Tuesday, March 24, 2026
HomeUncategorizedಪೈಗಂಬರ್ ಮೊಹಮ್ಮದ್ ರವರ ಜೀವನ ಚರಿತ್ರೆಯ ಬಗ್ಗೆ ಪ್ರವಚನ.

ಪೈಗಂಬರ್ ಮೊಹಮ್ಮದ್ ರವರ ಜೀವನ ಚರಿತ್ರೆಯ ಬಗ್ಗೆ ಪ್ರವಚನ.

ಜಮಾತೆ -ಎ -ಇಸ್ಲಾಮಿ ಹಿಂದ್ (ಮಹಿಳಾ ಘಟಕ) ಶೋಭಾ-ಎ- ಕವಾತೀನ್ ಮಹಿಳೆಯರ ನೇತೃತ್ವದಲ್ಲಿಇವರ ಆದೇಶದ ಮೇರೆಗೆ ನಗರದ ಅಂಜುಮನ್ ಶಾದಿ ಮಹಲ್ ನಲ್ಲಿ ಪೈಗಂಬರ್ ಮೊಹಮ್ಮದ್ ರವರ ಜೀವನ ಚರಿತ್ರೆಯ ಬಗ್ಗೆ ಪ್ರವಚನ ಮಾಡಿದರು.

ವಿಜಯನಗರ ಜಿಲ್ಲೆ (ಹೊಸಪೇಟೆ) ಜಾಗೃತಿ ಬೆಳಕು ನ್ಯೂಸ್

ಇಂದಿನ ದಿನಮಾನಗಳಲ್ಲಿ ಮಳೆ ಮಹಿಳೆಯರು ಮೊಬೈಲ್ ಫ್ಯಾಷನ್ ಇತ್ಯಾದಿ ದುಶ್ಚಟಗಳನ್ನು ಒಳಗೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದನ್ನೆಲ್ಲ ಸರಿಪಡಿಸುವ ಉದ್ದೇಶದಿಂದ ಮಾನವ ಕುಲದ ಮುಖ್ಯ ಕರ್ತವ್ಯವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ.

ನಗರದ ಅಂಜುಮನ್ ಶಾದಿ ಮಹಲ್ ನಲ್ಲಿ ಶೋಭಾ-ಎ- ಕವಾತೀನ್ ಮಹಿಳೆಯರ ನೇತೃತ್ವದಲ್ಲಿ 300 ಕ್ಕೂ, ಹೆಚ್ಚು ಮಹಿಳೆಯರು ಭಾಗವಹಿಸಿದ್ದು,ಇಸ್ಲಾಂ ಧರ್ಮದ ಗುರುಗಳಾದ ಪೈಗಂಬರ್ ಮೊಹಮ್ಮದ್ ರವರು ಮಾನವ ಕುಲಕ್ಕೆ ನೀಡಿರುವ ಸಂದೇಶವನ್ನು ಪ್ರವಚನ ಮಾಡುವ ಮೂಲಕ ಮಹಿಳೆಯರು ತಮ್ಮ ಜೀವನವನ್ನು ಯಾವ ತರಹ ರೂಪಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

ಕಾರ್ಯಕ್ರಮಗಳು : 60 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣು ಹಾಲು, ಹಾಗೂ ಶಾಂತಿನಿಕೇತನ್ ಶಾಲೆ, ನೇತಾಜಿ, ಶಾಲೆ,ಮಹಾವೀರ್ ಶಾಲೆ, ಶಿಕ್ಷಕರ ದಿನಾಚರಣೆ ದಿನದಂದು ಸಿಹಿ ತಿನಿಸು, ಪುಸ್ತಕಗಳು, ಸೀರತುನ್ ನಬಿ, ಮತ್ತು ಪೈಗಂಬರ್ ಮೊಹಮ್ಮದ್ ರವರ ಜೀವನ ಚರಿತ್ರೆಯ ಪುಸ್ತಕ ರೂಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಾಲೆಯ ಮುಖ್ಯ ಉಪಾಧ್ಯಾಯರಿಗೆ, ಪುಸ್ತಕ ವಿತರಿಸಲಾಯಿತು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ

ಭಾಗವಹಿಸಿದವರು : ತಸ್ಕಿಲ ಖಾನಂ (ಕಾರ್ಯದರ್ಶಿಗಳು)ಹುಮಾಯರ, ತಬಸ್ಸುಮ್ ಸುಲ್ತಾನ, ಮತ್ತು ವಾಲೆಂಟಿಯರ್ಸ್ ಆಗಿ ಮಹಿಳೆಯರು ಭಾಗವಹಿಸಿದ್ದರು.

ವರದಿ :-ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news