ಇ.ಡಿ. ದುರ್ಬಳಕ್ಕೆ ವಿರೋಧಿಸಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ!!!

0
303

ಹೊಸಪೇಟೆ ನ್ಯೂಸ್ ( ಜಾಗೃತಿ ಬೆಳಕು )

ಕೇಂದ್ರ ಬಿಜೆಪಿ ಸರಕಾರದ ದ್ವೇಷ ರಾಜಕಾರಣ ಏ.ಐ.ಸಿ.ಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗು ನಾಯಕರಾದ ರಾಹುಲ್ ಗಾಂಧಿ , ರವರಿಗೆ ಜಾರಿ ನಿರ್ದೇಶನಾಲಯ ಅನಗತ್ಯ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.


ಈ ಪ್ರತಿಭಟನೆಯಲ್ಲಿ ಹೊಸಪೇಟೆ ಕಾಂಗ್ರೆಸ್‌ ಮುಖಂಡರಾದ ಶ್ರೀ ಹೆಚ್. ಎನ್. ಎಫ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಇ.ಡಿ ಮತ್ತು ಸಿ.ಬಿ.ಐ.ನಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ ಪ್ರಕರಣ ಗಳಿದ್ದರೂ ಅವುಗಳನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಆದರೆ ಕಾಂಗ್ರೆಸ್‌ ನಾಯಕರನ್ನು ಮಾತ್ರ ಟಾರ್ಗೆಟ್‌ ಮಾಡಲಾಗುತ್ತಿದೆ ಆರೋಪಿಸಿದರು


ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಗ್ನಿಪಥ ಯೋಜನೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ನೋಟು ಅಮಾನ್ಯೀಕರಣ ಮತ್ತು ಮೂರು ಕೃಷಿ ಕಾನೂನುಗಳಂತಹ ಇತರ ವಿವಾದಾತ್ಮಕ ಕಾನೂನುಗಳೆ ಬಿಜೆಪಿಯ ಸಾಧನೆಗಳಾಗಿವೆ.
ಭಾರಿ ಪ್ರತಿಭಟನೆ ಬೆನ್ನಲ್ಲೇ ’ಅಗ್ನಿಪಥ’ ಯೋಜನೆಗೆ ದೇಶದ ಹಲವಾರು ಭಾಗಗಳಲ್ಲಿ ಈ ಯೋಜನೆಯ ವಿರುದ್ಧ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ತ್ಯಾಗ ಬಲಿದಾನಗಳ ಕುಟುಂಬದವರಿಗೆ ಯಾವುದೇ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಗರಣವನ್ನು ಮುಂದಿಟ್ಟುಕೊಂಡು ಅನಾವಶ್ಯಕವಾಗಿ ಹಲವಾರು ದಿನಗಳಿಂದ ವಿಚಾರಣೆಯನ್ನು ಮಾಡುತ್ತಿರುವುದು ಹಾಗು ಅವರಿಗೆ ಅನಾವಶ್ಯಕವಾಗಿ ಮಾನಸಿಕ ಕಿರುಕುಳ ನೀಡಿ ಈ ರೀತಿಯ ಅನ್ಯಾಯ ವಾಗುತ್ತಿರುವುದರ ವಿರುದ್ಧವಾಗಿ ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಭಾಗವಹಿಸಿದರು : ಹೆಚ್. ಎನ್. ಎಫ್ ಮೊಹಮ್ಮದ್ ಇಮಾಮ್ ನಿಯಾಜಿ. ಶಿವಯೋಗಿ. ರಾಜಶೇಖರ್ ಹಿಟ್ನಾಳ. ವಿನಾಯಕ್ ಶೆಟ್ಟರ್. ಅಸ್ಲಾಂ ಮಾಳಿಗಿ. ರಘು. ಹಾಲಪ್ಪ. ಕೆ. ಪಾಂಡು.ವೆಂಕಟರಾವ್ ಘೋರ್ಪಡೆ.ಗುಜ್ಜಲ್ ನಾಗರಾಜ್. ಗುಜ್ಜಲ್ ರಘು.ಖಾರದಪುಡಿ ಮಹೇಶ್.ಭಾರತ್.ಯೋಗ ಲಕ್ಷ್ಮಿ.ಅಲಂ ನವಾಜ್. ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here