ಜಾಮೀಯ ಮಸ್ಜಿದ್ ಹಾಗೂ ಶಾದಿಮಹಲ್ ಕಮಿಟಿ ಚಿತ್ತವಾಡ್ಗಿ ಮತ್ತು ಅಶ್ವಿನಿ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ.
ಹೊಸಪೇಟೆ: ಜಾಗೃತಿ ಬೆಳಕು ನ್ಯೂಸ್
ನಗರದ ಚಿತ್ತವಾಡ್ಗಿ ಶಾದಿಮಹಲ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಹಾಗೂ ಜಾಮೀಯ ಮಸ್ಜಿದ್ ಹಾಗೂ ಶಾದಿಮಹಲ್ ಕಮಿಟಿ ಚಿತ್ತವಾಡ್ಗಿ ಮತ್ತು ಅಶ್ವಿನಿ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ ನೇತ್ರಲಕ್ಷ್ಮಿ ವೈದ್ಯಾಲಯದ ವೈದ್ಯರುಗಳಾದ ಡಾಕ್ಟರ್ ಶ್ರೀನಿವಾಸ್ ದೇಶ ಪಾಂಡೆ ರವರು ಕಣ್ಣುಗಳ ಮಹತ್ವವನ್ನು ಕುರಿತು ಮಾತನಾಡುತ್ತಾ ಅನಾವಶ್ಯಕವಾಗಿ ರಾತ್ರಿ ಹೊತ್ತಿನಲ್ಲಿ ಮೊಬೈಲ್ ಹಾಗು ಲ್ಯಾಪ್ ಟಾಪ್ ಗಳನ್ನು ನೊಡಬಾರದು. ಇದರಿಂದ ಕಣ್ಣಿನ ಸಾಮರ್ಥ್ಯ ನಶಿಸಿ ಹೋಗುತ್ತದೆ ಹಾಗು ಇಂತಹ ಶಿಬಿರಗಳಲ್ಲಿ ಆಗಮಿಸಿ ಕಣ್ಣಿನ ಪೊರೆಯನ್ನು ತಪಾಸಣೆ ಮಾಡಿಸಿಕೊಳ್ಳಬೇಕು, ಹಾಗೂ ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳ ಕಣ್ಣುಗಳನ್ನು ಪ್ರತಿ ವರ್ಷ ತಪಾಸಣೆಗೊಳಪಡಿಸಬೇಕು ಹಾಗೂ ಯಾವುದೇ ರೀತಿಯ ಅರಳು, ಕಸ, ಕಡ್ಡಿ ಕಣ್ಣಿನಲ್ಲಿ ಬಿದ್ದಾಗ ಯಾವುದೇ ರೀತಿಯ ಸ್ವಯಂ ಪ್ರೇರಿತರಾಗಿ ಚಿಕಿತ್ಸೆ ತೆಗೆದುಕೊಳ್ಳಬಾರದು, ಯಾವುದೇ ರೀತಿಯ ಕಣ್ಣಿಗೆ ಸಂಬಂಧಪಟ್ಟ ಔಷಧಿಗಳನ್ನು ತೆಗೆದುಕೊಳ್ಳಬಾರದು ವೈದ್ಯರನ್ನು ಸಂಪರ್ಕಿಸಿ ನಂತರವೇ ಚಿಕಿತ್ಸೆ ತೆಗೆದುಕೊಳ್ಳಬೇಕು. ನಂತರ ೪೦ ವರ್ಷ ದಾಟಿದ ಪ್ರತಿಯೊಬ್ಬರೂ ಕಣ್ಣಿನ ಒತ್ತಡವನ್ನು ಪರೀಕ್ಷಿಸಿಕೊಳ್ಳಬೇಕು ಹಾಗೂ ಶುಗರ್ ಬಂದವರು ಪ್ರತಿ ವರ್ಷ ಕಣ್ಣಿನ ರೆಟಿನಾವನ್ನು ತಪಾಸಣೆಗೊಳಪಡಿಸಬೇಕು ಎಂದು ಕಣ್ಣಿನ ಸುರಕ್ಷತೆಯ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಒಟ್ಟು ೫೫೦ ಜನರು ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡು ಅದರಲ್ಲಿ ೧೧೦ ಜನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದು. ಹಾಗೂ ೧೫೦ ಜನರಿಗೆ ಕನ್ನಡಕವನ್ನು ಉಚಿತವಾಗಿ ವಿತರಣೆ ಮಾಡಿದರು.
ಇದೇ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಏನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಜನಸೇವೆಯೇ ಜನಾರ್ದನ ಸೇವೆ ಎನ್ನುವ ನಾಣ್ಣುಡಿಯಂತೆ ಗಂಡು, ಹೆಣ್ಣು ಬಡವ, ಶ್ರೀಮಂತ, ಜಾತಿ, ಧರ್ಮ,ಮಾನವ ಹಲವಾರು ಅಂಗಗಳಲ್ಲಿ ಕಣ್ಣುಗಳು ಅತ್ಯಂತ ಮಹತ್ವ ಕಾರ್ಯನಿರ್ವಹಿಸುತ್ತೆ ಆದಕಾರಣ ಬಡವರಿಗೆ ಅನುಕೂಲ ಆಗಲಿ ಎಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಮೌಲ್ವಿಗಳಾದ ಅಬುಬಕರ್, ನಗರಸಭಾ, ಸದಸ್ಯರಾದ ರಫೀಕ್, ಖಾಜಾ ಹುಸಸೇನ್ ನಿಯಾಜಿ, ಚಾಂದ್ ಬಾಷ, ಇಂತಿಯಾಜ್, ಜಾಕೀರ್, ಕರೆಂಗಲಿ ನಜೀರ್, ಮೆಹಬೂಬ ಸಾಬ್, ಹಾಫಿಸಾಬ್ ಗಳಾದ ಹನೀಫ್, ನೇತ್ರಲಕ್ಷ್ಮಿ ವೈದ್ಯಾಲಯ ಅಶ್ವಿನಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಗೂ ನೂರಾರು ಶಿಬಿರಾರ್ಥಿಗಳು ಹಾಗೂ ಅವರ ಪಾಲಕರು ಪೋಷಕರು ಉಪಸ್ಥಿತರಿದ್ದರು.
ವರದಿ :-ಮಹಮ್ಮದ್ ಗೌಸ್
