ಹೊಸೂರು ಗ್ರಾಮದಲ್ಲಿ ಮಕ್ಕಳ ಗ್ರಾಮಸಭೆ!!!

0
369

ಜಾಗೃತಿ ಬೆಳಕು – ಹೊಸಪೇಟೆ

ವಿಜಯನಗರ ಜಿಲ್ಲೆ ಹೊಸೂರು ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು ಮಕ್ಕಳ ಗ್ರಾಮಸಭೆಯ ಪ್ರಯುಕ್ತ ಪೂರ್ವಭಾವಿಯಾಗಿ ಪ್ರಭಾತಪೇರಿ ಅಭಿಯಾನವನ್ನು ಗ್ರಾಮ ಪಂಚಾಯತಿ ಸದಸ್ಯರು ಅಂಗನವಾಡಿ ಶಿಕ್ಷಕಿಯರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು ಮಕ್ಕಳ ಗ್ರಾಮಸಭೆ ದಿನ ಪ್ರಭಾತ್ ಪೇರಿ ಅಭಿಯಾನದಲ್ಲಿ ಸಂಗ್ರಹಣೆ ಗೊಂಡಿದ್ದ ಪೋಷಕರ ಮತ್ತು ಮಕ್ಕಳ ಅಭಿಪ್ರಾಯ ಮತ್ತು ಸಲಹೆಗಳನ್ನು ಓದುವುದರ ಮುಖಾಂತರ ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಲು ಕ್ರಮ

ತೆಗೆದುಕೊಳ್ಳುವ ಬಗ್ಗೆ ಸಣ್ಣಕ್ಕಿ ಲಕ್ಷ್ಮಣ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷರು ಮಾತನಾಡಿದರು ಕಲಿಕೆಯಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾಳಜಿ ವಹಿಸಬೇಕಾಗಿದೆ ಮಕ್ಕಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಲಿಕೆಯಲ್ಲಿ ಪಾಲ್ಗೊಳ್ಳಲು ಹಾಗೂ ಶಾಲೆಗೆ ಬರಲು ಸಲಹೆಗಳನ್ನು ನೀಡಿದರು ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಉತ್ಸಾಹವನ್ನು ತುಂಬಲು ನಾವು ಸ್ಪಂದಿಸುತ್ತೇವೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಸದಸ್ಯರು ಯಾವಾಗಲೂ ನಿಮ್ಮ ಜೊತೆಗೆ ಇರುತ್ತಾರೆ ಎಂದು ತಿಳಿಸಿದರು ಮುಂದಿನ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ಕಲಿಕೆಯಲ್ಲಿ ಮುಂದಿರಬೇಕು ಮಕ್ಕಳ ಕಲಿಕೆಯನ್ನು ನಮ್ಮ ಮುಂದೆ ಪ್ರದರ್ಶಿಸಬೇಕು ಅವಾಗಲೇ ನಮಗೆ ಖುಷಿ ಆಗುತ್ತದೆ ಎಂದು ತಿಳಿಸಿದರು


ಹಾಗೂ ಇದೇ ಸಂದರ್ಭದಲ್ಲಿ ಹೊಸೂರು ಶಾಲೆಯ ಶಿಕ್ಷಕರಾದ ಮಂಜಪ್ಪ ರವರು ಮಾತನಾಡಿ ಕೋವಿಡ್ 19ರ ಕಾರಣ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದಾರೆ ತುಂಬಾ ಅಂತರ ವಾಗಿದೆ ಮುಂದಿನ ದಿನಗಳಲ್ಲಿ ಸರಕಾರದ ಯೋಜನೆಗಳಂತೆ

ಉತ್ತಮವಾಗಿ ಕಲಿಸುತ್ತೇವೆ ಮತ್ತು ಸರ್ಕಾರದ ಆದೇಶದಂತೆ ಮಕ್ಕಳಿಗೆ ಮನೆಯಲ್ಲಿ ಬರೆದುಕೊಂಡು ಬರುವ ಕೆಲಸವನ್ನು ಹೆಚ್ಚಾಗಿ ನೀಡುವಂತಿಲ್ಲ ಹಾಗಾಗಿ ನಾವು ಮಕ್ಕಳಿಗೆ ಹೋಂವರ್ಕ್ ಹೆಚ್ಚಾಗಿ ನೀಡುತ್ತಿಲ್ಲ ಪ್ರಭಾತ್ ಪೇರಿ ಅಭಿಯಾನದಲ್ಲಿ ಪೋಷಕರು ಹಾಗೂ ಮಕ್ಕಳು ನೀಡಿರುವ ಅಭಿಪ್ರಾಯ ಸಲಹೆಗಳನ್ನು ವಿನಮ್ರತೆಯಿಂದ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು


ಹಾಗೂ ಹೊಸೂರು ಗ್ರಾಮ ಪಂಚಾಯತಿಗೆ ನೂತನವಾಗಿ ಪ್ರಭಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷರಾದ ಗಂಗಾಧರ ಜಿ ರವರಿಗೆ ಸನ್ಮಾನ ಮಾಡಲಾಯಿತು

ವರದಿ :-ಮೊಹಮ್ಮದ್. ಗೌಸ್

LEAVE A REPLY

Please enter your comment!
Please enter your name here