ಹೊಸಪೇಟೆ: ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದನ್ನು ಖಂಡಿಸಿ ಗುರುವಾರ ವಿಜ ಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ ಕರೆ ನೀಡಿದ್ದ ಹೊಸಪೇಟೆ ನಗರ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಡೌನ್ ಡೌನ್ ಜೆಸ್ಕಾಂ – ಡೌನ್ ಡೌನ್ ಜೆಸ್ಕಾಂ ಎಂಬ ಘೋಷಣೆಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೋದ್ಯಮದ ಮೇಲೆ ಹೆಚ್ಚಿನ ಹೊರೆ ಬೀಳುವುದರಿಂದ ವ್ಯವಹಾರ ಸೇರಿದಂತೆ ಗೃಹಬಳಕೆಗೆ ಜನಸಾಮಾನ್ಯರಿಗೆ ಆರ್ಥಿಕ ಪೆಟ್ಟು ಬೀಳಲಿದೆ. ಮೊದಲು ಮೂರು ಸ್ಲ್ಯಾಬ್ ನಲ್ಲಿದ್ದ ವಿದ್ಯುತ್ ಬಿಲ್ ಗಳನ್ನು ಕೆ ಇ ಆರ್ ಸಿ ಅವೈಜ್ಞಾನಿಕವಾಗಿ ಎರಡು ಸ್ಲ್ಯಾಬ್ ಮೂಲಕ ಮಾಡಿರುವುದು ಖಂಡಿಸಿದರು.
ವಿದ್ಯುತ್ ಧರ ಹೆಚ್ಚಳದಿಂದ ಕರ್ನಾಟಕ ವಾಣಿಜ್ಯ ಕೈಗಾರಿಕೋದ್ಯಮ ಸಂಘ ಹುಬ್ಬಳ್ಳಿ ಕರ್ನಾಟಕ ಬಂದ್ ನಡೆದ ಹಿನ್ನೆಲೆಯಲ್ಲಿ ಇಂದು ಗುರುವಾರ ರಂದು ವಿಜಯನಗರ ಜಿಲ್ಲಾ ವಾಣಿಜ್ಯ ಕೈಗಾರಿಕೋದ್ಯಮ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲಿಸಿದ್ದು, ಹೊಸಪೇಟೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿ ದಂತೆ ಹೋಟೆಲಗಳು ಸಂಪೂರ್ಣ ಬಂದ್ ಮಾಡಿದ್ದ ರು. ನಗರದ ಎಲ್ಲಾ ವರ್ತಕರ ಸಂಘ, ವಾಣಿಜ್ಯೋದ್ಯ ಮ ಸಂಘದ ಪದಾಧಿಕಾರಿಗಳು, ವ್ಯಾಪಾರಸ್ತರು, ಬೇ ರೆ ಬೇರೆ ಸಂಘ ಸಂಸ್ಥೆಗಳು, ನಾಗರೀಕರು ಸೇರಿದಂತೆ ನಗರದ ವಡಕರಾಯ ದೇವಸ್ಥಾನದಿಂದ ಬೈಕ್ ರ್ಯಾಲಿ ಮುಖಾಂತರ ವಿದ್ಯುತ್ ದರ ಏರಿಸಿರುವ ಕೆಇಆರ್ ಸಿ ವಿರುದ್ಧ ” ಡೌನ್ ಡೌನ್ ಜೆಸ್ಕಾಂ – ಡೌನ್ ಡೌನ್ ಜೆಸ್ಕಾಂ ” ಗೋಷಣೆಯನ್ನು ಕೂಗುತ್ತಾ ನಗರದ ಪ್ರ ಮುಖ ರಸ್ತೆಗಳ ಮೂಲಕ ಸಾಯಿಬಾಬಾ ವೃತ್ತದ ವರೆಗೆ, ಅಲ್ಲಿಂದ ನೂರಾರು ವರ್ತಕರು, ಸಂಘ ಸಂಸ್ಥೆ ಗಳು, ಸಾಯಿಬಾಬಾ ವೃತ್ತದಿಂದ ವಿಜಯನಗರ ಜಿಲ್ಲಾಧಿಕಾರಿ ಕಛೇರಿ ವರೆಗೆ ಕಾಲುನಡಿಗೆ ಜಾತಾ ನಡೆಸಿದರು ನಂತರ ಕೆ.ಇ.ಆರ್.ಸಿ ಅವೈಜ್ಞಾನಿಕವಾಗಿ ಏರಿಕೆ ಮಾಡಿರುವ ವಿದ್ಯುತ್ ಧರ ಹಾಗೂ ವಿದ್ಯುತ್ ಧರದ ಪರಿಷ್ಕರಣೆ ಮಾಡಿ ಹಿಂದಿನಂತೆ ವಿದ್ಯುತ್ ಬಿಲ್ ಪಾವತಿಸಲು ಅವಕಾಶ ಮಾಡಿಕೊಡಲು ಕುರಿತು ಸರ್ಕಾರ ಗಮನಸೆಳೆಯಲು ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ವಾಣಿಜ್ಯ ಕೈ ಗಾರಿಕೋದ್ಯ ಸಂಘದ ಅಧ್ಯಕ್ಷರಾದ ಅಶ್ವಿನ್ ಕೊತ್ತೊಂಬರಿ,ಮದುಕರ್ ರಾವ್, ಸೈಯದ್ ನಾಜಿಮುದ್ದೀನ್, ಕಾಕುಬಾಳ್ ರಾಜೇಂದ್ರ, ಪ್ರಹ್ಲಾದ್ ಭೂಪಾಳ್, ವಿಜಯ ಸಿಂದಗಿ, ಚಂದ್ರಕಾಂತ್ ಕಾಮತ್, ಮಹೇಂ ದ್ರ ಜೈನ್, ರಮೇಶ್ ಗುಪ್ತ, ಪಿ.ಎನ್.ಶ್ರೀಪಾದ್ ಹಾ ಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದ ರ್ಶಿಗಳು, ವ್ಯಾಪಾರಸ್ತರು ಪಾಲ್ಗೊಂಡಿದ್ದರು.
ವರದಿ :- ಮೊಹಮ್ಮದ್ ಗೌಸ್