ಜಾಗೃತಿ ಬೆಳಕು ನ್ಯೂಸ್,ಹೊಸಪೇಟೆ (ವಿಜಯನಗರ)
ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿವಿ ಫಲಿತಾಂಶ ಪ್ರಕಟವಾಗಿದ್ದು, ಸಿರುಗಪ್ಪ ನಗರದ ವಿದ್ಯಾ ಎಲ್ ಬೈಲಪತ್ತಾರ್ ಬಿ.ಎ.ಪದವಿಯಲ್ಲಿ 3ನೇ ರ‍್ಯಾಂಕ್ ಪಡೆದಿದ್ದಾರೆ.
ಸಿರುಗಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯಾಗಿರುವ ವಿದ್ಯಾ 3 ವರ್ಷದ ಬಿ.ಎ.ಪದವಿಯಲ್ಲಿ 4100 ಅಂಕಗಳಿಗೆ 3721 ಅಂಕ ಗಳಿಸಿದ್ದಾರೆ. ಶೇ.100ಕ್ಕೆ ಶೇ.90.76 ಪ್ರತಿಶತ ಸಾಧನೆ ತೋರಿರುವ ವಿದ್ಯಾ ಎಲ್ ಬೈಲಪತ್ತಾರ್ ಅವರಿಗೆ ಕಾಲೇಜಿನ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ತಂದೆ ಲಕ್ಷ್ಮಣ ಬೈಲಪತ್ತಾರ್ ಸೇರಿದಂತೆ ಕುಟುಂಬ ವರ್ಗ, ಬಂಧು ಮಿತ್ರರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ :-ಮೊಹಮ್ಮದ್ ಗೌಸ್