CM Bommai: ಬೆಂಗಳೂರಿಗೆ ಗುಡ್ ನ್ಯೂಸ್, ಬಂಪರ್ ಸವಲತ್ತು ನೀಡಲು ಸರ್ಕಾರ ತಯಾರಿ

0
165

Bengaluru Development Fund: ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಅಭಿವೃದ್ಧಿಗೆ ಬರೋಬ್ಬರಿ 6000 ಕೋಟಿ ರೂಪಾಯಿ ಅನುದಾನ ನೀಡುವ ಆಲೋಚನೆಯಲ್ಲಿದ್ದಾರೆ. ಇದರಿಂದ ರಾಜಧಾನಿಯ ಮೇಲ್ಸೇತುವೆ, ಪೆರಿಫೆರಲ್ ರಿಂಗ್ ರಸ್ತೆ, ಪಾರ್ಕಿಂಗ್, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹೊಸ ಯೋಜನೆಗಳಿಗೆ ಅವಕಾಶ ಸಿಗಲಿದೆ..ಈ ವಿಶೇಷ ಪ್ಯಾಕೇಜ್ ನಿಂದ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ ಎನ್ನಲಾಗ್ತಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲದಿರುವಾಗ ಈ ವಿಶೇಷ ಪ್ಯಾಕೇಜ್ ಗೆ (Special Package) ಅನುದಾನ ಎಲ್ಲಿಂದ ಬರಲಿದೆ. ಅಲ್ಲದೇ ತರಾತುರಿಯಲ್ಲಿ ಈ ಪ್ಯಾಕೇಜ್ ಘೋಷಣೆಗೆ ಸರ್ಕಾರ ಮುಂದಾಗಿರೋದೇಕೆ, ಈ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಳೆದ ಎರಡು ವರ್ಷಗಳಿಂದ ವಿಶ್ವ ಶ್ರೇಷ್ಠ ನಗರ ಬೆಂಗಳೂರಿನ ಸಮಗ್ರ ಅಭಿವೃದ್ಧಿ (Bengaluru Development) ಕುಂಠಿತವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬಂದಿದೆ. ಈ ಜಗತ್ತಿಗೆ ಕಂಟಕ ವಾಗಿರುವ ಕೋವಿಡ್ (Covid 19)ನಿಂದಾಗಿ ಯಾವುದೇ ವಿಶೇಷ ಅನುದಾನವನ್ನ ಸರ್ಕಾರ ನೀಡಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದು‌ಹೋಗಿವೆ..ಚರಂಡಿಗಳ ಹೂಳು ತೆಗೆದಿಲ್ಲ… ಟ್ರಾಫಿಕ್ (traffic) ಸಮಸ್ಯೆ ಹೆಚ್ಚಾಗಿದೆ‌‌‌…ಟೆಂಡರ್ ಶ್ಯೂರ್ ಕಾಮಗಾರಿಗಳಿಗೆ ಹಣವಿಲ್ಲದೆ ಕುಂಟುತ್ತಾ ಸಾಗಿವೆ. ಪ್ರಸ್ತುತ ಬಿಜೆಪಿ (BJP)ನೇತೃತ್ವದ ಸರ್ಕಾರದಲ್ಲಿ‌ಹಣವಿಲ್ಲದೆ ಯಾವುದೇ ಹೊಸ ಯೋಜನೆಗಳನ್ನೂ‌ಘೋಷಿಸಿಲ್ಲ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ಅಲ್ಲಿಗೆ ನಿಂತಿದೆ.

ಇದೀಗ ಕೋವಿಡ್ ಮುಗಿಯುತ್ತಾ ಬಂದಿದ್ದು,ಸರ್ಕಾರ ಬೆಂಗಳೂರು ಅಭಿವೃದ್ಧಿಯತ್ತ ಗಮನಹರಿಸಿದೆ..ಶೀಘ್ರದಲ್ಲೇ ವಿಶೇಷ ಪ್ಯಾಕೇಜ್ ಘೋಷಣೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ರು..ಸುಮಾರು ೬ ಸಾವಿರ ಕೋಟಿ ರೂಗಳ ವಿಶೇಷ ಪ್ಯಾಕೇಜ್ ಇದಾಗಿದೆ ಎನ್ನಲಾಗ್ತಿದೆ..ಮೇಲ್ಸೇತುವೆ, ಪೆರಿಫೆರಲ್ ರಿಂಗ್ ರಸ್ತೆ, ಪಾರ್ಕಿಂಗ್, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹೊಸ ಯೋಜನೆಗಳಿಗೆ ಅವಕಾಶ ಸಿಗಲಿದೆ..ಈ ವಿಶೇಷ ಪ್ಯಾಕೇಜ್ ನಿಂದ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ ಎನ್ನಲಾಗ್ತಿದೆ…ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲ,ಎಲ್ಲಿಂದ ವಿಶೇಷ ಪ್ಯಾಕೇಜ್ ಸಾಧ್ಯ..?

