ಹೊಸಪೇಟೆ: ಜಾಗೃತಿ ಬೆಳಕು
ವಿಜಯನಗರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ವಿಜಯನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ “ಸ್ಪೂರ್ತಿ-2022” ಯೋಜನೆಯಡಿ ವಿವಿಧ ಸ್ಪರ್ಧಾತ್ಮಕ (ಟಿಇಟಿ, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪಿಸಿ, ಬ್ಯಾಂಕಿಂಗ್) ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ನ ಅಧ್ಯಕ್ಷರಾದ ಅನಿರುದ್ಧ್ ಶ್ರವಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಯು ಸೆ.25ರಿಂದ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 05ರವರೆಗೆ ನಡೆಯಲಿದ್ದು, ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮಗೆ ಹತ್ತಿರವಿರುವ ತಾಲ್ಲೂಕಿನ ತರಬೇತಿ ಕೇಂದ್ರದಲ್ಲಿ ಭಾಗವಹಿಸಿ ತರಬೇತಿಯ ಉಪಯೋಗವನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
*ತರಬೇತಿಯ ವಿವರ: ಹೊಸಪೇಟೆ ತಾಲೂಕಿನಲ್ಲಿ ಶಂಕರ್ ಆನಂದ್‍ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಜಿ.ವಿ.ಪಿ.ಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೂವಿನಹಡಗಲಿ ಜಿ.ಬಿ.ಆರ್ ಕಾಲೇಜು, ಕೊಟ್ಟೂರು ತಾಲೂಕಿನಲ್ಲಿ ಕೊಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡ್ಲಿಗಿ ತಾಲೂಕಿನಲ್ಲಿ ಕೂಡ್ಲಿಗಿ ಎಸ್.ಎ.ವಿ.ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ಎ.ಡಿ.ಬಿ ಕಾಲೇಜಿನಲ್ಲಿ ತರಬೇತಿಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನಲ್ಲಿ ಮಾತ್ರ ತರಬೇತಿಯು ಅ.16ರಿಂದ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9880186647 ಗೆ ಸಂಪರ್ಕಿಸಬಹುದಾಗಿದೆ.
ವರದಿ :-ಮೊಹಮ್ಮದ್ ಗೌಸ್