ್ನು ಪಡೆಯಲು ಮುಂದೆ ಬಂದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಅರ್ಹ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಇಲಾಖೆ https://www.hospetcity.mrc.gov.in/en/home ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತ ಶಿವಕುಮಾರ್ ತಿಳಿಸಿದ್ದಾರೆ.

ವರದಿ :ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!