ವಿಜಯನಗರ :ಹೊಸಪೇಟೆ – ಜಾಗೃತಿ ಬೆಳಕು ನ್ಯೂಸ್
ಗಾದಿಗನೂರು ಗ್ರಾಮ
ಅಡುಗೆ ಸಿಲಿಂಡರ್ ಸ್ಪೋಟ, ಒಂದೇ ಕುಟುಂಬದ 8 ಜನರಿಗೆ ಗಾಯ, ಇಬ್ಬರು ಗಂಭೀರ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಬೆಳಗಿನ ಜಾವ ಅಡುಗೆ ಸಿಲಿಂಡರ್ ಸ್ಪೋಟ ಗೊಂಡಿರುವ ಘಟನೆ ನಡೆದಿದೆ,ಸ್ಪೋಟದ ರಭಸಕ್ಕೆ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಎಂಟು ಜನರಿಗೆ ಗಾಯಗಳಾಗಿದ್ದು ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ
ವಕೀಲ ಹಾಲಪ್ಪ, ಸಹೋದರ ಮೈಲಾರಪ್ಪ ಸೇರಿದಂತೆ ಒಂದೇ ಕುಟುಂಬದವರು ಎಂದು ತಿಳಿದ ಬಂದಿದೆ, ಚಿಕಿತ್ಸೆಗೆ ಹತ್ತಿರದ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ, ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ವರದಿ :-ಮಹಮ್ಮದ್ ಗೌಸ್
