ಹೊಸಪೇಟೆ-ವಿಜಯನಗರ ಜಿಲ್ಲೆ
ವಿಜಯನಗರ ಜಿಲ್ಲೆಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ ನೀತಿಯಿಂದ ಪೆಟ್ರೋಲ್, ಡಿಜಲ್, ಅಡುಗೆ ಅನೀಲ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಭಾರತದಲ್ಲಿ 260% ಪ್ರತೀಷ್ಟಕಿಂತ ಕರ ವಸೂಲಿ ಮಾಡುವ ಮೂಲಕ ಸಾಮಾನ್ಯ ವರ್ಗದ ಮೇಲೆ ಬರೆ ಎಳೆದಂತಾಗಿದೆ ಪಂಚರಾಜ್ಯದ ಚುನಾವಣೆ ಮುಕ್ತಾಯದ ನಂತರ ಮಾನ್ಯ ಮೋದಿಯವರ ನಿಜಬಣ್ಣ ಮತ್ತೆ ಬಯಲಾಗಿದೆ.
ಎಲ್ಲಿಯವರೆಗೆ ಭಾರತ ಮುಕ್ತ ಭಾಜಪಾ ಸರ್ಕಾರ ಆಗುವುದಿಲ್ಲವೊ ದೇಶದ ಯುವಜನತೆ, ಸಾಮಾನ್ಯ ವರ್ಗವೂ ಪರಿತಪಿಸುವ ಪರಿಸ್ಥಿತಿ ನಿಲ್ಲುವುದಿಲ್ಲ. ಭಾಜಪಾವನ್ನು ಸಂಪೂರ್ಣವಾಗಿ, ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಿ, ದೇಶವನ್ನು ಇನ್ನೊಮ್ಮೆ ಮನುವಾದಿಗಳಿಂದ, ಕೋಮುವಾದಿಗಳಿಂದ ಸ್ವಾತಂತ್ರ್ಯ ನೀಡುವ ಕೆಲಸ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತದೆ!!ಜರ್ಮನಿಯ ಹಿಟ್ಲರ್ ಕೂಡ ಅವನ ದೇಶದ ಜನತೆಯ ಮೇಲೆ ಎಂದಿಗೂ ಭಾರವಾಗಿರಲಿಲ್ಲ, ಬದಲಿಗೆ ದೇಶದ ಜನರಿಗೆ ಔದ್ಯೋಗಿಕರಣ ಮೂಲಕ ಕೆಲಸ ನೀಡಿದ್ದಾರೆ.ಭಾರತ ದೇಶದಲ್ಲಿ ಹುಕುಂಶಾಹಿಯ ವಿರುದ್ಧ #ಹಮ್_ದೊ #ಹಮಾರೆ_ದೊ ನೀತಿಯ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೊರಾಡುವ ಬಲ ತೋರಿಸಬೇಕಾಗಿದೆ.
ಇಂದು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ವಿಜಯನಗರ ಜಿಲ್ಲಾ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್, ರಾಜ್ಯ ಉಪಾಧ್ಯಕ್ಷರಾದ ಸಿರಿಲ್ ಪ್ರಭು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಜಾಕ್, ಹನುಮ ಕಿಶೋರ್ಬಳ್ಳಾರಿ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಸಿದ್ದು ಹಳ್ಳಿ ಗೌಡ, ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್ ಹಾಗೂ ಎಲ್ಲ ಯುವ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.ಈ ಪ್ರತಿಭಟನೆಗೆ ಬಳ್ಳಾರಿ ಗ್ರಾಮೀಣ ಅಧ್ಯಕ್ಷರಾದ ಶಿವಯೋಗಿ, ಬ್ಲಾಕ್ ಅಧ್ಯಕ್ಷರಾದ ವಿನಾಯಕ್ ಶೆಟ್ಟರ್, ಕಾಂಗ್ರೆಸ್ ಮುಖಂಡರಾದ, ಇಮಾಮ್ ನಿಯಾಜಿ, ದೀಪಕ್ ಸಿಂಗ್. ಗುಜ್ಜಲ್ ನಾಗರಾಜ್, ನಿಂಬಗಲ್.ರಾಮಕೃಷ್ಣ,ರಾಘವೇಂದ್ರ ಹಿಟ್ನಾಳ್ ನಗರಸಭಾ ಸದಸ್ಯರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು.
ವರದಿ :-ಮೊಹಮ್ಮದ್ ಗೌಸ್