ಬೀದರ ಜಿಲ್ಲೆ (ಹುಮನಾಬಾದ್) ಬಿಗ್ ಬ್ರೇಕಿಂಗ್
PSI ರವಿಕುಮಾರ ನಿಂದ SDPI ಕಾರ್ಯದರ್ಶಿ ಮೇಲೆ ಅಮಾನವೀಯ ವಾಗಿ ಹಲ್ಲೆ..! ಪಿಎಸ್ಐ ವರ್ಗಾವಣೆ
SDPI ಜಿಲ್ಲಾ ಕಾರ್ಯದರ್ಶಿ ಮೇಲೆ PSI ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಕಲಬುರ್ಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ,
ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಜೂನಿಯರ್ ಕಾಲೇಜ ನಲ್ಲಿ ಘಟನೆ,
ಪಟ್ಟಣದ ಜುನಿಯರ್ ಕಾಲೇಜಿನಲ್ಲಿ ಪರೀಕ್ಷೆ ಮುಂಚೆ ಹಿಜಾಬ್ ವಿಚಾರವಾಗಿ ವಿದ್ಯಾರ್ಥಿನಿಯರ ಹಾಗೂ ಪ್ರಾಂಶುಪಾಲರ ನಡುವೆ ಗೊಂದಲ ಉಂಟಾಗಿತ್ತು ಎನ್ನಲಾಗಿದೆ ಈ ವೇಳೆ ಕಾಲೇಜಿಗೆ ತೆರಳಿದ SDPI ಜಿಲ್ಲಾ ಕಾರ್ಯದರ್ಶಿ ಎಮ್.ಡಿ ಮಕ್ಸುದ್ ಕಾಲೇಜಿನ ಪ್ರಾಂಶುಪಾಲರಿಗೆ ಭೇಟಿ ಮಾಡಿ ಆ ವಿಚಾರವಾಗಿ ಚರ್ಚಿಸಿ ವಿದ್ಯಾರ್ಥಿನಿಯರನ್ನು ಮನವೊಲಿಸಿ ಪರೀಕ್ಷೆ ಬರೆಯಲು ಕಳುಹಿಸಿದರು ನಂತರ ಪ್ರಾಂಶುಪಾಲರ ಜೊತೆ ಮಾತನಾಡಿ ಮರಳುತಿದ್ದ ವೇಳೆ ಪ್ರಾಂಶುಪಾಲರು ಪರೀಕ್ಷೆ ಸೂಕ್ಷ್ಮವಾಗಿ ನಡೆಯುತ್ತಿವೆ ಬನ್ನಿ ಅಂತ ಮತ್ತೆ ಕರೆದುಕೊಂಡು ಹೋಗಿ ತೋರಿಸಿದರು ಅದೆಲ್ಲ ನೋಡಿಕೊಂಡು ನಗು ನಗುತ್ತಲೇ ಮಾತನಾಡಿ ಮಕ್ಸುದ್ ತಿರುಗಿ ಬರುತ್ತಿದ್ದ ವೇಳೆ ವೇಗವಾಗಿ ವಾಹನ ದಲ್ಲಿ ಬಂದ ಪಿಎಸ್ಐ ರವಿಕುಮಾರ್ ಇಲ್ಲೇಕೆ ಬಂದಿದ್ದೀರಿ ಎಂದು ಪ್ರಶ್ನಿಸುತ್ತಾ ಹೊಡೆಯೋಕೆ ಪ್ರಾರಂಭಿಸಿದರು ಎಂದು ಜೊತೆಗಿದ್ದ ಮಕ್ಸುದ್ ಸ್ನೇಹಿತರು ತಿಳಿಸಿದ್ದಾರೆ,
ಸರ್ ಯಾಕೆ ಸರ್ ಹೊಡೆಯುತ್ತಿದ್ದೀರಿ ಎಂದು ಮಕ್ಸುದ್ ಪ್ರಶ್ನಿಸುತ್ತಿದ್ದಂತೆ ಠಾಣೆಗೆ ನಡಿ ಹೇಳುತ್ತೇನೆ ಎಂದು ವಾಹನದಲ್ಲಿ ಹಾಕಿಕೊಂಡು ಹೋಗಿ ವಾಹನ ದಿಂದ ಇಳಿಯುವಾಗ ಮತ್ತೆ ಅವರನ್ನು ಒದ್ದರು ಆಗ ಮಕ್ಸುದ್ ಅಸ್ವಸ್ಥನಾಗಿ ಬಿದ್ದರು ಅಲ್ಲಿಂದ ತಕ್ಷಣವೇ ಅವರನ್ನು ಹುಮನಾಬಾದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ನೋಡು ನೋಡುತಿದ್ದಂತೆ ಸಾವಿರಾರು ಯುವಕರು ಮಕ್ಸುದ್ ರನ್ನು ಭೇಟಿ ಮಾಡಲು ಬಂದು ಪಿಎಸ್ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸುತಿದ್ದರು ಸುದ್ದಿ ತಿಳಿದಂತೆ ಸ್ಥಳಕ್ಕೆ ಧಾವಿಸಿದ ಸಹಾಯಕ ವರಿಷ್ಟಾಧಿಕಾರಿಗಳು ಘಟನೆ ಕುರಿತು ತನಿಖೆ ನಡೆಸಿದರು ಮಕ್ಸುದ್ ಪರಿಸ್ಥಿತಿ ಗಂಭೀರ ವಾಗುತ್ತಿದ್ದಂತೆ ಅವರನ್ನು ಕಲಬುರ್ಗಿಯ ಬ್ರಹಮನಿ ಆಸ್ಪತ್ರೆಗೆ ವರ್ಗಾಯಿಸಲಾಯಿತು ಪೊಲೀಸ್ ವರಿಷ್ಟಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಇನ್ನೂ ಇದೀಗ ಪಿಎಸ್ಐ ರವಿಕುಮಾರ್ ರವರನ್ನು ತಕ್ಷಣವೇ ಹುಮನಾಬಾದ ನಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ ಇನ್ನೂ ಪಿಎಸ್ಐ ಮೇಲೆ ಪ್ರಕರಣ ದಾಖಲಾಗುತ್ತಾ..? ಪಿಎಸ್ಐ ರವರನ್ನು ಅಮಾನತ್ತು ಮಾಡುತ್ತಾರಾ..? ಅನ್ನೋದನ್ನೇ ಕಾದು ನೋಡಬೇಕಾಗಿದೆ.
ವರದಿ :-ಮೊಹಮ್ಮದ್ ಗೌಸ್