ಸಚಿವರು.ಪ್ರಭು B. ಚೌಹಾಣ್ ರವರ ನೇತೃತ್ವದಲ್ಲಿ ರೈತರಿಗೆ ಸಂತೋಷದ ಸುದ್ದಿ!!!

0
255

ಬೀದರ ಜಿಲ್ಲೆ ಔರಾದ

ದಿನಾಂಕ: 02.03,2022 ರಂದು ಮಾನ್ಯ ಶ್ರೀ ಪಭು ಬಿ. ಚವ್ಹಾಣ, ಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ (PMKSY WDC 2.0) ಉದ್ಘಾಟಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಚಿವರು “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ” ಹಾಗೂ ಬಾದಲಗಾಂವ ತಾಂಡಾದಲ್ಲಿ ಕಾಮಗಾರಿಗಳ

ಮುಂದುವರೆದ ಕೃಷಿ ಇಲಾಖೆಯ ವಿವಿಧ ಯೋಜನೆಯಡಿ ರೈತ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳು, ತುಂತುರು ನೀರಾವರಿ ಘಟಕ, ತಾಡಪತಿಗಳು ಒಟ್ಟು 37 ರೈತರಿಗೆ ಸರಿಸೂಮಾರು 12 ಲಕ್ಷದ, ಸರಕಾರದ ಸಹಾಯಧನದಲ್ಲಿ ವಿತರಿಸಿದರು.

ಬಾಡಿಗೆ ಆಧಾರಿತ ಕೃಷಿ ಯಂತ್ರ ಧಾರೆ “ಇಂದಿರಾ ಗಾಂಧಿ ಸಂಜೀವಿನಿ ಸ್ತ್ರೀ ಶಕ್ತಿ” ಸಂತಪೂರ ಘಟಕಕ್ಕೆ 8 ಲಕ್ಷ ಸಹಾಯ ಧನದಲ್ಲಿ ಟ್ರಾಕ್ಟರ, ರೋಟೊವೇಟರ್‌ ಸೀಡ್‌ಲ್, ಎಂ ಬಿ ಪ್ರೊ ಮತ್ತು ಸಿಂಪರಣಾ ಯಂತ್ರ ವಿತರಿಸಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಸಮಗ್ರ ಕೃಷಿ ಪದ್ಧತಿ ಹಾಗೂ ರೈತರ ಆದಾಯ

ದ್ವಿಗುಣ, ಜಲಾನಯನ ಘಟಕಗಳ ಕುರಿತು ಕೆ.ವಿ.ಕೆ ಹಿರಿಯ ತೋಟಗಾರಿಕೆ ವಿಜ್ಞಾನಿ ಡಾ|| ಮಲ್ಲಿಕಾರ್ಜುನ

ಲಿಂಗದಳ್ಳಿ ಮತ್ತು ಇಲಾಖಾ ಅಧಿಕಾರಿಯವರಿಂದ ತರಬೇತಿ ನೀಡಲಾಯಿತು.

ಮುಖ್ಯಮಂತ್ರಿ ರೈತ ವಿಧ್ವನಿಧಿ ಯೋಜನೆಯಡಿ ಔರಾದ ತಾಲ್ಲೂಕಿಗೆ ಇಲ್ಲೆಯ ವರೆಗೆ 1387 ರೈತರ ಮಕ್ಕಳಿಗೆ ಒಟ್ಟು 322550/- ರೂಪಾಯಗಳು ನೇರ ವಿದ್ಯಾರ್ಥಿಗಳ ಬ್ಯಾಂಕ ಖಾತೆಗೆ ಜಮೆ ಯಾಗಿದ್ದು ಬೀದರ ಜಿಲ್ಲೆಯ ಒಟ್ಟು 12213) ವಿಧಾರ್ಥಿಗಳಿಗೆ 30077000/- ರೂಪಾಯಿಗಳು ಜಮೆ ಯಾಗಿರುತ್ತದೆ ಎಂದು ಮಾನ್ಯ ಸಚಿವರು ತಿಳಿಸುತ್ತಾ, ಅಮರೇಶ್ವರ ಪಿಯು ಕಾಲೇಜಿನ ಒಟ್ಟ ಐದು ವಿಧ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಮುಂಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಪ್ರಮಾಣ ಪತ್ರವನ್ನು ವಿತರಿಸಿದರು.

ಸದರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ತಾರಾಮಣಿ ಜಿ.ಎಚ್. ಉಪ ಕೃಷಿ ನಿರ್ದೇಶಕರು ಶ್ರೀ ಕೆಂಗೆಗೌಡ ಎನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಸಂತೋಷ ಹಜಾರಿ, ತಹಸೀಲ್ದಾರ ಶ್ರೀ ಅರುಣಕುಮಾರ ಕುಲಕರ್ಣಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಾಣಿಕರಾವ ಪಟೇಲ್, ಕೆ.ವಿ.ಕೆ ಹಿರಿಯ ತೋಟಗಾರಿಕಾ ತಜ್ಞರಾದ ಡಾ|| ಮಲ್ಲಿಕಾರ್ಜುನ ಲಿಂಗದಳ್ಳಿ, ಶ್ರೀ ಶಿವಕುಮಾರ ಘಾಟಿ ತಾಲ್ಲೂಕಾ ಅಧ್ಯಕ್ಷರು ಕ.ಸ.ನೌ.ಸಂಘ ಔರಾದ, ಸಹಾಯಕ ಕೃಷಿ ನಿರ್ದೇಶಕರಾದ ಅನ್ಸಾರಿ ಎಂ.ಎ.ಕೆ. ಕೃಷಿ ಅಧಿಕಾರಿಗಳಾದ ಶ್ರೀ ಕೃಷ್ಣ, ರಾಜೇಂದಕುಮಾರ, ಭೀಮರಾವ ಶಿಂದೆ, ಅಂಬರೀಷ, ಆನಂದ, ಆಶೋಕ ಮುಧಾಳೆ, ಇಂದಿರಾ, ಸೌಮ್ಯ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಗಿರಿಷ ಸೂರ್ಯವಂತಿ, ಕೃಷಿ ಅಧಿಕಾರಿ ಸಂತೋಷ ಪಾಟೀಲ, ಕೃಷಿ ಇಲಾಖೆಯ ಸಿಬ್ಬಂದಿ ವರ್ಗ, ಎಕಂಬಾ ಗ್ರಾಮ ಪಂಚಾಯತ ಸದಸ್ಯರು. ಬಾದಲಗಾಂವ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ತಾಲ್ಲೂಕಿನ ರೈತ ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು.

ವರದಿ :-ಸುಧೀರ ಕುಮಾರ ಬೀ ಪಾಂಡರೇ

LEAVE A REPLY

Please enter your comment!
Please enter your name here