ವಿಶೇಷ ಪ್ಯಾಕೇಜ್ ಹಿಂದಿದೆಯೇ ಬಿಬಿಎಂಪಿ‌ ಚುನಾವಣೆಯ ಲೆಕ್ಕಾಚಾರ..?

ಸರ್ಕಾರ ಘೋಷಿಸಲಿರುವ 6000 ಕೋಟಿಯ ವಿಶೇಷ ಪ್ಯಾಕೇಜ್ ಮೇಲೆ ಹಲವು ಅನುಮಾನಗಳಿವೆ..ಇನ್ನೂ‌ಬಜೆಟ್ ಘೋಷಣೆಯಾಗಿದ್ದ 9 ಸಾವಿರ ಕೋಟಿ ಅನುದಾನವನ್ನೇ ಸರಿಯಾಗಿ ನೀಡಿಲ್ಲ..ಸರ್ಕಾರದ ಬಳಿ ಹಣವಿಲ್ಲ. ಇಂಥಾ ವೇಳೆ ಯಾಕಿಷ್ಟು ತರಾತುರಿಯಲ್ಲಿ ಈ ವಿಶೇಷ ಪ್ಯಾಕೇಜ್ ಘೋಷಿಸಲು ಸಿಎಂ ಹೊರಟಿದ್ದಾರೆಂಬ ಪ್ರಶ್ನೆ ಎದುರಾಗಿದೆ. ಸಿಎಂ ವಿಶೇಷ ಪ್ಯಾಕೇಜ್ ಹಿಂದೆ ಬಿಬಿಎಂಪಿ‌ ಚುನಾವಣೆಯ ಲೆಕ್ಕಾಚಾರ ಇದೆ. ಪ್ರಸ್ತುತ ಬಿಬಿಎಂಪಿ ಕೋರ್ಟ್ ಅಂಗಳದಲ್ಲಿದೆ..ನ್ಯಾಯಾಲಯದಿಂದ ತೀರ್ಪು ಬಂದ ನಂತರ ತರಾತುರಿಯಲ್ಲಿ‌ಬಿಬಿಎಂಪಿಗೆ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ..

ಇದನ್ನೂ ಓದಿ: ಮುಂದಿನ ದಸರಾ ವೇಳೆಗೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲು 90 ನಿಮಿಷ ಸಾಕು..!

ಜನ ಸೆಳೆಯೋ ತಂತ್ರ ?

ಹಾಗಾಗಿ ವಿಶೇಷ ಪ್ಯಾಕೇಜನ್ನ ಘೋಷಣೆ ಮಾಡಿದ್ರೆ, ಸರ್ಕಾರದ ವಿರುದ್ಧವಾಗಿರುವ ಜನರನ್ನ ಸೆಳೆಯಬಹುದೆಂಬ ಉದ್ದೇಶವಿದೆ..ಬೆಂಗಳೂರು ಅಭಿವೃದ್ಧಿಯ ಹೆಸರಿನಲ್ಲಿ ಮತ್ತೊಮ್ಮೆ ಬಿಬಿಎಂಪಿ ಅಧಿಕಾರವನ್ನ ಹಿಡಿಯಬಹುದೆಂಬ ಆಸೆಯೂ ಇದೆ..ಬಿಬಿಎಂಪಿ ಮೇಲೆ ಹಿಡಿತ ಸಾಧಿಸಿದರೆ ಮುಂದೆ ಬರುವ ವಿಧಾನಸಭೆ ಚುನಾವಣೆಗಳಲ್ಲೂ ಯಶಸ್ಸು ಸಾದಿಸಬಹುದೆಂಬ ಲೆಕ್ಕಾಚಾರ  ಹಿಂದಿದೆ ಎನ್ನಲಾಗ್ತಿದೆ. ಹಾಗಾಗಿಯೇ ಖಜಾನೆಯಲ್ಲಿ ಹಣವಿಲ್ಲದಿದ್ರೂ ೬೦೦೦ ಸಾವಿರ ಪ್ಯಾಕೇಜ್ ಘೋಷಣೆಗೆ ಸರ್ಕಾರ ಮುಂದಾಗಿದೆ. ಜನರ ಮೂಗಿಗೆ ತುಪ್ಪ ಸವರೋಕೆ ಹೊರಟಿದ್ಯಾ? ಅನುಮಾನ ಕಾಡ್ತಾಯಿದೆ.

