Welcome to jagruthibelaku   Click to listen highlighted text! Welcome to jagruthibelaku
Monday, May 25, 2026
Homeವಿಜಯನಗರ ಜಿಲ್ಲೆಕಾಳಸಂತೆ ಅಕ್ಕಿ ಸಾಗಣೆ ಬಯಲು: 7.54 ಲಕ್ಷ ಮೌಲ್ಯದ 325 ಕ್ವಿಂಟಲ್ ಅಕ್ಕಿ ವಶ.!

ಕಾಳಸಂತೆ ಅಕ್ಕಿ ಸಾಗಣೆ ಬಯಲು: 7.54 ಲಕ್ಷ ಮೌಲ್ಯದ 325 ಕ್ವಿಂಟಲ್ ಅಕ್ಕಿ ವಶ.!

ಹೊಸಪೇಟೆ/ ವಿಜಯನಗರ :-ಜಾಗೃತಿ ಬೆಳಕು ನ್ಯೂಸ್

ಅಕ್ರಮವಾಗಿ ಕಾಳಸಂತೆಗೆ ಸಾಗಣೆ ಮಾಡಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.ದಿನಾಂಕ 24-05-2026 ರಂದು ಕೊಪ್ಪಳ ಕಡೆಯಿಂದ ಹೊಸಪೇಟೆ ಕಡೆಗೆ ಬರುತ್ತಿದ್ದ ತಮಿಳುನಾಡು ಮೂಲದ TN 52/AC-4807 ಸಂಖ್ಯೆಯ 16 ಚಕ್ರದ ಎಸ್‌ಟಿಎಸ್ ಹೆಸರಿನ ಗೂಡ್ಸ್ ವಾಹನವನ್ನು ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದರು.ಪರಿಶೀಲನೆಯ ವೇಳೆ ವಾಹನದಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಒಟ್ಟು 325 ಕ್ವಿಂಟಲ್ ಅಕ್ಕಿ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 7,54,232 ರೂ. ಎಂದು ಅಂದಾಜಿಸಲಾಗಿದೆ. ತಕ್ಷಣವೇ ಅಕ್ಕಿ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಯಿತು.

ಈ ಸಂಬಂಧ ಆಹಾರ ನಿರೀಕ್ಷಕರಾದ ಅಜಿತ್ ಅವರು ಟಿ.ಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗುನ್ನೆ ಸಂಖ್ಯೆ 0028/2026 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.

ಅಕ್ರಮವಾಗಿ ಕಾಳಸಂತೆಗೆ ಅಕ್ಕಿ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಜಯನಗರ ಜಿಲ್ಲೆಯ ಉಪ ನಿರ್ದೇಶಕರಾದ ಶ್ರೀ.ರಿಯಾಜ್ ರವರು ತಿಳಿಸಿದ್ದಾರೆ.ಆಹಾರ ಧಾನ್ಯಗಳ ಅಕ್ರಮ ಸಾಗಣೆ ಹಾಗೂ ಕಾಳಸಂತೆ ತಡೆಗೆ ಇಲಾಖೆ ಮುಂದಿನ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವರದಿ : ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!