ನಿನ್ನೆಯಷ್ಟೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಅವರ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಮೇಲ್ನೀಟಕ್ಕೆ ಅದನ್ನು ಆತ್ಮಹತ್ಯೆ ಎನ್ನಲಾಗಿತ್ತಾದರೂ ಪ್ರಕರಣದ ಸುತ್ತ ಅನುಮಾನ ಹುತ್ತ ಬೆಳೆದುಕೊಂಡಿತ್ತು. ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿಯ ಪೋಷಕರು ಕಿರತೆರೆ ನಟನ ವಿರುದ್ಧ ದೂರು ದಾಖಲಿಸಿದ್ದಾರೆ. (ಚಿತ್ರಗಳು ಕೃಪೆ: ಸವಿ ಮಾದಪ್ಪ ಇನ್ಸ್ಟಾಗ್ರಾಂ ಖಾತೆ)
ನಿನ್ನೆ ಅಂದರೆ ಅ.30ರಂದು ನಟಿ ಸವಿ ಮಾದಪ್ಪ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ತ್ ಅಪಾರ್ಟ್ ಮೆಂಟ್ನಲ್ಲಿ ನಟಿಯ ಶವದ ಜೊತೆ ಡೆತ್ನೋಟ್ ಸಹ ಸಿಕ್ಕಿತ್ತು.
ಮೂಲತಃ ಕೊಡಗಿನವರಾದ ಸವಿ ಮಾದಪ್ಪ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರ ಪೋಷಕರು ಮಾತ್ರ ಕೊಡಗಿನಲ್ಲೇ ಇದ್ದರು. ಫನ್ ಹಾಗೂ ಚೌಕಟ್ಟು ಸಿನಿಮಾ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ನಟಿಸಿರುವ ಸವಿ ಮಾದಪ್ಪ ನಿನ್ನೆ ಸಾವನ್ನಪ್ಪಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದರೂ, ಅವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಇನ್ನು ಮಗಳ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ನಟಿಯ ಪೋಷಕರು ಬೆಂಗಳೂರಿಗೆ ಬಂದಿದ್ದಾರೆ.
ನಟಿ ಸವಿಮಾದಪ್ಪ ತಂದೆ ಪ್ರಭು ಮಾದಪ್ಪ ಅವರು ಮಗಳ ಸಾವಿನಗೆ ನಟ ವಿವೇಕ್ ಹಾಗೂ ಮಹೇಶ್ ಎಂಬುವರು ಕೊಡುತ್ತಿದ್ದ ಕಿರುಕುಳವೇ ಕಾರಣ ಎಂದು ದೂರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನನ್ನ ಮಗಳು ಸವಿಮಾದಪ್ಪ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಸಲುವಾಗಿ 5 ವರ್ಷಗಳ ಹಿಂದೆ ಬೆಂಗಳೂರಿಲ್ಲೇ ನೆಲೆಸಿದ್ದರು. ಒಂದು ವರ್ಷದ ಹಿಂದೆ ಕುಂಬಳಗೋಡು ಬಳಿಯ ಸನ್ವರ್ಥ್ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದರು. ಈ ವೇಳೆ ನನ್ನ ಮಗಳು ಸೌಜನ್ಯಾಳಿಗೆ ವಿವೇಕ್ ಎಂಬುವವನ ಪರಿಚಯವಾಗಿತ್ತು. ವಿವೇಕ್ ನನ್ನ ಮಗಳನ್ನು ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆಂದು ಪೀಡಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ ಪ್ರಭು ಮಾದಪ್ಪ.
ಈ ವಿಚಾರವನ್ನ ನನ್ನ ಮಗಳು ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದಳು. ಸೆ. 30ರಂದು ವಿವೇಕ್ ನನ್ನ ಪತ್ನಿ ರೇಣುಕಾಗೆ ಬೆಳಗ್ಗೆ 9 ಕ್ಕೆ ಪೊನ್ ಕರೆ ಮಾಡಿದ್ದ. ನಿನ್ನ ಮಗಳು ನನ್ನನ್ನು ಮದುವೆಯಾಗದಿದ್ದರೆ ಅವಳನ್ನ ಹೊಡೆದು ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ಪ್ರಭು ಮಾದಪ್ಪ ಅವರು ಆರೋಪಿಸಿದ್ದಾರೆ.
ವಿವೇಕ್ ಕರೆ ಮಾಡಿ ಒಂದು ಘಂಟೆಯ ನಂತರ ನನ್ನ ದೊಡ್ಡಮಗಳು ಭಾಗ್ಯಶ್ರೀ ಕರೆಮಾಡಿ ಸವಿ ಸತ್ತು ಹೋಗಿದ್ದಾಳೆ ಎಂದು ಹೇಳಿದಳು. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಅವರ ಸಹಾಯಕನಾಗಿದ್ದ ಮಹೇಶ್ ಕಾರಣ. ನನ್ನ ಮಗಳ ಬಳಿ 6 ಲಕ್ಷ ಹಣವಿತ್ತು. ಎರಡು ದಿನಗಳ ಹಿಂದೆ 1 ಲಕ್ಷ ಹಣವನ್ನು ಕಳುಹಿಸಿದ್ದೆ. ನನ್ನ ಮಗಳ ಜೊತೆಯಲ್ಲಿದ್ದ ಮಹೇಶ್ ಹಾಗೂ ವಿವೇಕ್ ಕಿರುಕುಳ ತಾಳಲಾರದೇ ನೇಣು ಬಿಗಿದುಕೊಂಡು ಸಾವನ್ನಪ್ಪಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿವೇಕ್ ಹಾಗೂ ಮಹೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಟಿಯ ತಂದೆ ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಎಫ್ಐಆರ್ ದಾಖಲಿಸಿರುವ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ IPC 306 ಅಡಿಯಲ್ಲಿ ಕೇಸ್ ರಿಜಿಸ್ಟರ್ ಮಾಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೇ ಅಂತ ದೂರು ದಾಖಲಾಗಿದ್ದು, ದೂರಿನನ್ವಯ ವಿವೇಕ್ A1 ಆರೋಪಿ ಹಾಗೂ ಮಹೇಶ್ A2 ಆರೋಪಿಯನ್ನಾಗಿ ಮಾಡಲಾಗಿದೆಯಂತೆ.