KRS ಪಕ್ಷದ ವತಿಯಿಂದ ಸ್ಪರ್ಧಿಸುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ.

0
397

ಹೊಸಪೇಟೆ :- ಜಾಗೃತಿ ಬೆಳಕು ( ಬ್ರೇಕಿಂಗ್ ನ್ಯೂಸ್)

KRS ಪಕ್ಷದ ವತಿಯಿಂದ ಸ್ಪರ್ಧಿಸುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿ.

ಮಾ, 27 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ KRS ಪಕ್ಷವು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿದ್ದು, ಈಗಾಗಲೇ ರಾಜ್ಯಾದ್ಯಂತ 100 ಕ್ಕೂ ಅಧಿಕ ಕ್ಷೇತ್ರಗಳಿಗೆ ಅಭ್ಯರ್ಥಿ / ಸಂಭಾವ್ಯ ಅಭ್ಯರ್ಥಿಗಳನ್ನು KRS ಪಕ್ಷವು ಆಯ್ಕೆ ಮಾಡಿದೆ, ಕೆಳಕಂಡ ಅಭ್ಯರ್ಥಿಗಳನ್ನು ಪಕ್ಷವು ವಿಜಯನಗರ ಜಿಲ್ಲೆಯಿಂದ ಅಭ್ಯರ್ಥಿ / ಸಂಭಾವ್ಯ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ ಎಂದು ಲಿಂಗೇಗೌಡ ಹೆಚ್ಎಸ್ ರಾಜ್ಯ ಉಪಾಧ್ಯಕ್ಷರು KRS ಪಕ್ಷ ಇವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ / ಸಂಭಾವ್ಯ ಅಭ್ಯರ್ಥಿಯನ್ನಾಗಿ ಸಂತೋಷ್ ಕುಮಾರ್, ಈಡಿಗರ ಬಸಪ್ಪ ಇವರನ್ನು ಘೋಷಿಸಿದೆ.

ರಾಜ್ಯದ ಕೋಟ್ಯಂತರ ಜನ ಈಗಾಗಲೇ KRS ಪಕ್ಷದ ಜನಪರ ಕೆಲಸಗಳನ್ನು ಮೆಚ್ಚಿಕೊಂಡಿರುವ ಕಾರಣ ರಾಜ್ಯದ ಎಲ್ಲಾ ಮತ ಕ್ಷೇತ್ರಗಳಲ್ಲಿ KRS ಪಕ್ಷವನ್ನು ಬೆಂಬಲಿಸುವ ಮತದಾರರು ಗಣನೀಯ ಪ್ರಮಾಣದಲ್ಲಿ ಇದ್ದಾರೆ. KRS ಪಕ್ಷದ ನೀತಿ – ನಿಲುವುಗಳಿಗೆ ಬದ್ಧರಾಗಿ, ಪಕ್ಷದ ವತಿಯಿಂದ ಸ್ಪರ್ಧಿಸುವ ಸೂಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ. ವಿಜಯನಗರ ಜಿಲ್ಲೆಯ ಹಡಗಲಿ, ವಿಜಯನಗರ ಹಾಗೂ ಕೂಡ್ಲಿಗಿ ಕ್ಷೇತ್ರಗಳಲ್ಲಿ ಸದ್ಯ KRS ಪಕ್ಷದ ವತಿಯಿಂದ ಯಾವುದೇ ಅಭ್ಯರ್ಥಿಗಳು ಘೋಷಣೆ ಆಗಿಲ್ಲ, ಹಾಗಾಗಿ ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಬಯಸುವ ರಾಜಕೀಯ ಆಸಕ್ತರು ಈ ಅತ್ಯುತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು KRS ಪಕ್ಷವು ಅಶಿಸುತ್ತದೆ.
KRS ಪಕ್ಷದ ಪರಿಶ್ರಮದ ಫಲದಾಗಿ ಜೆಸಿಬಿ ವ್ಯಕ್ತಿಗಳ ಸುಳ್ಳನ್ನು ಅರ್ಥ ಮಾಡಿಕೊಂಡು ಈಗಾಗಲೇ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸ್ಪರ್ಧೆ ಮಾಡಲು ಸಿದ್ಧರಿದ್ದ ಅಭ್ಯರ್ಥಿಗಳನ್ನು KRS ಪಕ್ಷವು ಆಯ್ಕೆ ಮಾಡಿದೆ. ಹಾಗಾಗಿ KRS ಪಕ್ಷದ ನೂತನ, ಜನಪರ ರಾಜಕಾರಣದಲ್ಲಿ ನಂಬಿಕೆ ಇಟ್ಟು ಪಕ್ಷದ ಜೊತೆ ಕೈ ಜೋಡಿಸಲು ಹಾಗೂ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ಜನಪರ ಕಾಳಜಿ ಉಳ್ಳವರು ಮುಂದಾಗುವ ಮೂಲಕ ಕರ್ನಾಟಕದಲ್ಲಿ ಹೊಸದೊಂದು ರಾಜಕೀಯ ಕ್ರಾಂತಿಗೆ ನಾಂದಿ ಹಾಡಲು ಸಾಧ್ಯವಿದೆ.
ಹಾಗಾಗಿ, ಆಸಕ್ತರು KRS ಪಕ್ಷದ ವತಿಯಿಂದ ಸ್ಪರ್ಧಿಸುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ಅಲ್ಲದೇ, ಮತದಾರ ಬಂಧುಗಳು ತಮಗೆ ತೋಚಿದ ಯೋಗ್ಯ ವ್ಯಕ್ತಿಗಳನ್ನು KRS ಪಕ್ಷದ ವತಿಯಿಂದ ಸ್ಪರ್ಧೆ ಮಾಡುವಂತೆ ಪ್ರೇರೇಪಿಸಿ ಪಕ್ಷವು ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸುತ್ತಿರುವ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಬೇಕೆಂದು KAS ಪಕ್ಷವು ಅಪೇಕ್ಷಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾಗವಹಿಸಿದ್ದರು ಲಿಂಗೇಗೌಡ ರಾಜ್ಯ ಉಪಾಧ್ಯಕ್ಷರು,
ಸೋಮ ಸುಂದರ್ ಕಾರ್ಯದರ್ಶಿ,
ಚಂದ್ರಶೇಖರ್ ಎಸ್ ಸಿ ಎಸ್ ಟಿ ರಾಜ್ಯ ಅಧ್ಯಕ್ಷರು, ಸಂತೋಷ್, ಮಂಜುನಾಥ್ ಕೊಡಲೂರು, ಕರಿಬಸಪ್ಪ ಇದ್ದರು
.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here