ಹೊಸಪೇಟೆ :ನಗರದ ಕುಂಬಾರಗಿರಿ ಪ್ರದೇಶವನ್ನು ಸ್ಲಂ ಎಂದು ಘೋಷಿಸುವಂತೆ ಪೌರಾಯುಕ್ತರಾದ ಶಿವಕುಮಾರ್ ರವರಿಗೆ ಸ್ಲಂ ಜನರ ಸಂಘಟನೆ ಕರ್ನಾಟಕ ಸಂಘದಿಂದ್ದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು ಸ್ಥಳ ಪರಿಶೀಲಿಸುವ ಮುಖಾಂತರ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಸಂಘದ ಅಧ್ಯಕ್ಷರಾದ ಎಚ್.ಶೇಷು, ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಕೈಲಾಸ್, ಉಪಾಧ್ಯಕ್ಷರಾದ ರಾಜಭಕ್ಷಿ ಬರಕಾತಿ, ಮಹಿಳಾ ಘಟಕದ ಅಧ್ಯಕ್ಷರಾದ ಎನ್.ಹುಲಿಗೆಮ್ಮ, ಉಪಾಧ್ಯಕ್ಷರಾದ ನೂರ್ ಜಹಾನ್, ಪ್ರಧಾನ ಕಾರ್ಯದರ್ಶಿ ಬೀನಾರೂಪಲತಾ, ಮುಖಂಡರಾದ ಶೇಕ್ ಮೆಹಬೂಬ್, ಬಾಷಾ, ಮಾಭಾಶ, ಕಾಗಿ ಉಮೇಶ್ ,ಕಾರ್ತಿಕ್, ಜಫ್ರೀನ್, ಮುನಿಯಪ್ಪ, ಎಲ್.ಪಾಂಡು ನಾಯಕ್, ದ್ವಾರಕೇಶ್, ಹಾಗೂ ಬಿ.ಟಿ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :-ಮಹಮ್ಮದ್ ಗೌಸ್
