ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಿ. ಎಲ್. ರಾಣಿ ಸಂಯುಕ್ತರವರಿಂದ ಜಾನಿಮಾಜ್, ಕುರಾನ್ ಹಾಗೂ ತಜ್ಬಿ ಕೊಡುಗೆಗೆ ಮುಸ್ಲಿಂ ಜನಾಂಗದಲ್ಲಿ ಮೆಚ್ಚುಗೆ.

ವಿಜಯನಗರ / ಹೊಸಪೇಟೆ (ಜಾಗೃತಿ ಬೆಳಕು ನ್ಯೂಸ್)
ಮುಸ್ಲಿಂರ ಅತ್ಯಂತ ಪವಿತ್ರವಾದ ರಂಜಾನ್ ತಿಂಗಳು ಇದು ಉಪವಾಸ (ರೋಜಾ), ಪ್ರಾರ್ಥನೆ ಮತ್ತು ಆತ್ಮಶುದ್ಧಿಯ ಸಮಯವಾಗಿದೆ. ಮುಂಜಾನೆಯಿಂದ (ಸೆಹಿರಿ ) ಸೂರ್ಯಾಸ್ತದವರೆಗೆ (ಇಫ್ತಾರ್) ಆಹಾರ-ನೀರು ಸೇವಿಸದೆ ಉಪವಾಸ ಆಚರಿಸಿ, ಕುರಾನ್ ಪಠಣ ಮಾಡುತ್ತಾರೆ. ಇದು ಸ್ವಯಂ ನಿಯಂತ್ರಣ, ದಾನ ಮತ್ತು ಸಹಾನುಭೂತಿಯನ್ನು ಕಲಿಸುತ್ತದೆ, ಅಂತಿಮವಾಗಿ ಈದ್ ಅಲ್-ಫಿತರ್ ಹಬ್ಬದೊಂದಿಗೆ ಕೊನೆಗೊಳ್ಳುತ್ತದೆ.

ಈ ಪವಿತ್ರ ದಿನದಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ರಾಣಿ ಸಂಯುಕ್ತರವರು ನಗರದ ಎಲ್ಲಾ ಜಾಮಿಯಾ ಮಸೀದಿಗಳಿಗೆ ಜಾನಿಮಾಜ್, ಕುರಾನ್ ಹಾಗೂ ತಸ್ಬಿಹ್ ಗಳ ಸೇವಾ ಕೊಡುಗೆಯನ್ನು ನೀಡಿದ್ದಾರೆ, ಅವರು ಮಾತನಾಡಿ ಅ ಅಲ್ಲಾಹ್ ನ್ ಪ್ರೇರಣೆಯಿಂದ ನಾನು ಈ ಸೇವೆಗೈದಿದ್ದೇನೆ, ರಂಜಾನ್ ಮತ್ತು ಯುಗಾದಿ ಹಬ್ಬಗಳು ಭಾವೈಕ್ಯತೆ ಹಬ್ಬಗಳು ಎರಡು ಹಬ್ಬಗಳು ಒಟ್ಟಾಗಿ ಬರೋದು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹ ಬಾಳ್ವೆಯನ್ನ ಎತ್ತಿ ಹಿಡಿಯುತ್ತದೆ ಎಂಬುದು ಇದರ ಸಂದೇಶವಾಗಿದೆ. ರಂಜಾನ್ ಮತ್ತು ಯುಗಾದಿ ಹಬ್ಬಗಳು ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಮತ್ತು ಸೋದರತ್ವ ಬೆಳೆಸುವ ಶಕ್ತಿಯನ್ನು ಹೊಂದಿದೆ ವಿಭಿನ್ನ ಧರ್ಮಗಳ ಹಬ್ಬಗಳು ಒಟ್ಟಿಗೆ ಬರುವುದು ಸಮಾಜದಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಕಾಪಾಡಲು ಪೂರಕವಾಗಿವೆ. ಯುಗಾದಿ ಹಬ್ಬವು ಹಿಂದು ಪಂಚಾಂಗದಂತೆ ಹೊಸ ವರ್ಷದ ಆರಂಭವಾಗಿದ್ದರೆ ರಂಜಾನ್ ಮುಸ್ಲಿಂರ ಪವಿತ್ರ ಹಬ್ಬವಾಗಿದೆ ಈ ಎರಡು ಹಬ್ಬಗಳ ಆಚರಣೆಯು ವಿಜಯನಗರ ಕ್ಷೇತ್ರದ ಸಾಂಸ್ಕೃತಿಕ ಪರಂಪರೆಯಲ್ಲಿ ಅನ್ಯನತೆಯನ್ನು ಪ್ರತಿಬಿಂಬಿಸುತ್ತದೆ.

ರಂಜಾನ್ ಸಮಯದಲ್ಲಿ ಮುಸ್ಲಿಂ ಬಾಂಧವರು ಮುಂಜಾನೆಯಿಂದ ಸೂರ್ಯಸ್ತದವರಿಗೂ ಉಪವಾಸ ಮಾಡಿ ದೇವರ ಬಳಿ ಉತ್ತಮ ಆರೋಗ್ಯ ಶಾಂತಿ ಸಹ ಬಾಳ್ವೆಗಾಗಿ ಪ್ರಾರ್ಥನೆ ಮಾಡುತ್ತಾರೆ ಪ್ರಾರ್ಥನೆ ಮತ್ತು ದಾನ ಧರ್ಮದಲ್ಲಿ ತೊಡಗಿರುವಾಗ ಮಸೀದಿಗಳಲ್ಲಿ ಅರಾಧನೆಗೆ ಅನುಕೂಲವಾಗುವಂತೆ ಪ್ರಾರ್ಥನೆಗೆ ಬಳಸುವ ಜಾನಿಮಜ್ ಪವಿತ್ರ ಕುರಾನ್, ಹಾಗೂ ತಸ್ವಿಹ್ ಗಳನ್ನು ನೀಡಲಾಗಿದೆ, ಸರ್ವರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ಸರ್ವಧರ್ಮಿಯರು ಅವರ ಈ ಕೆಲಸಕ್ಕೆ ಕೃತಜ್ಞತೆ ಸಲ್ಲಿಸುವ ಮೂಲಕ ಜಾಮಿಯಾ ಮ್ಯೂಸಿಕ್ ಕಮಿಟಿಯ ಸರ್ವ ಸದಸ್ಯರು ಮತ್ತು ಮುಸ್ಲಿಂ ಮುಖಂಡರಾದ ಬಡ ವಲಿ, ಸೈಯದ್ ಖದರ್ ರಫಾಯಿ, ರವರು ಸನ್ಮಾನ ಮಾಡುವ ಮೂಲಕ ಗೌರವಿಸಿದರು.
ವರದಿ :ಮಹಮ್ಮದ್ ಗೌಸ್
