ಹೊಸಪೇಟೆ ಬ್ರೇಕಿಂಗ್ ನ್ಯೂಸ್ (ಜಾಗೃತಿ ಬೆಳಕು)
ಯೂಸುಫ್ ತಂದೆ ದಿ.ಅಬ್ದುಲ್ ರೌಫ್ ಸಾಬ್ ಪೇಂಟಿಂಗ್ ಗುತ್ತಿಗೆದಾರರು ಎರಡು ದಿನದ ಹಿಂದಷ್ಟೇ ಅರವಿಂದ್ ನಗರದ ಶಾಂತಿನಿಕತನ ಶಾಲೆಯ ಹತ್ತಿರ ಮನೆ ಕಳ್ಳತನ ನಡೆದಿತ್ತು ಪ್ರಕರಣ ದಾಖಲಿಸಲಾಗಿತ್ತು. ನಗರದಲ್ಲಿ ಬಹಳಷ್ಟು ಪ್ರಕರಣಗಳು ನಡೆಯುತ್ತಿವೆ ಕೆಲವು ಪ್ರಕರಣಗಳು ಚಾಲ್ತಿಯಲ್ಲಿವೆ ಕೆಲವು ಪ್ರಕರಣಗಳಿಗೆ ಹೆಡೆಮುರಿ ಕಟ್ಟಿದಾರೆ ಅದರಲ್ಲಿ ಇದೊಂದು ಎರಡೇ ದಿನದಲ್ಲಿ ಅಪರಾಧಿಯನ್ನು ಹಿಡಿಯೋದ್ರಲ್ಲಿ ಯಶಸ್ವಿಯಾಗಿದ್ದಾರೆ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ. ಶ್ರೀನಿವಾಸ್ ಮೇಟಿ ಮತ್ತು ಸಿಬ್ಬಂದಿ ಜು.7ರಂದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ. ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯ ಕೈಗೊಂಡಾಗ ಹೊಸಪೇಟೆ ಎಂ.ಪಿ ಪ್ರಕಾಶ ನಗರದ ಸುಕ್ರಮ್ಮ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಆತನು ದಿನಾಂಕ: 04-07-2022 ರಂದು ಮದ್ಯಾಹ್ನ ಅರವಿಂದ ನಗದಲ್ಲಿ ಒಂದು ಮನೆಯಲ್ಲಿ
ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ, ಆರೋಪಿತೆಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯ ಹೆಸರು – ಪ್ರಕಾಶ ಚಿ ತಂದೆ ಲೇಟ್ ಬಿ ನಾಗಪ್ಪ ವಯಸ್ಸು 30 ವರ್ಷ, ಎಳೆನೀರು ವ್ಯಾಪಾರ, ವಾಸ: ಬೆನಕಾಮುರ ಗ್ರಾಮ, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ,
ಜಪ್ತು ಪಡಿಸಿಕೊಂಡ ಮುದ್ದೆಮಾಲಿನ ವಿವರ:- ಒಟ್ಟು 128.6 ಗ್ರಾಂ ಬಂಗಾರದ ಆಭರಣಗಳು ಅಂದಾಜು ಬೆಲೆ 5,14,400/ ಹಾಗೂ ನಗದು ಹಣ ರೂ. 45000/
ಈ ಕಾರ್ಯಚರಣೆಯನ್ನು ವಿಶ್ವನಾಥ ರಾವ್ ಕುಲಕರ್ಣಿ, ಡಿ.ಎಸ್.ಪಿ, ಹೊಸಪೇಟೆ ಉಪ ವಿಭಾಗ ಮಾರ್ಗದರ್ಶನದಲ್ಲಿ ಶ್ರೀನಿವಾಸ್, ಸಿ. ಮೇಟಿ, ಪಿ.ಐ, ಗ್ರಾಮೀಣ ಠಾಣೆ ರವರ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಸಿಬ್ಬಂದಿರವರಾದ ಬಿ.ರಾಘವೇಂದ್ರ, ಮಂಜುನಾಥ ಮೇಲೆ, ಕೊಟೇಶ ಏಳಂಜಿ, ಕೊಟೇಶ್,ಜೆ, ಅಡಿವೆಪ್ಪ ಬಂಡಿಮೆಗಳ ನಾಗರಾಜ, ಕೆ.ಸುಭಾಸ್ ಚಾಲಕ ನಾಗರಾಜ್,ಜಿ ಆರೋಪಿತರನ್ನು ಪತ್ತೆ ಮಾಡಿದ್ದು ಸದರಿ ತಂಡದ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಅರುಣ್ ಕೆ ವರಿಷ್ಠಾಧಿಕಾರಿಗಳು, ವಿಜಯನಗರ ಜಿಲ್ಲೆ, ಹೊಸಪೇಟೆ ರವರು ಪ್ರಶಂಶಿಸಿರು.
ವರದಿ :-ಮೊಹಮ್ಮದ್ ಗೌಸ್