ಕಾರಾಗೃಹದ ಬಂದಿಗಳಿಗೆ ಮನಃಪರಿವರ್ತನೆ, ವಿಚಾರ ಸಂಕೀರ್ಣ ಮತ್ತು ಚಿಂತನ!!!

0
150

ಹೊಸಪೇಟೆ(ವಿಜಯನಗರ), ಜಾಗೃತಿ ಬೆಳಕು

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಅಜಾದಿ ಕಾ ಅಮೃತ್ ಮಹೊತ್ಸವ ಕಾರ್ಯಕ್ರಮದ ಅಂಗವಾಗಿ ಅಖಿಲ ಕರ್ನಾಟಕ ಸಾಂಸ್ಕ್ರತಿಕ ಕಲಾ ಕೇಂದ್ರ ಹಾಗೂ ಹೊಸಪೇಟೆ ತಾಲೂಕು ಉಪಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಬಂದಿಗಳಿಗೆ ಮನಃಪರಿವರ್ತನೆ, ವಿಚಾರ ಸಂಕೀರ್ಣ ಮತ್ತು ಚಿಂತನ ಮಂಥನ ಕಾರ್ಯಕ್ರಮವನ್ನು ಹೊಸಪೇಟೆಯ ತಾಲೂಕು ಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಹೊಸಪೇಟೆಯ ವಿಜಯನಗರ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಹೆಚ್.ಎಂ.ಚಂದ್ರಶೇಖರ್ ಶಾಸ್ತ್ರೀ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಕಾರಾಗೃಹದ ಬಂದಿಗಳಿಗೆ ಮರ್ನಪರಿವರ್ತನೆ ಕುರಿತು ಮಾತನಾಡಿದರು.


ಹೊಸಪೇಟೆಯ ಉಪಕಾರಾಗೃಹದ ಅಧೀಕ್ಷಕ ಎಂ.ಹೆಚ್.ಕಲಾದಗಿ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹೊಸಪೇಟೆಯ 100 ಹಾಸಿಗೆ ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ.ಸೋಮಶೇಖರ್, ಹೊಸಪೇಟೆ ಕನ್ನಡ ಜಾನಪದ ಪರಿಷತ್‍ನ ಅಧ್ಯಕ್ಷೆ ಅಂಜಲಿ ಬೆಳಗಲ್, ಹೊಸಪೇಟೆ ಕನ್ನಡ ಕಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ್, ಕಮಲಾಪುರದ ಹಂಪಿ ವಿರೂಪಾಕ್ಷೇಶ್ವರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ವೀಣಾ, ಲೇಖಕಿ ಟಿ.ಎಂ.ಉಷಾರಾಣಿ,ಶಿಕ್ಷಕ ಮಧುಸೂದನ್, ಹೊಸಪೇಟೆ ಉಪ ಕಾರಾಗೃಹದ ಸಹಾಯಕ ಜೈಲರ್ ಕೆ.ಭೀಮಪ್ಪ, ಗೃಹರಕ್ಷಕ ದಳ ಸಿಬ್ಬಂದಿ ಪಿ.ಕೊಟ್ಟಪ್ಪ ಸೇರಿದಂತೆ ಕಾರಾಗೃಹದ ಎಲ್ಲಾ ಸಿಬ್ಬಂದಿಗಳು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here