ಜಾಗೃತಿ ಬೆಳಕು,ಹೊಸಪೇಟೆ (ವಿಜಯನಗರ)
ಹಂಪಿ ಉತ್ಸವ ಅಂಗವಾಗಿ ಫೆಬ್ರುವರಿ 4ರಂದು ಹಮ್ಮಿಕೊಳ್ಳಲಾದ ಯೋಗ ನೃತ್ಯ ಕಾರ್ಯಕ್ರಮದಲ್ಲಿ ಕಡ್ಡಿರಾಂಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅದ್ಭುತ ಯೋಗ ನೃತ್ಯ ಪ್ರದರ್ಶನ ಮಾಡಿದರು.
ಕಡ್ಡಿರಾಂಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ಹಿಂದೆ ಹಲವಾರು ಸರ್ಕಾರಿ ಕಾರ್ಯಕ್ರಮಗಳು, ಖಾಸಗಿ ವೇದಿಕೆ ಹಾಗೂ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಪತ್ರದೊಂದಿಗೆ ಮೆಚ್ಚುಗೆಯನ್ನು ಸಹ ಪಡೆದಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಥಮ ಸ್ಥಾನ, ಹಂಪಿಯಲ್ಲಿ ರಾಜ್ಯ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ. ಸುಮಾರು ಹತ್ತಾರು ಕಾರ್ಯಕ್ರಮಗಳನ್ನು ಒಳಗೊಂಡAತೆ ವಿಜಯನಗರ ಟ್ಯಾಲೆಂಟ್ ಹಬ್ ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಹೊರಹೊಮ್ಮಿ ಎಲ್ಲರ ಮನಸ್ಸು ಗೆದ್ದು, ಆಕರ್ಷಕವಾದ ಯೋಗ ಪ್ರದರ್ಶನ ಮಾಡುವಲ್ಲಿ ಕಾರಣಭೂತರಾಗಿದ್ದಾರೆ.
ಯೋಗ ಪ್ರದರ್ಶನ ಮಾಡಲು ಅವಕಾಶ ನೀಡಿದಂತ ಜಿಲ್ಲಾಡಳಿತ ಹಾಗೂ ಹಂಪಿ ಉತ್ಸವದ ರೂವಾರಿಗಳಿಗೆ ಕಡ್ಡಿರಾಂಪುರದ ಕನಕಶ್ರೀ ಯೋಗ ಕಲಾ ಸಾಂಸ್ಕೃತಿಕ ಸಂಘ ಹಾಗೂ “ಯಶಸ್ವಿ ಪ್ರದರ್ಶನ” ನೀಡಿದ ಕಡ್ಡಿರಾಂಪುರದ ಯೋಗ ಮಕ್ಕಳಿಗು ಅಭಿನಂದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕನಕಶ್ರೀ ಯೋಗ ಕಲಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಕಡ್ಡಿರಾಂಪುರ್, ಮಂಜುನಾಥ ಮತ್ತು ಕಡ್ಡಿರಾಂಪುರ ಮಕ್ಕಳ ವೃಂದ, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ :- ಮೊಹಮ್ಮದ್ ಗೌಸ್