ಔರಾದ:-ಜಾಗೃತಿ ಬೆಳಕು
ಔರಾದ : ಸ್ವಸ್ಥ ಹಾಗೂ ಪಾರದರ್ಶಕ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಪಶು ಸಂಗೋಪನಾ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನುಡಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜನರು ಪತ್ರಿಕೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ಸುಂದರ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಗಡಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಪತ್ರಕರ್ತರ ಕಾಣಿಕೆ ಅಮೋಘವಾಗಿದೆ. ಸರ್ಕಾರ ವಿವಿಧ ರೀತಿಯಲ್ಲಿ ಪತ್ರಕರ್ತರಿಗೆ ನೆರವಾಗಬೇಕಿದೆ. ಪ್ರಸ್ತುತ ಸಮಾಜದಲ್ಲಿ ಅನೇಕ ಬಗೆಯ ಮಾಧ್ಯಮಗಳ ಪ್ರವೇಶವಾಗುತ್ತಿದ್ದರೂ, ನಿಖರತೆ ಮತ್ತು ಸತ್ಯ ಸಂಗತಿಗಳ ಸುದ್ದಿಗಳಿಗೆ ಜನಮನ್ನಣೆ ಇದೆ ಎಂಬುದು ಅಲ್ಲಗಳೆಯುವಂತಿಲ್ಲ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ನಿಸ್ವಾರ್ಥ, ನಿಷ್ಕಲ್ಮಶ ಭಾವದಿಂದ ಪತ್ರಿಕೆಗಳು ಮುನ್ನಡೆಸುವುದು ಒಂದು ರೀತಿಯ ಸಾಹಸವೇ ಸರಿ. ಅದಾಗ್ಯೂ ಜನರ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ತರದಂತೆ ಕೆಲಸ ಮಾಡುವುದು ಪತ್ರಿಕೆಗೂ ಪತ್ರಕರ್ತರಿಗೂ ಗೌರವದ ವಿಷಯವಾಗಿದೆ ಎಂದರು.
ಪೂಜ್ಯ ಶ್ರೀ ವೇದಮೂರ್ತಿ ಗುರುಪಾದಯ್ಯ ಶಾಸ್ತಿç ಹಾನಗಲ್ ಅವರು ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವಳಿ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪಪಂ ಅಧ್ಯಕ್ಷೆ ಅಂಬಿಕಾ ಪವಾರ್, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಹಿರಿಯ ವರದಿಗಾರ ಅಪ್ಪಾರಾವ ಸೌದಿ, ತಾಪಂ ಇಒ ಬಿರೇಂದ್ರ ಸಿಂಗ್, ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಅನೀಲಕುಮಾರ ದೇಶಮುಖ, ಎಂ.ಪಿ ಮುದಾಳೆ, ಸಂತೋಷ ಚಟ್ಟೆ, ಸಂಘದ ತಾಲೂಕು ಅಧ್ಯಕ್ಷ ರವೀಂದ್ರ ಮುಕ್ತೆದಾರ್, ಕಮಲನಗರ ತಾಲೂಕು ಅಧ್ಯಕ್ಷ ಮನೋಜ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಶಿವಪೂಜೆ, ಮಲ್ಲಪ್ಪ ಗೌಡ,ಸಾದುರೆ ಶಿವಕುಮಾರ. ರಾಚಯ್ಯ ಸ್ವಾಮಿ, ಶ್ರೀಕಾಂತ ಹುಂಡೇಕರ್, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ, ಅಂಬಾದಾಸ ನಳಗೆ, ಶಾಲಿವಾನ ಉದಗಿರೆ, ಬಾಲಾಜಿ ಅಮರವಾಡಿ, ಶಿವಕುಮಾರ ಬಿರಾದಾರ್, ಅಲಿಂ ಪಾಶಾ, ಸುಧೀರ ಪಾಂಡ್ರೆ ಸೇರಿದಂತೆ ಇನ್ನಿತರರಿದ್ದರು.
ವರದಿ…ಸುಧೀರ್ ಕುಮಾರ್ ಬೀ ಪಾಂಡ್ರೆ