Welcome to jagruthibelaku   Click to listen highlighted text! Welcome to jagruthibelaku
Saturday, May 9, 2026
Homeಸಂಡೂರುಕರ್ನಾಟಕ ದರ್ಶನ’ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ.

ಕರ್ನಾಟಕ ದರ್ಶನ’ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ.

ಕರ್ನಾಟಕ ದರ್ಶನ’ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ – ಸಂಡೂರಿನಿಂದ 120 ಎಸ್‌ಸಿ–ಎಸ್‌ಟಿ ವಿದ್ಯಾರ್ಥಿಗಳ ಐದು ದಿನಗಳ ಪ್ರವಾಸ

ಸಂಡೂರು, ( ಜಾಗೃತಿ ಬೆಳಕು ನ್ಯೂಸ್ )

2025–26ನೇ ಸಾಲಿನ ‘ಕರ್ನಾಟಕ ದರ್ಶನ’ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದಡಿ ಸಂಡೂರು ತಾಲೂಕಿನ ಸರ್ಕಾರಿ ತಾಲೂಕಿನ ವಿವಿಧ ಶಾಲೆಗಳಿಂದ ಒಟ್ಟು ಸುಮಾರು 120 ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಭಾಗವಹಿಸಿದ್ದು, ಇವರಲ್ಲಿ ಎಸ್‌ಸಿ 58 ಹಾಗೂ ಎಸ್‌ಟಿ 62 ವಿದ್ಯಾರ್ಥಿಗಳು ಸೇರಿದ್ದಾರೆ.ಐದು ದಿನಗಳ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ.ಈ ಪ್ರವಾಸಕ್ಕೆ ಸಂಡೂರಿನ ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಚಾಲನೆ ನೀಡಲಾಗಿದ್ದು, ಸಂಡೂರು ತಾಲೂಕಿನ ತಹಶೀಲ್ದಾರರಾದ ಶ್ರೀ ಅನಿಲ್ ಕುಮಾರ್ ಜಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಐ.ಆರ್. ಅಕ್ಕಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಹಸಿರು ನಿಶಾನೆ ತೋರಿಸುವ ಮೂಲಕ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶರಣಬಸಪ್ಪ ಕರಿಶೆಟ್ಟಿ, ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಯಾಳವಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾಗರಾಜ ಬಂಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ತಮ್ಮಪ್ಪ ಎಲ್.ಎಚ್, ಛತ್ರಪತಿ ಶಿವಾಜಿ ವಿದ್ಯಾಮಂದಿರ ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ್, ನೋಡಲ್ ಅಧಿಕಾರಿಯಾದ ಮಂಜುನಾಥ್ ಹಾದಿಮನಿ, ಬಿಆರ್‌ಪಿ, ಇಸಿಒ ಗೂಳಪ್ಪ ಬೆಳ್ಳಕಟ್ಟೆ, ಸಿಆರ್‌ಪಿ ಶಾಂತಕುಮಾರ್, ಮಾರ್ಗದರ್ಶಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.ಈ ಐದು ದಿನಗಳ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರವಾಸಿ ತಾಣಗಳ ಪರಿಚಯ ಮಾಡಿಸುವ ಉದ್ದೇಶ ಹೊಂದಿದ್ದು, ಅವರ ಜ್ಞಾನ ವಿಸ್ತರಣೆಗೂ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ :ಮಹಮ್ಮದ್ ಖಾಸಿಂ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!