ಹೊಸಪೇಟೆ:- ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)
ಜನಸಾಮಾನ್ಯರಲ್ಲಿ ತುಂಬಾ ಗೊಂದಲ ಉಂಟಾಗಿತ್ತು ಹಂಪಿ ಉತ್ಸವಕ್ಕೆ ಹೋಗಬೇಕೆಂದರೆ ಎಲ್ಲೋ ಒಂದು ಎರಡು ಕಿಲೋಮೀಟರ್ ದೂರದಲ್ಲಿ ಬಸ್ಸು ನಿಲ್ಲುತ್ತೆ ಅಲ್ಲಿಂದ ತಾವು ಕಾಲ್ನಡಿಗೆಯಿಂದ ಹೋಗಬೇಕೆಂದು ತಿಳಿದುಕೊಂಡಿದ್ದರು ಆದರೆ ಅದು ಹಾಗಲ್ಲ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಕೆಲವೊಂದು ವಿಶೇಷವಾದ ವ್ಯವಸ್ಥೆ ಮಾಡಲಾಗಿತ್ತು ಆದರೆ ಇದು ಅರ್ಥವೇ ಬೇರೆವಾಯಿತು
ಆದಕಾರಣ ಆಸನಗಳೆಲ್ಲ ಖಾಲಿ ಖಾಲಿ ಇರುವುದನ್ನು ಕಂಡು ಜಿಲ್ಲಾಡಳಿತ ಜನಸಾಮಾನ್ಯರಿಗೆ ಅನುಕೂಲವಾಗುವ ತರ ವ್ಯವಸ್ಥೆ ಮಾಡಿರುತ್ತದೆ ಜನಸಾಮಾನ್ಯರಲ್ಲಿ ಮನವಿ ಹಂಪಿ ಉತ್ಸವ ನಮ್ಮ ವಿಜಯನಗರ ಜಿಲ್ಲೆಯ ಹಬ್ಬವಾಗಿರುತ್ತದೆ ಈ ಹಬ್ಬಕ್ಕೆ ವಿಜಯನಗರ ಜಿಲ್ಲೆಯ ಜನಸಾಮಾನ್ಯರು ಕೈಜೋಡಿಸಬೇಕೆಂದು ಜಿಲ್ಲಾಡಳಿತ, ಉತ್ಸವ. ಇಂದು ನಾಳೆ ನಡೆಯುವ ಹಂಪಿ ಉತ್ಸವದಲ್ಲಿ ಭಾಗವಹಿಸಲು ಎಲ್ಲಾ ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ. ಯಾವುದೇ ಆದ್ಯತೆಗಳಿರುವುದಿಲ್ಲ. ಎಲ್ಲಾ ವೇದಿಕೆಗಳಲ್ಲಿನ ಆಸನಗಳಿಗೆ ಕಾಯ್ದಿರುಸುವಿಕೆ ಇರುವುದಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರವರು ಮಾಧ್ಯಮದ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವರದಿ :-ಮೊಹಮ್ಮದ್ ಗೌಸ್