ವಿಜಯನಗರ :ಹೊಸಪೇಟೆ, ಜಾಗೃತಿ ಬೆಳಕು ನ್ಯೂಸ್
ನಗರದ ೨೭ ನೇ ವಾರ್ಡನಲ್ಲಿ ಶ್ರೀ ಬನ್ನಿ ಮಹಾಕಾಂಳಿ ದೇವಸ್ಥಾನದ ನೂತನ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಭಾಗವಹಿಸಿ ಉದ್ಘಾಟಿಸಿ.ಮಾತನಾಡಿದ ಅವರು ನಾಡಿನ ಸಮಸ್ತ ಜನತೆಗೆ ನಾಡ ಹಬ್ಬವಾದ ದಸರಾ ಹಾಗು ವಿಜಯದಶಮಿಯ ಹಾರ್ಧಿಕ ಶುಭಾಷಯಗಳನ್ನು ತಿಳಿಸಿದರು.


ಹಾಗು ಭಗವಂತನ ಕೃಪೆಯಿಂದ ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಿ ಸುಖ ಶಾಂತಿ ಸಂತೋಷ, ಸಂಪತ್ತು, ಸೌಹಾರ್ಧತೆ, ಪ್ರೀತಿ ಪ್ರೇಮ ವಾತ್ಸಲ್ಯ ದಿಂದ ತುಂಬಿ ತುಳುಕುವಂತಾಗಲಿ ಎಂದು ಪ್ರಾರ್ಥಿಸಿದರು.ಇದೇ ಸಂಧರ್ಭದಲ್ಲಿ ೨೭ ನೇ ವಾರ್ಡಿನ ನಗರಸಭಾ ಸದ್ಯಸರಾದ ಕಲಂದರ್ ಅವರು ಹಾಗೂ ನಗರಸಭಾ ಸದ್ಯಸರಾದ ರಾಘವೇಂದ್ರ ಹಾಗೂ ಮುಖಂಡರಾದ ಪಿ.ವೆಂಕಟೇಶ,ಗುಜ್ಜಲ್ ಗಣೇಶ ಅವರು ಹಾಗೂ ವಾರ್ಡಿನ ಮುಖಂಡರು ಹಾಗೂ ಹಿರಿಯರು ಮಹಿಳೆಯರು ಭಾಗವಹಿಸಿದ್ದರು.
ವರದಿ :ಮಹಮ್ಮದ್ ಗೌಸ್
