ಕೈಗಾರಿಕಾ ಸಂಸ್ಥೆ ಮೇಲ್ದರ್ಜೆಗೆ ಉನ್ನತೀಕರಿಸಲು ಶಬ್ಬೀರ್ ಹೆಚ್ ಜಿಲ್ಲಾಧಿಕಾರಿಗಳಿಗೆ ಮನವಿ!!

0
161

ಹೊಸಪೇಟೆ ನ್ಯೂಸ್ (ಜಾಗೃತಿ ಬೆಳಕು)

ವಿಜಯನಗರ ಜಿಲ್ಲೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ದರ್ಜೆ-1 ಸೇರಿಸಲು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ತೆರೆಯಲು ಮಾನ್ಯ ಡಿಸಿ ರವರಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಬ್ಬೀರ್ ಹೆಚ್ (ಸಾಮಾಜಿಕ ಹೋರಾಟಗಾರರು) ಮಾತನಾಡಿ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವು ಕಳೆದ ಒಂದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಆದರೂ ಇಲ್ಲಿಯವರೆಗೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಇರಬೇಕಾದಂತಹ ಜಿಲ್ಲಾ ಮಟ್ಟದ ಕಛೇರಿಗಳು ಸ್ಥಾಪನೆಗೊಳ್ಳದೆ ಇರುವುದು ಜಿಲ್ಲೆಯ ಜನರ ದುರಾದೃಷ್ಟಕರ, ಸನ್ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಸರ್ಕಾರದೊಂದಿಗೆ ಚರ್ಚಿಸಿ ಜಿಲ್ಲೆಯ ಯುವಜನ ಉದ್ಯೋಗದ ಅನುಕೂಲಕ್ಕಾಗಿ ಜಿಲ್ಲಾಮಟ್ಟದ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸಬೇಕು
ಮುಂದುವರೆದು, ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಇರುವಂತಹ ಸರ್ಕಾರಿ ಕೈಗಾರಿಕಾ ತರಬೇತಿ (ITI) ಸಂಸ್ಥೆಯು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (PPP) ಮತ್ತು ಟಾಟಾ ತಂತ್ರಜ್ಞಾನಗಳು (Tata Technology) ರವರ ಸಹಯೋಗದಲ್ಲಿ ವಿಶಾಲವಾದ ಕಟ್ಟಡಗಳನ್ನು ಹೊಂದಿ ದರ್ಜೆ-2 ರ ಗುಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವಂತ ಈ ಸಂಸ್ಥೆಯ ಉನ್ನತೀಕರಣಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ಹಿತ ಚಿಂತನೆಯಿಂದ ಪ್ರಸ್ತುತ ಸಂಸ್ಥೆಯನ್ನು ದರ್ಜೆ-2 ರಿಂದ ದರ್ಜೆ-1 ಕ್ಕೆ ಉನ್ನತೀಕರಿಸುವಂತೆ ಸರ್ಕಾರ ಮತ್ತು ಇಲಾಖೆಯೊಂದಿಗೆ ಚರ್ಚಿಸಿ ಜಿಲ್ಲೆಯ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಶಬ್ಬೀರ್ ಹೆಚ್ ರವರು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಷೇಕ್ ಜಿಲ್ಲಾಅಧ್ಯಕ್ಷರು ಮಾನವ ಹಕ್ಕುಗಳ ಒಕ್ಕೂಟ , ಗಂಗಾಧರ್ ಗೌಳಿ ಜಿಲ್ಲಾಧ್ಯಕ್ಷರು ನವಕರ್ನಾಟಕ ಯುವಶಕ್ತಿ, ಡೊಮಿನಿಕ್, ಪೀಟರ್ ಮತ್ತು ಇತರರಿದ್ದರು..

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here