ಪೈಗಂಬರ್ ಮೊಹಮ್ಮದ್ ರವರ ಜನ್ಮದಿನಾಚರಣೆಗೆ ಶುಭಾಶಯ ಕೋರಿದ ಶಾಸಕ ಹೆಚ್ ಆರ್ ಗವಿಯಪ್ಪ.

ಮೊಹಮ್ಮದ್ ಪೈಗಂಬರ್ ರವರ 1500,ನೇ ಯಾ ಜಯಂತಿಯನ್ನು ನಗರದಲ್ಲಿ ಎಲ್ಲಾ ಮುಸ್ಲಿಂ ಸಮುದಾಯದವರು ಸೇರಿ ಸಡಗರ ಸಂಭ್ರಮದಿಂದ ಆಚರಿಸಿದರು.

ಹೊಸಪೇಟೆ :ಹಬ್ಬದ ನಿಮಿತ್ತ ಐ ಎಸ್ ಆರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣಿಗೆಯು ನಗರದ ಮುಖ್ಯ ರಸ್ತೆಗಳಿಂದ ಚಲಿಸಿ ಮೀರ್ ಆಲಂ ಚಿತ್ರಮಂದಿರದ ರಸ್ತೆಯಲ್ಲಿ ಬೃಹತ್ ವೇದಿಕೆ ರಚಿಸಿ ಕಾರ್ಯಕ್ರಮ ಸಮ ರೂಪಗೊಂಡಿತು.

ವೇದಿಕೆಯಲ್ಲಿ ಶಾಸಕರಾದ ಹೆಚ್ ಆರ್ ಗವಿಯಪ್ಪ ನವರು ಮುಸ್ಲಿಂ ಸಮುದಾಯದೊಂದಿಗೆ ಅತ್ಯಂತ ಅಭಿಮಾನ ಪ್ರೀತಿ ಇದೆ ನಾನು ಶಾಸಕನಾಗಲು ನನ್ನ ಸಹೋದರ ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ಅವರ ನೆರವಿನಿಂದಾಗಿ ನನಗೆ ಶಾಸಕನ ಲಭಿಸಿತು.
ನಂತರ ನಾನು ಸಂತರು ಕ್ವಾಜಾ ಗರೀಬ್ ನವಾಜ್ ದರ್ಗಾ ಗೆ ಭೇಟಿ ನೀಡಿ ನನ್ನ ಬೇಡಿಕೆಗಳನ್ನು ಸಲ್ಲಿಸಲಾಗಿ ಅವರ ಆಶೀರ್ವಾದದ ನನಗೆ ಲಭಿಸಿದ್ದು ನಾನು ಶಾಸಕನಾದೆ. ಹೀಗಾಗಿ ನಾನು ಈ ಸಮುದಾಯಕ್ಕೆ ಬೆಂಬಲವಾಗಿ ನಿಂತಿರುತ್ತೇನೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನ ಮಾಡಿದ್ದಕ್ಕೆ ಜಶ್ನೆ ಈದ್ ಮಿಲಾದ್ ಕಮಿಟಿಯ ಸರ್ವದ್ ಸದಸ್ಯರಿಗೆ ಅಭಿನಂದಿಸುತ್ತೇನೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ: ಜಸ್ಟ್ನೆ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷರು ಬಡವಲಿ, ಕಾರ್ಯಧ್ಯಕ್ಷರು ಸೈಯದ್ ಖಾದರ್ ರಫಾಯಿ, ನಿಸಾರ್. ಶಮ್ಶುದ್ದೀನ್, ಶಕ್ಷ, ಇಮ್ತಿಯಾಜ್, ಇಬ್ರಾಹಿಂ ಖಾನ್, ಸತ್ತರುಸಾಬ್. ಅಲ್ಲಾಭಕಾಶ್, ಜಿಲಾನ, ರಹಮತುಲ್ಲಾ, ಶೇಕ್ ಅಹಮದ್, ಭಾಷಾ, ಮೆಹಬೂಬ್, ಜಾಫರ್, ಮೈನುದ್ದೀನ್ ಕೆಕೆ. ಮಹಮದ್ ಇಮಾನ್ ನಿಯಾಜಿ, ದಾದಾಪೀರ್, ಆಡಿಟರ್ ಮೊಹಮ್ಮದ್, ಸೇರಿದಂತೆ,ಮುಸ್ಲಿಂ ಸಮಾಜದ ಗುರುಗಳು : ಅಬೂಬಕ್ಕರ್ ಮುಸ್ಲಿಂ ಗುರುಗಳು, ಇರ್ತಾದ್ ಅಹ್ಮದ್ ಮುಸ್ಲಿಂ, ಗುರುಗಳು, ಇಸಾರ್ ಹುಸೇನ್ ಮುಸ್ಲಿಮ ಗುರುಗಳು, ಇಸ್ಮಾಯಿಲ್ ಮೌಲಾನ ಮುಸ್ಲಿಂ ಗುರುಗಳು, ಮೂರ್ತಿ ರೋಷನ್ ಜಮೀರ್ ಮುಸ್ಲಿಂ ಗುರುಗಳು, ಜಿಲನ್ ಮುಸ್ಲಿಂ ಗುರುಗಳು, ಖಾಜಿ ಹಾಸಿನ್ ಮುಸ್ಲಿಂ ಗುರುಗಳು, ವೇದಿಕೆಯಲ್ಲಿ ನಗರಸಭೆ ಸದಸ್ಯರು ಸೇರಿದಂತೆ ಮುಖಂಡರು ಭಾಗವಹಿಸಿದರು.
ವರದಿ :ಮಹಮ್ಮದ್ ಗೌಸ್
