ಸವಿತಾ ಸಮಾಜದ ವೃತ್ತಿ ಮಹತ್ವದ ಬಗ್ಗೆ ರೀಲ್ಸ್ ಮಾಡಿದ ಇದ್ರಿಸ್ ಸೈನ್ ಮತ್ತು ತಂಡಕ್ಕೆ ಮೆಚ್ಚುಗೆ ಹಾಗೂ ಇದ್ರಿಸ್ ಸೈನ್ ಹಾಗೂ ಅವರ ತಂಡಕ್ಕೆ ಗೌರವ ಸನ್ಮಾನ.!
ಬಳ್ಳಾರಿ : ಜಾಗೃತಿ ಬೆಳಕು ನ್ಯೂಸ್
ಸವಿತಾ ಸಮಾಜವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ, ಕಾಯಕವೇ ಕೈಲಾಸವೆಂದು ನಂಬಿ ಸಮಾಜದ ಸ್ವಚ್ಛತೆ, ಸೌಂದರ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವ ಸಮುದಾಯವಾಗಿದೆ.
ಈ ಸಮಾಜವು ಕ್ಷೌರ ಕಲೆ, ಮಂಗಲವಾದ್ಯ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿ (ಕೇಶಮುಂಡನ ಇತ್ಯಾದಿ) ಅವಶ್ಯಕ ಸೇವೆಗಳನ್ನು ಒದಗಿಸುವ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಅವಿಭಾಜ್ಯ ಅಂಗವಾಗಿದೆ. ಕೇವಲ ಕ್ಷೌರ ಮಾತ್ರವಲ್ಲದೆ, ಮಂಗಳವಾದ್ಯ ನುಡಿಸುವುದು, ವಿವಾಹ, ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಇವರ ಸೇವೆ ಅವಶ್ಯಕವಾಗಿದೆ.ಇವರ ಸಾಮಾಜಿಕ ಸೇವೆಯನ್ನು ಮನಗಂಡು ಇದ್ರಿಸ್ ಹಾಗೂ ಅವರ ತಂಡ ಸವಿತಾ ಸಮಾಜದ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಉತ್ತಮ ಸೇವೆ ಸಲ್ಲಿಸುವ ಸವಿತಾ ಸಮಾಜಕ್ಕೆ ಪ್ರಾಮುಖ್ಯತೆ ನೀಡಲಾಗಿತ್ತು ಹಾಗಾಗಿ ಇದ್ರಿಸ್ ಸೈನ್ ಹಾಗೂ ಅವರ ತಂಡದವರಿಗೆ ಬಳ್ಳಾರಿ ಸಹಿತ ಸಮಾಜದಿಂದ ಸನ್ಮಾನ್ ಮಾಡುವ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿಕರ್ನಾಟಕ ರಾಜ್ಯ ಸವಿತಾ ಸಮಾಜದ ಸದಸ್ಯ ಎಚ್ ತಿಪ್ಪಣ್ಣ, ಜಿಲ್ಲಾಧ್ಯಕ್ಷ ಎಂ ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ಆರ್. ಶೇಕ್ ಅಣ್ಣಾ, ಮಾಜಿ ಜಿಲ್ಲಾ ಅಧ್ಯಕ್ಷರಾದಆರ್. ರಾಕೇಶ್, ಜಿಲ್ಲಾ ಗೌರವಾಧ್ಯಕ್ಷರಾದ ವೆಂಕಟೇಶ್, ನಗರ ಅಧ್ಯಕ್ಷರಾದ ಉಮೇಶ,ಕಾರ್ಯದರ್ಶಿ ಲಿಂಗಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮನೋರಂಜನೆಯ ಹಾಗೂ ಇಲ್ಲಸಲ್ಲದ ವಿಡಿಯೋಗಳನ್ನು ಮಾಡುವುದು ನುಡಿದ್ದೇವೆ ಆದರೆ ನಮ್ಮ ಸಮಾಜದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿ ವಿಡಿಯೋ ಮಾಡುವ ಮೂಲಕ ನಮ್ಮ ಸಮಾಜಕ್ಕೆ ನಮ್ಮ ವೃತ್ತಿಗೆ ಗೌರವಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಯಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸದಸ್ಯ ಎಚ್ ತಿಪ್ಪಣ್ಣ, ವ್ಯಕ್ತಪಡಿಸಿದರು..