ಹಳೆ ಯೋಜನೆ, ಹೊಸ ಹೆಸರು

ಇನ್ನು ಕಳೆದ ಡಿಸೆಂಬರ್ ನಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಬೆಂಗಳೂರು ಮಿಷನ್ 2022 ಗೆ ಚಾಲನೆ ನೀಡಿದ್ದರು… ಬೆಂಗಳೂರಿನ ಮೂಲಭೂತ ಸೌಕರ್ಯ, ಪರಿಸರ, ಸಾರಿಗೆ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಇದನ್ನ ತಂದಿದ್ದರು..ಈ ಮಿಷನ್ ಗೆ ಅನುದಾನವೇ ಬಿಡುಗಡೆಯಾಗಿಲ್ಲ..ಮತ್ತೊಂದು ಕಡೆ ಯಡಿಯೂರಪ್ಪ ಕೂಡ ಅಧಿಕಾರದಿಂದ ಕೆಳಗಿಳಿದಿದ್ದಾರೆ..ಇದೀಗ ಅದೇ ಮಿಷನ್ ಪರ್ಯಾಯ ಹೆಸರಿನಲ್ಲಿ ಬೊಮ್ಮಾಯಿ ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಿದ್ದಾರೆ..ಕೋವಿಡ್ ನಿಂದ ಸರ್ಕಾರ ಭಾರೀ ಆದಾಯ ಕೊರತೆ ಎದುರಿಸುತ್ತಿದೆ. ಇಂಥ ಆರ್ಥಿಕ ಸಂಕಷ್ಟದಲ್ಲಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಣೆಯ ಅನಿವಾರ್ಯತೆ ಏನು ಎಂಬ ಅನುಮಾನ ಮೂಡಿದೆ…

ಒಟ್ನಲ್ಲಿ ಯಡಿಯೂರಪ್ಪ‌ ಚಾಲನೆ ನೀಡಿದ್ದ ಬೆಂಗಳೂರು ಮಿಷನ್ 2022 ಅಲ್ಲಿಗೇ ನಿಂತಿದೆ..ಈಗ ಹೊಸ ಪ್ಯಾಕೇಜ್ ಘೋಷಣೆಗೆ ಸಿಎಂ ಮುಂದಾಗಿದ್ದಾರೆ..ಸರ್ಕಾರದ ಬಳಿ ಹಣವೇ ಇಲ್ಲದಿರುವಾಗ ಈ ವಿಶೇಷ ಪ್ಯಾಕೇಜ್ ಅಗತ್ಯವಿತ್ತೇ..ಹಣವನ್ನೆಲ್ಲಿಂದ ತರ್ತಾರೆ ಅನ್ನೋ ಪ್ರಶ್ನೆ ಎದ್ದಿದೆ..ಇದೆಲ್ಲವೂ ಬಿಬಿಎಂಪಿ ಚುನಾವಣೆಗಾಗಿ ಸರ್ಕಾರ ಮಾಡ್ತಿರೋ ನಾಟಕ ಅಂತ ಜನಸಾಮಾನ್ಯರು ಮೂಗುಮುರಿಯುತ್ತಿದ್ದಾರೆ.. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿಎಸ್ ವೈ ಬೆಂಗಳೂರು ಮಿಷನ್ ಘೋಷಣೆ ಮಾಡಿದ್ದರು… ಈಗ ಬೊಮ್ಮಾಯಿಯಿಂದ ವಿಶೇಷ ಪ್ಯಾಕೇಜ್ ಘೋಷಣೆಗೆ ನಿರ್ಧಾರವಾಗಿದೆ.. ಇದು ಬೆಂಗಳೂರು ನಗರ ಅಭಿವೃದ್ಧಿ ಗೆ ಎಷ್ಟರಮಟ್ಟಿಗೆ ಸಹಕಾರಿ ಆಗಲಿದೆ ಎನ್ನುವುದನ್ನು ಕಾದುನೋಡಬೇಕು.

LEAVE A REPLY

Please enter your comment!
Please enter your name here