ವಿಜಯನಗರ :ಹೊಸಪೇಟೆ. ಜಾಗೃತಿ ಬೆಳಕು ನ್ಯೂಸ್
ನಗರದ ಜಾಮೀಯ ಮಸ್ಜಿದ್ ಚಿತ್ತವಾಡ್ಗಿ ಇವರ ನೇತೃತ್ವದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರವಾದಿ ಮೊಹಮ್ಮದ್ ಅವರ ಜೀವನ ಚರಿತ್ರೆ ಕುರಿತು ಪ್ರಬಂಧ ಸ್ವರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವಕರು, ಮಕ್ಕಳು, ಹಿರಿಯರು, ಮುಖಂಡರು ಮಹಿಳೆಯರಿಗೆ ಬಹುಮಾನವನ್ನು ವಿತರಿಸುವ ಕರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಗು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಜಾತಿಗಣತಿ ಜಾಗೃತಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಯಿತುಕಾರ್ಯಕ್ರಮದ ನೇತೃತ್ವ ವಹಿಸಿದ ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿ ಹಾಗೂ ಜಾಮೀಯ ಮಸ್ಜಿದ್ ಚಿತ್ತವಾಡ್ಗಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಬಹುಮಾನಗಳನ್ನು ವಿತರಿಸಿ ನಂತರ ಮಾತನಾಡಿ ಮಹಮ್ಮದ್ ಪೈಗಂಬರರು ಕೇವಲ ಇಸ್ಲಾಂ ಧರ್ಮಕ್ಕೆ ಸೀಮಿತವಾಗಿರದೆ ಸರ್ವಧರ್ಮದವರನ್ನು ಪ್ರೀತಿಸುವ ಹಾಗೂ ಕರುಣಾಮಯಿಗಳು ಆಗಿ ಅಂದಿನ ಕಾಲಕ್ಕೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದರು.


ಹಾಗೂ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದರು ಮಹಮ್ಮದ್ ಪೈಗಂಬರರು ಸ್ವತಃ ಶಿಕ್ಷಕರಾಗಿ ಶಿಕ್ಷಣದ ಪ್ರಾಮುಖ್ಯತೆಯನ್ನು ಇಡೀ ಜಗತ್ತಿಗೆ ಸಾರಿ ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೇ ಎಲ್ಲರೂ ಸುಶಿಕ್ಷಿತರಾಗಬೇಕೆಂದಿದ್ದರು.

ಹಾಗೂ ಸರಳತೆ ಮತ್ತು ಬಡತನ ವಿನಮ್ರತೆಯಿಂದ ಜೀವನ ಸಾಗಿಸಿ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದ್ದರು ಅದರಲ್ಲೂ ವಿಶೇಷವಾಗಿ ಮೇಲು, ಕೀಳು, ಜಾತಿ,ಪಂಥ, ಗಂಡು, ಹೆಣ್ಣು, ಬಡವ, ಶ್ರೀಮಂತ, ಅಧಿಕಾರಿ, ಕೂಲಿ ಕಾರ್ಮಿಕ, ಕರಿ ಬಣ್ಣದವರು, ಬಿಳಿ ಬಣ್ಣದವರು, ಎಂದು ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತಿದ್ದರು ಇಂತಹ ಮಹಾನ್ ದಾರ್ಶನಿಕರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಜಾತಿಗಣತಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಧಿಕಾರಿಗಳಿಗೆ ಮುಕ್ತವಾಗಿ ಹಾಗು ನಿಖರವಾಗಿ ಮಾಹಿತಿಯನ್ನು ನೀಡಬೇಕೆಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಅಂಜುಮನ್ ಕಮಿಟಿಯ ಅಬುಬಕರ್ ಸಿದ್ದಿಕಿರವರು ಹಾಗು ಚಿತ್ತವಾಡ್ಗಿಯ ಜಾಮೀಯ ಮಸ್ಜಿದಿಯಲ್ಲಿ ಪ್ರಾರ್ಥನೆ ಪ್ರವಚನ ಮಾಡುವ ಅಫೀಸಾಬ್ ಹಾಗೂ ಜಾಮೀಯ ಮಸ್ಜಿದ್ ಪದಾಧಿಕಾರಿಗಳಾದ ಕರೆಂಗ್ಲಿ ನಜೀರ್, ಕೊಲ್ಮಿ ಜಾಕೀರ್ ಸಾಬ್, ಮಳ್ಗಿ ಆಜಾಮ್, ಚಾಂದ್ ಬಾಷ, ಇಂತಿಯಾಜ್, ಅಕ್ಬರ್ ಅಲಿ, ಮೆಹಬೂಬ್ ಸಾಬ್, ಮುಕ್ತಿಯಾರ್, ಮನ್ಸುರ್ ಹಾಗು ಸದ್ಯಸರು ಗುರುಗಳು ಮುಖಂಡರು ಯುವಕರು ಮಕ್ಕಳು ಹಿರಿಯರು ಮಹಿಳೆಯರು ಪಾಲಕರು ಪೋಷಕರು ಭಾಗವಹಿಸಿದ್ದರು.
ವರದಿ :-ಮಹಮ್ಮದ್ ಗೌಸ್
