Welcome to jagruthibelaku   Click to listen highlighted text! Welcome to jagruthibelaku
Wednesday, June 3, 2026
Homeಹಂಪಿವಿಶ್ವಪ್ರಸಿದ್ಧ ಹಂಪಿ ಕ್ಷೇತ್ರದ ಯಂತ್ರೋದ್ಧಾರಕ ಹನುಮಾನ್ ದೇವಸ್ಥಾದಲ್ಲಿ ನಟ ಜಗ್ಗೇಶ್,!

ವಿಶ್ವಪ್ರಸಿದ್ಧ ಹಂಪಿ ಕ್ಷೇತ್ರದ ಯಂತ್ರೋದ್ಧಾರಕ ಹನುಮಾನ್ ದೇವಸ್ಥಾದಲ್ಲಿ ನಟ ಜಗ್ಗೇಶ್,!

ವಿಜಯನಗರ:ಹೊಸಪೇಟೆ (ಜಾಗೃತಿ ಬೆಳಕು)

ಫೆ, 25.ವಿಶ್ವಪ್ರಸಿದ್ಧ ಹಂಪಿ ಕ್ಷೇತ್ರದ ಯಂತ್ರೋದ್ಧಾರಕ ಹನುಮಾನ್ ದೇವಸ್ಥಾನಕ್ಕೆ ಕನ್ನಡ ಚಲನಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರು ಹಂಪಿಯ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಶ್ರೀಗುರು ರಾಯರ ಗುರುಗಳಾದ ಶ್ರೀ ವ್ಯಾಸರಾಯರು ಅವರು ತಪಸ್ಸು ನಡೆಸಿದ್ದ ಪುಣ್ಯಸ್ಥಳಕ್ಕೂ ತೆರಳಿ ಧ್ಯಾನ ಮಾಡಿದು ವಿಶೇಷವಾಗಿತ್ತು.

ಆಧ್ಯಾತ್ಮಿಕ ಮಹತ್ವ ಹೊಂದಿರುವ ಈ ಸ್ಥಳದಲ್ಲಿ ಕೆಲವು ಸಮಯ ಧ್ಯಾನದಲ್ಲಿ ತೊಡಗಿಸಿಕೊಂಡ ಅವರು ದೇವರ ಕೃಪೆ ಬೇಡಿಕೊಂಡರು.ಭೇಟಿ ವೇಳೆ ದೇವಸ್ಥಾನದ ಪೂಜಾರಿಗಳು ಪೂರ್ಣಕುಂಭ ಸ್ವಾಗತ ನೀಡಿ ಆಶೀರ್ವಾದ ಮಾಡಿದರು.

ಹಂಪಿ ಕ್ಷೇತ್ರದ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಬಗ್ಗೆ ಮಾಹಿತಿ ಪಡೆದುಕೊಂಡ ಜಗ್ಗೇಶ್ ಅವರು, ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವುದು ಆತ್ಮಸಂತೋಷ ನೀಡುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರದ ಬಿ. ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ವರದಿ :ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!