ಜಾಗೃತಿ ಬೆಳಕು ನ್ಯೂಸ್ ಹೊಸಪೇಟೆ (ವಿಜಯನಗರ)
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರೈತ ನಾಯಕ ಜೆ.ಕಾರ್ತಿಕ್ ಅವರ ನಿವಾಸಕ್ಕೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಫೆಬ್ರವರಿ 5ರಂದು ಭೇಟಿ ನೀಡಿದರು.
ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರೊಂದಿಗೆ ಹೊಸಪೇಟೆಯ ಎಂ.ಪಿ.ಪ್ರಕಾಶ್ ನಗರದಲ್ಲಿರುವ ಜೆ.ಕಾರ್ತಿಕ್ ಅವರ ಮನೆಗೆ ತೆರಳಿದ ಸಚಿವರು, ಮೃತ ಕಾರ್ತಿಕ ಅವರ ತಾಯಿ ಬಸಮ್ಮ, ಪತ್ನಿ ಮಂಗಳಾ ಹಾಗೂ ಮಗಳು ಬೃಂದಾ ಅವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ಕಾರ್ತಿಕ ಅವರ ಮಗಳ ವಿದ್ಯಾಭ್ಯಾಸಕ್ಕೆ ತಾವು ಹಾಗೂ ಶಾಸಕರಾದ ಗವಿಯಪ್ಪ ಅವರು ಸೇರಿ ಸಹಾಯ ಮಾಡುವುದಾಗಿ ಇದೆ ವೇಳೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿಬಾಬು, ಹೊಸಪೇಟೆ ತಹಶೀಲ್ದಾರರಾದ ವಿಶ್ವಜಿತ್ ಮೆಹತಾ ಸೇರಿದಂತೆ ಮತ್ತಿತರರು ಇದ್ದರು.
ವರದಿ :-ಮೊಹಮ್ಮದ್ ಗೌಸ್