ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು
ಸಿಂದಗಿ : ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಿಂದಗಿಯಲ್ಲಿ ಹೆಚ್ಚುತ್ತಿರುವ ಮಕ್ಕಳ ಭಿಕ್ಷಾಟನೆಗೆ ಸಂಬಂಧಿಸಿದಂತೆ ಮಂಗಳವಾರ
ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಹರ್ಷವರ್ಧನ ಪೂಜಾರಿ ಸಿಂದಗಿ ನಗರದಲ್ಲಿ ತುಂಬಾ ವಿದ್ಯಾರ್ಥಿಗಳು ತಮ್ಮ ವಿದ್ಯಾ ಭ್ಯಾಸವನ್ನು ತೊರೆದು ಸಿಂದಗಿ ನಗರದ ಕಚೇರಿಗಳ ಸುತ್ತಮುತ್ತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ತಮಗರಿವಿಲ್ಲದೆ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ. ವಿಚಾರ ಆರೋಗ್ಯವಂತ ಸಮಾಜವೇ ತಲೆತಗ್ಗಿಸುವಂತಹ ಪರಿಸ್ಥಿತಿ ಸಿಂದಗಿಯಲ್ಲಿ ನಿರ್ಮಾಣವಾಗಿದೆ. ಆದ ಕಾರಣ ತಾಲೂಕು ದಂಡಾಧಿಕಾರಿ ಸಂಜೀವಕುಮಾರ ದಾಸರ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾಭ್ಯಾಸ ಮಾಡಬೇಕಾಗಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿ ವಿದ್ಯಾರ್ಥಿ ಬದುಕನ್ನು ಕಟ್ಟಿಕೊಡಬೇಕೆಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ ಅತೀ ಶೀಘ್ರದಲ್ಲೇ ಭಿಕ್ಷಾಟನೆ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹರ್ಷವರ್ಧನ ಪೂಜಾರಿ, ಸುಮೀತ್ ಕಕ್ಕಸಗೇರಿ, ತುಳಸಿರಾಮ ಮೇಲಿನಮನಿ, ಯಲ್ಲು ದೊಡಮನಿ, ಪ್ರಶಾಂತ್ ಶಿವಣಗಿ, ಮಲ್ಲಿಕಾರ್ಜುನ ಮಸರಕಲ್ಲ, ಹಾಗೂ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:-ಗಪೂರ ಮುಜಾವರ