ಬಳ್ಳಾರಿ :-ತೋರಗಲ್ ( ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್)
ಜಿಂದಾಲ್ ಕಂಪನಿಯ ಐಐಎಸ್ ಸಂಸ್ಥೆಯಲ್ಲಿ 8 ವರ್ಷದಿಂದ ಎಲೆಕ್ಟ್ರಿಷಿಯನ್ ಹುದ್ದೆಯಲ್ಲಿ ಹಸೇನ್ (27) ಕಾರ್ಯನಿರ್ವಹಿಸುತ್ತಿದ್ದ ಘಟನೆ ಒಂದರಲ್ಲಿ ಸಾವನ್ನಪ್ಪಿರುತ್ತಾನೆ,!
ವಿದ್ಯಾನಗರ ದಲ್ಲಿರುವ (ಸ್ಪೋರ್ಟ್ಸ್ ಕ್ಲಬ್) ದಿ, 3 ರಂದು 2:00. ಗಂಟೆಗೆ ವಿದ್ಯುತ್ ಕಂಬಗಳ ಮೆಂಟೇನೆನ್ಸ್ ಮಾಡಲು ಹೋದಾಗ
ಸ್ಟ್ಯಾಂಡಿಂಗ್ ಲಿಫ್ಟ್ ನಿಂದ ಸರಿ ಸುಮಾರು 100 ಮೀಟರ್ ಮೇಲಿರುವ ವಿದ್ಯುತ್ ದೀಪವನ್ನು ಚೇಂಜ್ ಮಾಡುವ ಉದ್ದೇಶದಿಂದ ಲಿಫ್ಟ್ ನ ಮೇಲೇರಿ ಹೋದಾಗ ಕಾರ್ಮಿಕ ಹುಸೇನ್ ಅತಿ ಹೆಚ್ಚು ಎತ್ತರ ಇರುವುದರಿಂದ ಲಿಫ್ಟ್ ಲ್ಯಾಡರ್ ಸಮತೋಲನ ತಪ್ಪಿ ಕಾರ್ಮಿಕ ಹುಸೇನ್ ಬಿದ್ದು ಸಾವನ್ನುಪ್ಪಿರುವ ಘಟನೆ ಜಿಂದಾಲ್ ಸ್ಟೀಲ್ ನ ಸ್ಪೋರ್ಟ್ಸ್ ಕ್ಲಬ್ ಹತ್ತಿರ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿರುತ್ತದೆ.
ಸರಿಸುಮಾರು 100 ಮೀಟರ್ ಎತ್ತರದಿಂದ ಸುರಕ್ಷತೆ ಇಲ್ಲದೆ ಕಾರ್ಖಾನೆಯಲ್ಲಿ ಕೆಲಸ ಮಾಡಿಸುತ್ತಿದ್ದಾರ, ಘಟನೆಗೆ ಸಂಬಂಧಪಟ್ಟಂತೆ ಇದಕ್ಕೆ ಕಾರಣ ಯಾರು ಗ್ರಾಮಸ್ಥರ ಪ್ರಶ್ನೆಯಾಗಿದೆ.?
ಜಿಂದಾಲ್ ಕಾರ್ಖಾನೆಯಲ್ಲಿ ಸುರಕ್ಷಾ ಇಲಾಖೆ ( fire and safety department ) ಇದ್ದು ಕೂಡ ಪದೇ ಪದೇ ಇತರಹದ ಘಟನೆ ಅಮಾಯಕ ಬಡ ಕಾರ್ಮಿಕರ ಜೀವವನ್ನೇ ತೆಗೆಯುತ್ತಿದೆ,
ಮೈಂಟೆನೆನ್ಸ್ ಮಾಡೋಕ್ಕಿಂತ ಮುಂಚೆ ಮಂಚೂಣಿಯಾಗಿ ಸುರಕ್ಷಾ ಇಲಾಖೆಗೆ ಆಯಾ ಸಂಸ್ಥೆಯ ಅಧಿಕಾರಿಗಳಾಗಲಿ ಮತ್ತು ಸೂಪರ್ವೈಸರ್ಗಳು ಸುರಕ್ಷಾ ಇಲಾಖೆಗೆ ಮಾಹಿತಿ ಕೊಡಬೇಕು ಅದಾದ ನಂತರ ಸುರಕ್ಷಾ ಇಲಾಖೆಯ ಸಿಬ್ಬಂದಿಗಳು ಬಂದ ನಂತರ ಕೆಲಸ ಕಾರ್ಯನಿರ್ವಹಿಸಬೇಕು. ಈ ಘಟನೆ ಯಾ ಕಾರಣ ಜಿಂದಾಲ್ ಮತ್ತು,ಐ ಐ ಎಸ್ ಸಂಸ್ಥೆ ಯಂದು ನೇರವಾಗಿ ಬಿಂಬಿಸುತ್ತಿದೆ ಐಐಎಸ್ ಸಂಸ್ಥೆಯ ಅಧಿಕಾರಿಗಳು ಸುರಕ್ಷಾ ಇಲಾಖೆಗೆ ಮಾಹಿತಿ ಯಾಕೆ ಕೊಟ್ಟಿಲ್ಲ ಎಂದು ಅಲ್ಲಿಯ ಕಾರ್ಮಿಕರು ಮಾತನಾಡಿಕೊಳ್ಳುತ್ತಿದ್ದರು ?
