ಹೊಸಪೇಟೆ:(ಜಾಗೃತಿ ಬೆಳಕು ನ್ಯೂಸ್)
ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ವಿಶ್ವ ಗುರು ಬಸವೇಶ್ವರ ಬೃಹತ್ ಭವನ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ 25 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಿ ಶಾಸಕ ಗವಿಯಪ್ಪನವರು ಸಮಾಜಕ್ಕೆ ಗೌರವ ಹಾಗೂ ಅನುಕೂಲ ಕಲ್ಪಿಸಿದ್ದಾರೆ.

ಈ ಮಹಾತರ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ ವೀರಶೈವ ಲಿಂಗಾಯತ ಸಮಾಜ ,ಬೇಡ ಜಂಗಮ ಸಮಾಜ ಹಾಗೂ ಇತರೆ ಸಮಾಜಗಳ ಮುಖಂಡರು, ಶಾಸಕರಿಗೆ ಗೌರವ ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿ ಸನ್ಮಾನಿಸಿ ಗೌರವಿಸಿದರು. ಸಮುದಾಯ ಭವನವು ಸಮಾಜದ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಕಾರ್ಯಕ್ರಮಗಳ ಅನುಕೂಲತೆಗೆ ಸದುಪಯೋಗಲಿದೆ .ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಬೇಡ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷರಾದ ಎಸ್.ಎಂ. ಕಾಶಿನಾಥಯ್ಯ ಪ್ರಧಾನ ಕಾರ್ಯದರ್ಶಿಗಳಾದ ಎ.ಎಂ. ಬಸವರಾಜ್ ಮಲ್ಲಿಕಾರ್ಜುನಯ್ಯ ರೇವಣಸಿದ್ದಯ್ಯ . ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ರವಿಶಂಕರ್ ಚಂದ್ರಶೇಖರ್ ಶಾಸ್ತ್ರಿ ,ಸುರೇಶ್ ಚಿಕ್ಕ ಮಠ ಹಾಗೂ ಸಮಾಜದ ಹಿರಿಯರು ಸದಸ್ಯರು ಉಪಸ್ಥಿತರಿದ್ದರು.
ವರದಿ :ಮಹಮ್ಮದ್ ಗೌಸ್
