ಪ್ಲೆಕ್ಸ್ ಬ್ಯಾನರ್ ಅಳವಡಿಸುವ ಮುಂಚೆ ಎಚ್ಚರ!!!

0
448

ಹೊಸಪೇಟೆ :- ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್

ಹೊಸಪೇಟೆ ನಗರದಲ್ಲಿ ಇತ್ತೀಚೆಗೆ ಯಾವುದೇ ಪರವಾನಿಗೆ ಪಡೆಯದೇ ಬ್ಯಾನರ್ ಗಳನ್ನು ರಸ್ತೆಯ ಅಕ್ಕಪಕ್ಕದಲ್ಲಿ ಅಳವಡಿಸುತ್ತಿರುವುದು ಕಂಡುಬಂದಿದೆ, ಬ್ಯಾನರ್ ಗಳನ್ನು ಅಳವಡಿಸಲು ಈ ಕೆಳಕಂಡ ಸೂಚನೆಗಳನ್ನು ತಪ್ಪದೆ ಪಾಲಿಸಲು ಸೂಚಿಸಿದೆ. ಪರವಾನಿಗೆ ಪಡೆಯದೇ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ Karnataka Open Places Prevention of Disfigurement) Act 1981 ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.

1. ಬ್ಯಾನರ್ ಗಳನ್ನುಹಾಕಲು,
ಪರವಾನಿಗೆಯನ್ನು ಪಡೆಯಬೇಕು.
ಹೊಸಪೇಟೆ, ನಗರಸಭೆಯಿಂದ, ಕಡ್ಡಾಯವಾಗಿ

2 ಪೌರಾಯುಕ್ತರು, ನಗರಸಭೆ ಹೊಸಪೇಟೆ ರವರು ಅನುಮತಿ ಪತ್ರದಲ್ಲಿ ಸೂಚಿಸಿದ ಸ್ಥಳಗಳಲ್ಲಿ, ಕೋರಿರುವ ಬ್ಯಾನರಿನ ಸೈಪಿನ ಅಳತೆಯಂತೆ ನಿಗಧಿಪಡಿಸಿದ ಅವಧಿಯೊಳಗೆ ಮಾತ್ರ ಅಳವಡಿಸಿಕೊಳ್ಳುವುದು.

3. ಅನುಮತಿ ಪತ್ರದಲ್ಲಿ ಸೂಚಿಸಿದ ಸಮಯದಲ್ಲಿ ಬ್ಯಾನರ್ ಗಳನ್ನು ತೆರವುಗೊಳಿಸುವುದು, 4. ರಸ್ತೆ ಸಂಚಾರ, ತೊಂದರೆಯಾಗದಂತ ಮತ್ತು ಟ್ರಾಫಿಕ್ ಸಿಗ್ನಲ್‌ಗಳು ಇರುವ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸತಕ್ಕದ್ದಲ್ಲ.

5. ಬ್ಯಾನರ್ ಗಳ ಮೇಲೆ ಕಡ್ಡಾಯವಾಗಿ ಪೌರಾಯುಕ್ತರು ನಗರಸಭೆ ಹೊಸಪೇಟೆ ರವರ
ಅನುಮತಿ ಪತ್ರ ಅಂಟಿಸತಕ್ಕದ್ದು ಬ್ಯಾನರ್ ಪ್ರಿಂಟ್ ಹಾಕಿಸುವಾಗ ಪರವಾನಿಗೆ ಪತ್ರವನ್ನು ಸಹ
ಬ್ಯಾನರ್ ನಲ್ಲಿ ಪ್ರಿಂಟ್ ಹಾಕಿಸತಕ್ಕದ್ದು. 6. ವಿದ್ಯುತ್ ಕಂಬ, ಟೆಲಿಫೋನ್ ಕಂಬಗಳಿಗೆ, ಆಸ್ಪತ್ರೆ, ಕೋರ್ಟ್, ಸರ್ಕಾರಿ ಕಟ್ಟಡಗಳಿಗೆ, ಶಾಲಾ ಕಾಲೇಜುಗಳ ಕಟ್ಟಡಗಳಿಗೆ ಬ್ಯಾನರ್ ಅಳವಡಿಸತಕ್ಕದ್ದಲ್ಲ.

ಶ್ರೀಹರಿ ಬಾಬು ಬಿ ಎಲ್
ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here