ಸ್ಥಳೀಯ ಉದ್ಯೋಗಿಗಳ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರು ಬದುಕುಳಿಯಲಿಲ್ಲ. ಸುಮಾರು ಮದ್ಯಾಹ್ನ ಮೂರು ಗಂಟೆಗೆ ಈ ಅವಘಡ ನಡೆದಿದ್ದು. ಕುಟುಂಬಸ್ಥರು ಸ್ನೇಹಿತರು ಬಂದು ಬಳಗದವರು ಸೇರಿ ಜಿಂದಾಲ್ ಕಂಪನಿಯ ಐಐಎಸ್ ಗುತ್ತಿಗೆದಾರರು ಹಾಗೂ ಜಿಂದಾಲ್ ಅಧಿಕಾರಿಗಳ ಜೊತೆ ಮಾತುಕತೆ ಮಾನವೀಯ ಆಧಾರದಲ್ಲಿ ಪರಿಹಾರ ನೀಡದೆ ವಂಚಿಸುತ್ತಿದ್ದಾರೆ ಕಂಪನಿಯ ನಿರ್ಲಕ್ಷಕ್ಕೆ ಜೀವ ಬಿಟ್ಟ ಹಸೇನ ಕುಟುಂಬಕ್ಕೆ ಕೇವಲ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕಂಪನಿ ಅಥವಾ ಗುತ್ತಿಗೆದಾರನು ಹೇಳುತ್ತಿದ್ದಾನೆ. ಅದಕ್ಕೆ ಮಣಿಯದೆ ತಾಳೂರಿನ ಗ್ರಾಮಸ್ಥರು, ಮುಖ್ಯಸ್ಥರು ಸ್ನೇಹಿತರು ರಾತ್ರಿ ಇಡೀ 12 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು ಅದಕ್ಕೂ ಜಗದ ಅಧಿಕಾರಿಗಳು ಕೊಡುವುದು ಇಷ್ಟೇ ಹಣ ಬೇಕಿದ್ದರೆ ಮಾತಾಡಿ ಇಲ್ಲಂದರೆ ಬಿಡಿ ಎಂದು ನಿರ್ಲಕ್ಷದಿಂದ ಈ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಅವರ ಸಹೋದರ ಪತ್ರಿಕೆಗೆ ತಿಳಿಸಿದ್ದಾರೆ.
ಮೃತಪಟ್ಟ ಹಸೇನ ಎಂಟು ವರ್ಷದಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದ ಅವನ P.F ಮತ್ತು ESIC ಯಾಕೆ ಚಾಲ್ತಿಯಲ್ಲಿಲ್ಲ?
ಎಂಟು ವರ್ಷ ಆದರೂ ಇಎಸ್ಐ ಪಿಎಫ್ ಇಲ್ಲದೆ ಅಮಾಯಕ ಕಾರ್ಮಿಕರ ಜೊತೆ ಕೆಲಸ ಮಾಡಿಸುತ್ತಿದ್ದಾರ ಈ ಕಂಪನಿಗಳು ಯಾರು ಹೇಳೋರು ಇಲ್ಲ ಮತ್ತು ಕೆಲವರು ಇಲ್ಲ ಎಂದು ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು!
ವರದಿ :-ಮೊಹಮ್ಮದ್ ಗೌಸ್