ವಿಜಯನಗರ ಜಿಲ್ಲೆ
ದಿನಾಂಕ : 2.10.2021 & 3.10.2021 ರಂದು ನಡೆದ ವಿಜಯನಗರ ಉದ್ಘಾಟನಾ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಮ್ಮ ಮಾದರಿ ಪ್ರದರ್ಶನಾ ಅಂಗನವಾಡಿ ಕೇಂದ್ರದ ಮಳಿಗೆಯನ್ನು ಮಾನ್ಯ ಪ್ರವಾಸೋದ್ಯಮ ಸಚಿವರಾದ ಶ್ರೀ. ಆನಂದ ಸಿಂಗ್ ರವರು ಉದ್ಘಾಟಿಸಿದರು,
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ. ನಾಗರಾಜ ಆರ್. ರವರು, ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ.ಸಿಂಧು ಅಂಗಡಿ ರವರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ. ಎಳೆನಾಗಪ್ಪ ರವರು ಕಲಿಕೆ-ಟಾಟಾ ಟ್ರಸ್ಟ್ ಸಂಸ್ಥೆಯ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ. ಕೊಟ್ರೇಶ್ ಯರಡಕೇರಿ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಜಗನ್ನಾಥ, ಶ್ರೀ. ನಾಗೇಶ್ ಹಾಗೂ ಮೇಲ್ವಿಚಾರಕಿಯರಾದ ಶ್ರೀಮತಿ. ಸುಜಾತ, ಕಾರ್ಯಕರ್ತೆಯರಾದ ಶ್ರೀಮತಿ. ಮೇಬುನ್ನಿ, ಶ್ರೀಮತಿ. ಆಶಾರಾಣಿ. ಮತ್ತು ಬಶೀರ ಅಂಗನವಾಡಿ ಸಹಾಯಕಿ ಮಂಜುಳ ಇನ್ನು ಎಲ್ಲಾ ಮೇಲ್ವಿಚಾರಕಿರು ಮತ್ತು ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗಿಯಾಗಿದ್ದರು.
ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಯ ಪೂರಕ ಸಾಮಗ್ರಗಳನ್ನು ಗಮನಿಸಿದ ಸಚಿವರು ಎಲ್ಲಾ ತುಂಬಾ ಚೆನ್ನಾಗಿಮಾಡಿದ್ದೀರ ನಿಮಗೆ ತರಬೇತಿ ನೀಡುತ್ತಿರುವ ತರಬೇತಿದಾರರಿಗೂ ಇಲಾಖೆಗೂ ಮತ್ತು ನಿಮಗೆ ಮಾರ್ಗದರ್ಶಿಸುತ್ತಿರುವ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಗೂ ಶುಭಹಾರೈಸಿದರು.
ಎರಡು ದಿನದ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರು ಅಣಕು ಪ್ರದರ್ಶನದ ಮೂಲಕ ಬಂದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಶಾಲಾ ಪೂರ್ವ ಶಿಕ್ಷಣದ ಕುರಿತು ಮಾಹಿತಿ ನೀಡಿದರು.
ವರದಿ :-ಮೊಹಮ್ಮದ್ ಗೌಸ್