ಬಿಗ್ ಬ್ರೇಕಿಂಗ್
ವಿಜಯನಗರ ಜಿಲ್ಲೆ (ಹೊಸಪೇಟೆ)
ಬಳ್ಳಾರಿಯಿಂದ ಹೊಸಪೇಟೆ
ಮೂಲಕ ಗುಜರಾತಿಗೆ ಹೋಗುವ GJ-02 XX6155 ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು
ಪೊಲೀಸ್ ಅಧೀಕ್ಷಕರ ಕಾರ್ಯಾಲಯ ವಿಜಯನಗರ ಜಿಲ್ಲೆ. ಹೊಸಪೇಟೆ O: 18-03-2022
ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಚಿತ್ತವಾಡಗಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಆಧಾರದ ಮೇರೆಗೆ ಚಿತ್ತವಾಡಗಿ ಠಾಣೆ ಗುನ್ನೆ ನಂ. 16/2022 ಕಲಂ 3, 6(ಎ), 7 ಇ.ಸಿ ಯಾಕ್ಟ್-1955 ಸೆಕ್ಷನ್ 3, 4, 12, 18, 19 ಕರ್ನಾಟಕ ಆಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ-2016 ಸೆಕ್ಷನ್ 4, 6, 8 ಕರ್ನಾಟಕ ಅಗತ್ಯ ವಸ್ತುಗಳ ಪ್ರಕಟಣೆ ಆದೇಶ-1981 ಕಲಂ 420 ಐ.ಪಿ.ಸಿ ರಿತ್ಯ ಪ್ರಕರಣ ದಾಖಲಾಗಿರುತ್ತದೆ. ಇದೇ ದಿನ ಬೆಳಿಗ್ಗೆ 11.15 ಗಂಟೆ ಸುಮಾರಿಗೆ ಚಿತ್ತವಾಡಗಿಯ ಹುಡಾ ಸರ್ಕಲ್ ನಲ್ಲಿ ಸದರಿ ಲಾರಿಯನ್ನು ಆಹಾರ ನಿರೀಕ್ಷಕರು ಮತ್ತು ಪೊಲೀಸ್ ಅಧಿಕಾರಿಗಳು ಜಪ್ತು ಪಡಿಸಿಕೊಂಡು ಸದರಿ ಲಾರಿಯಲ್ಲಿದ್ದ ವ್ಯಕ್ತಿಗಳನ್ನು ವಿಚಾರಿಸಲಾಗಿ 1) ರಾಯಸಾಬ್‌ಗಿರಿ ತಂದೆ ರಾಜನಾರಾಯಣಗಿರಿ, ವ: 27 ವರ್ಷ, ಲಾರಿ ಚಾಲಕ, ವಾಸ ಕಮಲ್‌ಪುರ ಗ್ರಾಮ, ಉತ್ತರಪ್ರದೇಶ ರಾಜ್ಯ ಎಂದು ಹಾಗೂ 2) ನೀರಜ್ ಕುಮಾರ್ ತಂದೆ ರಾಜೇಂದ್ರ ಪ್ರಸಾದ್, ವ: 25 ವರ್ಷ, ಲಾರಿ ಕ್ಲೀನರ್, ವಾಸ ಕಮಲ್‌ಪುರ ಗ್ರಾಮ ಉತ್ತರಪ್ರದೇಶ ರಾಜ್ಯ ಅಂತಾ ತಿಳಿಸಿರುತ್ತಾನೆ. ಸದರಿ
ಲಾರಿಯನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ 50 ಕೆಜಿಯ 360 ಚೀಲಗಳು ಇದ್ದು ಒಟ್ಟು 180 ಕ್ವಿಂಟಾಲ್‌ಗಳು
ಇದ್ದು, ಒಟ್ಟು ಬೆಲೆ 2,70,000/- ರೂ. ಗಳಾಗಿರುತ್ತವೆ.
ಅವರಿಂದ ವಶಪಡಿಸಿಕೊಂಡ ಮಾಲಿನ ವಿವರಗಳು ಈ ಕೆಳಕಂಡಂತೆ ಇರುತ್ತದೆ.
1) 50 ಕೆಜಿಯ 360 ಚೀಲಗಳು, ಒಟ್ಟು 180 ಕ್ವಿಂಟಾಲ್‌ಗಳು, ಒಟ್ಟು ಮೊತ್ತ ಬೆಲೆ 2,70,000/- ರೂ. 2) ಒಂದು ಕಂಟೇನರ್ ಲಾರಿ ಅಂದಾಜು ಬೆಲೆ ರೂ. 10,00,000/
ಆರೋಪಿತರನ್ನು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು, ಪ್ರಕರಣದ
ತನಿಖೆ ಮುಂದುವರೆದಿರುತ್ತದೆ.
ಸದರಿ ಪ್ರಕರಣದ ಅಕ್ಕಿ ಮತ್ತು ಆರೋಪಿಗಳನ್ನು ವಶ ಪಡಿಸಿಕೊಳ್ಳುವಲ್ಲಿ ಡಿ.ಎಸ್.ಪಿ ಹೊಸಪೇಟೆ ರವರ ಮಾರ್ಗದರ್ಶನದಲ್ಲಿ ಜಯಪ್ರಕಾಶ್, ಪಿ.ಐ. ಚಿತ್ತವಾಡಗಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಶ್ರೀಮತಿ ಎನ್. ಸರೋಜ ಪಿಎಸ್‌ಐ, ಮಪಿಸಿ ಶಾರದಾಬಾಯಿ, ಹೆಚ್ಸಿ ರಾಜೇಶ್, ತಿರುಮಲೇಶ್, ಪಿಸಿ ಚಂದ್ರಶೇಖರ ರವರು ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಸದರಿ ತಂಡದ ಕಾರ್ಯವನ್ನು ಅರುಣ್ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ,
ವರದಿ :-ಮೊಹಮ್ಮದ್ ಗೌಸ್