4 ವರ್ಷದ ಮಗುವಿಗೆ ಬೀದಿ ನಾಯಿ ಗಂಭೀರ ಗಾಯ ಮಾಡಿರುವ ಘಟನೆ,!

0
185

ಹೊಸಪೇಟೆ :-ವಿಜಯನಗರ(ಜಾಗೃತಿ ಬೆಳಕು ಬ್ರೇಕಿಂಗ್ ನ್ಯೂಸ್)

ನಗರದ ಚಿತ್ತವಾಡ್ಗಿ ಏರಿಯಾದ 1ನೇ ವಾರ್ಡಿನ ಕಾಕರ ಓಣಿ 4 ವರ್ಷದ ಚಿಕ್ಕ ಮಗುವಿಗೆ ಬಿದಿ ನಾಯಿ ಕಚ್ಚಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಸಾರ್ವಜನಿಕ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮಗುವಿನ ಮುಖದ ಮೇಲೆ ತೀವ್ರ ಗಾಯವಾದ ಕಾರಣ ಮುಖದ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ವಿಷಯವನ್ನು ತಿಳಿದ ಶಾಸಕರು ಹೆಚ್ ಆರ್ ಗವಿಯಪ್ಪ ರವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಗೆ ತೆರಳಲು ಸೂಚಿಸಿದರು. ಹಾಗೂ ಶಾಸಕರು ಚಿಕಿತ್ಸೆಗೆ ಬೇಕಾದ ಆರ್ಥಿಕ ಸಹಾಯ ಮಾಡಿದರು

ನಗರದ ಹಲವಾರು ವಾರ್ಡ್ ಗಳಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಇದಕ್ಕೆ ನೇರ ಹೊಣೆ ನಗರಸಭೆ, ಇದೇ ಮೊದಲ ಬಾರಿ ನಡೆದಿರುವ ಘಟನೆ ಅಲ್ಲ ಮೂರನೇ ಬಾರಿ ಗಂಭೀರ ಈ ತರ ಘಟನೆಗಳು ನಡೆದಿರುತ್ತವೆ ಇನ್ನುವರೆಗೂ ಯಾವುದೇ ಸೂಕ್ತ ಕ್ರಮ ನಗರಸಭೆ ವತಿಯಿಂದ ಆಗಿರುವುದಿಲ್ಲ ನೇರವಾಗಿ ಆರೋಪ ಮಾಡಿದ ಭಗತ್ ಸಿಂಗ್ ರಕ್ತದಾನಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದಂತಹ ಸಂತೋಷ್ ರವರು ಪತ್ರಿಕೆಗೆ ತಿಳಿಸಿದರು.

ವರದಿ :ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here