ನೋಡಲ್ ಅಧಿಕಾರಿಗಳಿಗೆ ನೀತಿಸಂಹಿತೆ ಜಾರಿ ಕುರಿತು ಕಾರ್ಯಗಾರ,

0
238

ಹೊಸಪೇಟೆ:-ಜಾಗೃತಿ ಬೆಳಕು (ಬ್ರೇಕಿಂಗ್ ನ್ಯೂಸ್)

ಕೋರ್ಟ್ ತೀರ್ಪಿನ ವಿವಿಧ ಪ್ರಕರಣಗಳನ್ನು ಅಧ್ಯಯನ ಮಾಡಿ: ಮಹೇಶ್ ವೈದ್ಯ,

ಚುನಾವಣೆಗೆ ಸಂಬoಧಿಸಿದoತೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ನೀತಿ ಸಂಹಿತೆ ಜಾರಿಗೆ ಸಂಬoಧಿಸಿದoತೆ ಚುನಾವಣೆ ವೇಳೆ ದಾಖಲಿಸುವ ದೂರುಗಳಿಗೆ ಸಂಬoಧಿಸಿದoತೆ ಹಿಂದಿನ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ಸಿಐಡಿ ಕಾನೂನು ಸಲಹೆಗಾರ ಮಹೇಶ್ ವೈದ್ಯ ಅವರು ತಿಳಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬoಧಿಸಿದoತೆ ಮಾದರಿ ನೀತಿ ಸಂಹಿತೆ ಕಟ್ಟುಕನಿಟ್ಟಾಗಿ ಜಾರಿಗೊಳಿಸುವ ಕುರಿತು ಹಾಗೂ ನೀತಿ ಸಂಹಿತೆ ಮಾರ್ಗಸೂಚಿಗಳಿಗೆ ಸಂಬoಧಿಸಿದoತೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಚುನಾವಣಾ ನೋಡಲ್ ಅಧಿಕಾರಿಗಳಿಗೆ ಕೈಗೊಳ್ಳಲಾದ ವಿಶೇಷ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಚುನಾವಣಾ ಸಮಯದಲ್ಲಿ ಮತದಾರರನ್ನು ಸೆಳೆಯಲು ವಿವಿಧ ಉಡುಗೊರೆ ಹಾಗೂ ಹಣವನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಗಾಣಿಕೆ ನಡೆಯುತ್ತದೆ. ಚೆಕ್‌ಪೋಸ್ಟ ಗಳಲ್ಲಿ ಕರ್ತವ್ಯ ನಿರತರಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಲಂಕುಷವಾಗಿ ವಾಹನಗಳನ್ನು ಪರೀಶೀಲಿಸುವ ಜೊತೆಗೆ ಅವುಗಳ ಹಿನ್ನೆಲೆಯ ಮಾಹಿತಿ ಪಡೆಯುವ ಜೊತೆಗೆ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಯಾವ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಅಧಿಕಾರಿಗಳು ದಾಖಲಿಸುವ ಪ್ರಕರಣಗಳು ಮುಂದಿನ ವಿಚಾರಣೆಗೆ ಹೆಚ್ಚು ಅವಶ್ಯವಿರುವ ಕಾರಣ ನಿಗಾ ವಹಿಸಬೇಕು ಎಂದು ತಿಳಿಸಿದರು.
ಹಣ ಅಥವಾ ಉಡುಗೊರೆಗಳ ಸಾಗಾಣಿಕೆಗೆ ಸಂಬoಧಿಸಿದoತೆ ಸಿಕ್ಕಿರುವ ಸಾಮಾಗ್ರಿ ಅಥವಾ ಹಣದ ಮೂಲ ಅದರ ಮಾಲೀಕತ್ವದ ಮಾಹಿತಿ ಜೊತೆಗೆ ಅದನ್ನು ಯಾರಿಗೆ ಸಾಗಿಸಲು ಮುಂದಾಗಿದ್ದರು ಎಂಬ ಮಾಹಿತಿಯು ಮುಖ್ಯವಾಗಿರುವುದರಿಂದ ಸಮಗ್ರ ತನಿಖೆಗೆ ಅವಶ್ಯವಿರುವ ಮಾಹಿತಿಯನ್ನು ದೂರು ದಾಖಲಿಸುವ ವೇಳೆ ದಾಖಲಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಗಾರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಯೋಜನಾ ನಿರ್ದೇಶಕ ಚಂದ್ರಶೇಖರ್, ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಜಿ.ವಿ. ಸೇರಿದಂತೆ ಚುನಾವಣಾ ನೋಡಲ್ ಅಧಿಕಾರಿಗಳು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here