ಹೊಸಪೇಟೆ:- ಜಾಗೃತಿ ಬೆಳಕು (ಬ್ರೇಕಿಂಗ್ ನ್ಯೂಸ್ ನ್ಯೂಸ್)
ಕರ್ನಾಟಕ ವಿಧಾನ ಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ದಿನಾಂಕ 13.05.2023 ರಂದು ಹೊಸಪೇಟೆ ನಗರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಸದರಿ ಮತ ಎಣಿಕೆ ಕಾರ್ಯ ಸೇರಿ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ 13.05.2023 ರಂದು ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂಬಂಧ 5ಕ್ಕೂ ಹೆಚ್ಚು ಜನರು ಸೇರದಂತೆ ಸೂಚನೆ ನೀಡಿದ್ದು, ವಿಜಯೋತ್ಸವ, ಸಂಭ್ರಮಾಚರಣೆ, ಮೆರವಣಿಗೆ, ಬೈಕ್ ಡ್ಯಾಲಿ, ಪಟಾಕಿ ಸಿಡಿಸುವುದು, ಪ್ರತಿಕೃತಿ ಪ್ರದರ್ಶನ, ಪ್ರತಿಕೃತಿ ದಹನ, ಧ್ವನಿವರ್ಧಕ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮೇ.13. ದಿನದಂದು ಮತ ಎಣಿಕೆ ಕೇಂದ್ರದ ಬಳಿ ಬಂದೋಬಸ್ತ್ ಕರ್ತವ್ಯಕ್ಕೆ 04-ಡಿಎಸ್‌ಪಿ, 07-ಪಿ.ಐ, 12-ಪಿಎಸ್‌ಐ, 16-ಎಎಸ್‌ಐ, 350-ಹೆಚ್.ಸಿ/ಪಿಸಿ, 02-ಕೆ.ಎಸ್.ಆರ್.ಪಿ ತುಕಡಿ, ಹಾಗೂ 02-ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್ ಈ ಆದೇಶವನ್ನು ಸಾರ್ವಜನಿಕರ ಗಮನಕ್ಕೆ ತಂದಿರುತ್ತೇವೆ ಯಾವುದೇ ಕಾನೂನು ಬಾಹಿರ ಯಾವುದೇ ಕಾರ್ಯ ಚಟುವಟಿಕೆಯಲ್ಲಿ ತೊಡಗಿದವರನ್ನು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಇಲಾಖೆಯ ವತಿಯಿಂದ ಈ ಮೂಲಕ ಸಾರ್ವಜನಿಕರಲ್ಲಿ ಪ್ರಕಟಿಸಲಾಗಿರುತ್ತದೆ
ವರದಿ :-ಮೊಹಮ್ಮದ್ ಗೌಸ್