ಸಿಂದಗಿ
ಜೈ ಜನ್ಮಭೂಮಿ ರಕ್ಷಣಾ ಪಡೆ (ನೂಂ) ಆರಿಫ್ ಮನಿಯರ್ ರಾಜ್ಯಾಧ್ಯಕ್ಷರು ಮಾಧ್ಯಮ ಘಟಕ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ
ರೈತ ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಬೆಂಬಲ ಬೆಲೆ ಸಿಗದೆ ಪರದಾಡುವ ರೈತರ ಕಷ್ಟ ಜೀವನದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತೇನೆ ಶ್ರಮದಿಂದ ಬೆಳೆದ ಬೆಳೆಗೆ ಒಂದೇ ಬೆಲೆ ಸಿಗದೆ ಪರದಾಡುತ್ತಾರೆ ಹೀಗಿರುವಾಗ ವ್ಯಾಪಾರಿಗಳ ಮಕ್ಕಳು ಕಾನ್ವೆಂಟ್ ಸ್ಕೂಲಿನಲ್ಲಿ ಕಲಿಯುತ್ತಾರೆ ರೈತರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಾರೆ ಇದರ ಬಗ್ಗೆ ನನ್ನದೊಂದು ವಿಶೇಷ ಟಿಪ್ಪಣಿ ಒಂದು ಚಿಕ್ಕ ಬಂಡಿ ಇಟ್ಟುಕೊಂಡು
ಚಾಹಾ.ಪಾನಿಪುರಿ,ಬೆಲಪುರಿ,ಗೋಬಿ ಮಂಚೂರಿ.ಇಟ್ಲಿ ಸಾಂಬಾರ್ ,ಬಾಳಿ ಹಣ್ಣು, ತರಕಾರಿ, ಹೀಗೆ ನಾನಾ ಬಗೆಯ ಬೀದಿ ಬದಿ ವ್ಯಾಪಾರ ಮಾಡುವವರು ತಮ್ಮ ಮಕ್ಕಳನ್ನ ಪ್ರಾವೇಟ್ ಸ್ಕೂಲ್ ಗಳಲ್ಲಿ ಕಾಲೇಜುಗಳಲ್ಲಿ ಓದಿಸುತ್ತಾರೆ ಸ್ವಂತ ಮನೆ ತಿರುಗಾಡುವಕ್ಕೆ ಸ್ವಂತ ಬೈಕ್ ಕೆಲವೊಬ್ಬರು ಕಾರು ಇಟ್ಟುಕೊಂಡಿರುತ್ತಾರೆ. ಒಬ್ಬ ಬೀದಿ ಬದಿ ವ್ಯಾಪಾರಿ ತನ್ನ ಒಂದು ಚಿಕ್ಕ ವ್ಯಾಪಾರದಿಂದ ಎಷ್ಟೆಲ್ಲಾ ಮಾಡುತ್ತಾನೆ ಅಂದ್ರೆ ಒಬ್ಬ ರೈತ ತನ್ನ 2 ರಿಂದ 4 ಎಕರೆ ಜಮೀನು ಇದ್ದರು ಯಾಕೆ ಸಾಲದಲ್ಲಿ ನರಳುತ್ತಾನೇ? ಯಾಕೆ ಅವನ ಮಕ್ಕಳು ಸರ್ಕಾರ ಶಾಲೆಗೆ ಹೋಗುತ್ತಾರೆ ಯಾಕೆ ಗುಡಿಸಲಿನಲ್ಲಿ ಜೀವನ ನಡೆಸುತ್ತಾನೆ 4 ಎಕರೆ ಜಮೀನು ಇದ್ದ ರೈತ ಒಂದು ಚಿಕ್ಕ ಪ್ರಮಾಣದ ವ್ಯಾಪಾರಿಗಿಂತ ಕನಿಷ್ಠನಾ.ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ ರೈತ ದೇಶದ ಬೆನ್ನೆಲಬು ಹೀಗೆ ರೈತನ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ ಇದು ಭಾಷಣ ಮಾಡುವದಕ್ಕೆ ಅಷ್ಟೇ ಚಂದ. ವಾಸ್ತವದಲ್ಲಿ ರೈತನಿಗೆ ಯಾವದೇ ರೀತಿಯ ಸ್ವಾತಂತ್ರ್ಯ ಇಲ್ಲ ಒಬ್ಬ ಪಾನಿ ಪುರಿ ಮಾರುವ ವ್ಯಕ್ತಿ ತನ್ನ ಪಾನಿಪುರಿ ಬೆಲೆ ನಿಗದಿ ಮಾಡಿರುತ್ತಾನೆ 10 ರೂಪಾಯಿಗೆ 5 ಪಾನಿಪುರಿ ಅಂತಾ ಒಬ್ಬ ಚಾ ಮಾರಾಟ ಮಾಡುವ ಮನುಷ್ಯ ತನ್ನ ಚಾದ ಬೆಲೆ 5 ರೂಪಾಯಿ ಅಂತ ಫಿಕ್ಸ್ ಮಾಡಿರುತಾನೆ. ಆದರೆ ರೈತ ತಾನು ಕಷ್ಟ ಪಟ್ಟು ಬೆಳೆದ ಬೆಳೆಗೆ ದಲ್ಲಾಳಿ ಮದ್ಯಾವರ್ತಿ ದರ (ರೇಟ್ )ನಿಗದಿ ಮಾಡುತ್ತಾನೆ. ಒಬ್ಬ ವ್ಯಾಪಾರಿ ತಾನು ಯಾವದೇ ಕೆಲಸಕ್ಕೆ ಕೈ ಹಾಕುವ ಮುಂಚೆ ಈ ರೀತಿ ಆಲೋಚನೆ ಮಾಡಿ ಬಂಡವಾಳ ಹಾಕಿರುತ್ತಾನೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಎಪ್ಪತ್ತು ಮೂವತ್ತು ಸಾವಿರ ರೂಪಾಯಿಗಳು ಬರುತ್ತವೆ ಎಂದು.
