International Coffee Day 2021: ಕಾಫಿ ಪ್ರಿಯರ ಫೇವರೆಟ್​ ದಿನ- ಕಾಫಿಯ ಈ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು? !

0
261

International Coffee Day 2021: ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿದ್ದೀರಾ ಮಿತವಾಗಿ ಕಾಫಿ ಕುಡಿದರೆ ನಿಮ್ಮ ದೇಹಕ್ಕೆ ಬಹಳ ಆರೋಗ್ಯಕರ. ಹೆಚ್ಚಿನ ಕಾಫಿ ಕುಡಿದರು ಅಪಾಯ ಕಟ್ಟಿಟ್ಟ ಬುತ್ತಿ . ಎದೆಯುರಿ, ಹೊಟ್ಟೆ ಉರಿ, ತ್ವರಿತ ಹೃದಯ ಬಡಿತ, ಅಥವಾ ಆಯಾಸದಂತಹ ಅಡ್ಡ ಪರಿಣಾಮಗಳು ಉಂಟಾಗುತ್ತವೆ.

ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿದ್ದೀರಾ ಮಿತವಾಗಿ ಕಾಫಿ ಕುಡಿದರೆ ನಿಮ್ಮ ದೇಹಕ್ಕೆ ಬಹಳ ಆರೋಗ್ಯಕರ. ಹೆಚ್ಚಿನ ಕಾಫಿ ಕುಡಿದರು ಅಪಾಯ ಕಟ್ಟಿಟ್ಟ ಬುತ್ತಿ . ಎದೆಯುರಿ, ಹೊಟ್ಟೆ ಉರಿ, ತ್ವರಿತ ಹೃದಯ ಬಡಿತ, ಅಥವಾ ಆಯಾಸದಂತಹ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಅದೇ ಲಿಮಿಟ್ ನಲ್ಲಿ ಕುಡಿದರೆ ನಿಮ್ಮ ದೇಹಕ್ಕೆ ಆಗುವ 5 ಪ್ರಯೋಜನಗಳು ಇಲ್ಲಿದೆ ನೋಡಿ.

01. ಒಂದು ಕಪ್ ಕಾಫಿ, ನಿಮ್ಮ ಮೂಡ್ ಬೆಟರ್!

ಹೌದು, ಕಾಫಿ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಯಾವುದೇ ಒತ್ತಡದಲ್ಲಿದ್ದರು ಒಂದು ಕಪ್ ಕಾಫಿ ನಿಮ್ಮ ಮನಸ್ಸನ್ನು ರಿಲಾಕ್ಸ್ ಮೂಡಿಗೆ ತರುತ್ತೆ. ನಿಯಮಿತವಾದ ಕಾಫಿ ಸೇವನೆಯು ಸಂತೋಷ, ದಯೆ, ವಾತ್ಸಲ್ಯ, ಸ್ನೇಹ, ಶಾಂತಿ ಮತ್ತು ಹೆಚ್ಚಿನ ಸಂತೋಷದಂತಹ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುತ್ತದೆ ಎಂದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ. ದಿನಕ್ಕೆ 3ರಿಂದ 4 ಬಾರಿ ಕಾಫಿ ಕುಡಿಯುವುದರಿಂದ ನಿಮ್ಮ ಖಿನ್ನತೆಯನ್ನು ದೂರ ಮಾಡಬಹುದಾಗಿದೆ.

02. ಕಾಫಿಯಲ್ಲಿ ಹೆಚ್ಚಿರುತ್ತೆ ಉತ್ಕರ್ಷಣ ನಿರೋಧಕಗಳು
(antioxidants)

ಕಾಫಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು (antioxidants) ಸಮೃದ್ಧವಾಗಿದ್ದು, ನಿಮ್ಮ ದೇಹದ ಜೀವಕೋಶಗಳನ್ನು ಹಾನಿಗೊಳಿಸಬಲ್ಲ ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ದೇಹದಲ್ಲಿ ಫ್ರೀ ರಾಡಿಕಲ್ ಗಳು ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಕಾಫಿಯಲ್ಲಿರುವ ಒಂದು ಪ್ರಮುಖ ಉತ್ಕರ್ಷಣ ನಿರೋಧಕ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಟ ಮಾಡುತ್ತೆ. ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿಯೇ ಕಾಫಿ ಕುಡಿಯುವುದರಿಂದ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು.

03. ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ.

ಕಾಫಿ ಕುಡಿಯುವುದರಿಂದ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಇದು ಟೈಪ್ – 2 ಡಯಾಬಿಟಿಸ್‌ ಅಪಾಯವನ್ನು ಕಡಿಮೆ ಮಾಡುತ್ತೆ. ದಿನನಿತ್ಯ ಕಾಫಿ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಬೆಳವಣಿಗೆಯ ಸಾಧ್ಯತೆಯನ್ನು ಪ್ರತಿ ಹೆಚ್ಚುವರಿ ಕಪ್‌ಗೆ 6% ರಷ್ಟು ಕಡಿಮೆ ಮಾಡಬಹುದು. ವಿಜ್ಞಾನಿಗಳು ಹೇಳುವಂತೆ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪರಿಣಾಮ, ಕ್ಯಾಲೊರಿಗಳನ್ನು ಸುಡುವ ಸಾಮರ್ಥ್ಯ ವನ್ನಕಾಫಿ ಹೊಂದಿದೆ. ನಮ್ಮ ಜಠರ, ಕರುಳಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸುತ್ತೆ.

04. ರೋಗಗಳನ್ನು ತಡೆಯುವ ಶಕ್ತಿ ಕಾಫಿಗಿದೆ

ಅಧ್ಯಯನಗಳ ಪ್ರಕಾರ ಕಾಫಿ ಸೇವನೆಯಿಂದ ಹೃದಯ ರೋಗ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತೆ. ಅಷ್ಟೇ ಅಲ್ಲದೆ ನಿಮ್ಮ ಮೆದುಳಿನ ಕಾರ್ಯವನ್ನು ಕಾಫಿ ಹೆಚ್ಚಿಸುತ್ತದೆ. ಒಂದು ಕಪ್ ಕಾಫಿ ಕುಡಿದರೆ 24 ಗಂಟೆಗಳ ಕಾಲ ನಿಮ್ಮ ಮೆದುಳು ಹೆಚ್ಚಾಗಿ ಕೆಲಸ ಮಾಡುತ್ತೆ. ಅಲ್ಲದೆ ನಿಮ್ಮ ಮೆಮೊರಿ ಪವರ್ ಹೆಚ್ಚಿಸುತ್ತದೆ.

05.ಉತ್ತಮ ಕ್ರೀಡಾಪಟುವಾಗಲು ಸಹಾಯ

ಹೌದು ಹೆಚ್ಚಿನ ವರ್ಕೌಟ್ ನಿಂದ ಚೇತರಿಸಿಕೊಳ್ಳಲು ಕಾಫಿ ನಿಮಗೆ ಬಹಳ ಸಹಾಯ ಮಾಡುತ್ತದೆ. ಕ್ರೀಡಾಪಟುವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಸ್ನಾಯು ನೋವುಗಳನ್ನ ಸಹ ಕಡಿಮೆ ಮಾಡುತ್ತದೆ. ವರ್ಕೌಟ್ ಗೂ ಮುನ್ನ ಕಾಫಿ ಕುಡಿದರೆ ನಿಮಗೆ ಹೆಚ್ಚಿನ ಎನರ್ಜಿಸಹ ಸಿಗುತ್ತದೆ.

LEAVE A REPLY

Please enter your comment!
Please enter your name here