ವಿಜಯನಗರ ಜಿಲ್ಲೆ (ಕೊಟ್ಟೂರು)
ದಿನಾಂಕ 06/11/2021 ರಂದು ಮಧ್ಯಾಹ್ನ 3-30 ಗಂಟೆಗೆ ಕೊಟ್ಟೂರು ಪೊಲೀಸ್ ಠಾಣೆಯ ಪಿ.ಎಸ್.ಐ ಕೊಟ್ಟೂರು ರವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಮತ್ತು ಸರ್ಕಾರದ ಇತರ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿ ಮಾಡಿ ಮಾರಾಟ ಮಾಡಲು ಗದಗ ಜಿಲ್ಲೆಯ ಮುಂಡರಗಿ ಕಡೆಯಿಂದ ಲಾರಿಯಲ್ಲಿ ಸಾಗಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸಿಬ್ಬಂದಿಯವರೊಂದಿಗೆ ಕೊಟ್ಟೂರು ಪಟ್ಟಣದ ಹೊರವಲಯದಲ್ಲಿ ಇಟ್ಟಿ ರಸ್ತೆಯಲ್ಲಿ ಒಂದು ಆಶೋಕ್ ಲೈಲ್ಯಾಂಡ್ ಲಾರಿಯನ್ನು ತಡೆದು ಚೆಕ್ ಮಾಡಲಾಗಿ ಅದರ ನಂ: ಕೆ.ಎ-26/0-3014 ಇದ್ದು ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ
ಪಾಲಾಕ್ಷ ತಂದೆ ಪ್ರಕಾಶ 21 ವರ್ಷ ಉರಿ ಚಾಲಕ ವಾಸ: ನೆಲ್ಲುದುರ ಗ್ರಾಮ, ಹೆಚ್.ಬಿ ಹಳ್ಳಿ ತಾಲೂಕು ವಿಜಯನಗರ ಜಿಲ್ಲೆ ಎಂದು ತಿಳಿಸಿದ್ದು, ಕುಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಲಾರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ( ಪಿ.ಡಿ.ಎಸ್ ] ಆಕ್ಕಿ ಇದ್ದು ಈ ಆಕ್ಕಿಯನ್ನು ಗದಗ ಜಿಲ್ಲೆಯ ಮುಂಡರಿಗಿಯ ಮೈಲಾರ ಲಿಂಗೇಶ್ವರ ಟ್ರೇಡರ್‌ನ ಮಾಲೀಕನಾದ ವಿರೇಶ ಎನ್ನುವವರು ಮುಂಡರಿಗಿಯಿಂದ ಮಂಡ್ಯ ಜಿಲ್ಲೆಯ ಹುಲಿವಾಹನ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಸಾಗಟ ಮಡುತ್ತಿರುವುದಾಗಿ ತಿಳಿದು ಬಂದಿರುತ್ತದೆ. ನಂತರ ಪರಿಶೀಲಿಸಲಾಗಿ
1) ಪಡಿತರ ಅಕ್ಕಿ 50 ಕೆ.ಜಿಯ 360 ಬ್ಯಾಗ್ ಒಟ್ಟು 18000 ಕೆ.ಜಿ [ 18 ಟನ್ ] ಅಂದಾಜು ಬೆಲೆ 5,15160/-ರೂ
2] ಲಾರಿ ನಂ ಕೆ.ಎ-26/0-3014 sಂದಾಜು ಬೆಲೆ 15 ಲಕ್ಷ, ಇವುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಆರೋಪಿತರಾದ 1] ಪಾಲಾಕ್ಷ ತಂದೆ ಸಕಾಶ 21 ವರ್ಷ ಲಾರಿ ಚಾಲಕ ರವರುಗಳ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯ ಗುನ್ನೆ ನಂಬರ್: 174/2021
2] ವಿರೇಶ – ಮೈಲಾರ ಲಿಂಗೇಶ್ವರ ಟ್ರೇಡರ್ ಮುಂಡರಗಿ
ಕಲಂ: ಕಲಂ: 3, 7, E.C Act ಮತ್ತು 420 IPC ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಸದರಿ ಕಾರ್ಯಚರಣೆಯನ್ನು ಹಾಲಮೂರ್ತಿರಾವ್, ಡಿ.ಎಸ್.ಪಿ. ಹರಪನಹಳ್ಳಿ ಮುರುಗೇಶ, ಟಿ.ಎಸ್. ರವರ ಮಾರ್ಗದರ್ಶನದಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಪಿ.ಎಸ್.ಐ ಹೆಚ್, ನಾಗಪ್ಪ, ಸಿಬ್ಬಂದಿಯವರಾದ ವಿ. ಮಂಜಪ್ಪ, ಹೆಚ್.ಸಿ-180, ಬಸವರಾಜ, ಪಿ.ಸಿ-66, ಶಶಿಧರ, ಪಿ.ಸಿ-951 ರವರು ನಡೆಸಿರುತ್ತಾರೆ. ಸದರಿ ದಾಳಿಯನ್ನು ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಡಾ|| ಕೆ. ಆರುಣ್ ಐ.ಪಿ.ಎಸ್. ಪೊಲೀಸ್ ಅಧಿಕ್ಷಕರು ವಿಜಯನಗರ ಜಿಲ್ಲೆ, ಹೊಸಪೇಟೆ ರವರು ಶ್ಲಾಘಿಸಿದ್ದಾರೆ.
ವರದಿ :-ಮೊಹಮ್ಮದ್ ಗೌಸ್