ಆದರೆ ಒಬ್ಬ ರೈತ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ ಬೀಜ ಗೊಬ್ಬರ ತಂದು ಮಣ್ಣಿನಲ್ಲಿ ಹಾಕುತ್ತಾನೆ. ಸಮಯಕ್ಕೆ ಸರಿಯಾಗಿ ಮಳೆ ಬರೋದಿಲ್ಲ ಒಂದೊಂದು ಸಲ ಒಂದೊಂದು ರೀತಿಯ ಸಮಸ್ಯೆ ಮಳೆ ಬರದಿದ್ದರೆ ಒಂದು ಸಮಸ್ಯೆ. ಮಳೆ ಹೆಚ್ಚಾಗಿ ಒಂದು ಸಮಸ್ಯೆ ಇನ್ನೇನು ಬೆಳೆ ಬಂತು ರಾಶಿ ಮಾಡಬೇಕು ಅನುವಷ್ಟರಲ್ಲಿ ಅಕಾಲಿಕ ಮಳೆ. ಹಾಗೂ ಹೀಗೂ ಮಾಡಿ ಅಳಿದುಳಿದ ಬೆಳೆ ಮಾರುಕಟ್ಟೆಗೆ ತಂದರೆ ಮದ್ಯಾವರ್ತಿ ದಲ್ಲಾಳಿಗಳ ಕಾಟ. ಈ ರೀತಿಯಾದರೆ ರೈತ ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವದಕ್ಕೆ ಸಾಧ್ಯ ಸಾಲ ಇಲ್ಲದೆ ಇರಲು ಸಾಧ್ಯ. ಅದಕ್ಕೆ ರೈತರು ತಾವುಗಳು ಬೆಳೆದ ಬೆಳೆಗೆ ತಾವುಗಳೇ ದರ ನಿಗದಿ ಮಾಡಿಕೊಳ್ಳಬೇಕು.
ಹೆಚ್ಚಿನ ಬೆಲೆ ಎಲ್ಲಿ ಸಿಗುತ್ತೆ ಅಲ್ಲಿಗೆ ಹೋಗಿ ಮಾರಾಟ ಮಾಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತನೇ ಸಾರ್ವಭೌಮನಾಗಬೇಕು.. ದಯವಿಟ್ಟು ಘನವೆತ್ತ ಸರ್ಕಾರದಲ್ಲಿ ಭಾಷಣ ಮಾಡುವುದು ಬಿಟ್ಟು ರೈತರಿಗೆ ಅನುಕೂಲವಾಗುವ ಕಾಯ್ದೆಗಳು ತಂದು ರೈತರಿಗೆ ಮಧ್ಯವರ್ತಿಗಳಿಂದ ಮುಕ್ತರನ್ನಾಗಿ ಮಾಡಿ ಸರ್ಕಾರಿ ಶಾಲೆಗಳಲ್ಲಿ ಓದುವ ರೈತರ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ ಎಂದು ಈ ಮೂಲಕ ಮಾನ್ಯ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅರಿಫ್ ಮಾನಿಯಾರ ರಾಜ್ಯಾಧ್ಯಕ್ಷರು ಮಾಧ್ಯಮ ಘಟಕ ಜೈ ಜನ್ಮಭೂಮಿ ರಕ್ಷಣಾ ಪಡೆ (ನೂಂ)
ವರದಿ :-ಗಾಫುರ್