ವೀರಭದ್ರನ ವೇಷದಾರಿ, ಒಡುಪುಗಳು ಸಂಭ್ರಮ ಆಚರಣೆ
ಹೊಸಪೇಟೆ:(ಜಾಗೃತಿ ಬೆಳಕು ನ್ಯೂಸ್ )
ಮಾ,6. ಕಮಲಾಪುರ ಗ್ರಾಮದ 14ನೇ ವಾರ್ಡ್. ಕಮ್ಮಾರ ಓಣಿ ಕಾಳಮ್ಮನ ಗುಡಿ ಹತ್ತಿರ. ಕಮಲಾಪುರ ದಿನಾಂಕ 5 ಮತ್ತು 6ನೇ ತಾರೀಕು 2026 ಮಾರ್ಚ್ ತಿಂಗಳ ಸ್ವಸ್ತಿ ಶ್ರೀ ಶಾಲಿವಾಹನ ಶಕೆ 1947 ನೇ ವಿಶ್ವವಸು ನಾಮ ಸಂವತ್ಸರದ ಪಾಲ್ಗುಣ ಮಾಸ ಕೃಷ್ಣ ಪಕ್ಷ ತೃತೀಯ ದಿನಾಂಕ 5.03.2026 ಗುರುವಾರ ಮುಂಜಾನೆ 9:00 ಗಂಟೆಯಿಂದ ಸರ್ವ ಸುಮಂಗಲೆಯವರಿಂದ ಶ್ರೀ ಕಾಳಿಕಾದೇವಿ ಭಾವಚಿತ್ರದೊಂದಿಗೆ ಗಣೇಶನ ಗುಡಿ ಹತ್ತಿರದ ಕಮಲಾಪುರ ಕೆರೆಯಿಂದ ಗಂಗಾ ಪೂಜೆಯನ್ನು ಮಾಡಿಕೊಂಡು ಕುಂಭಹೊತ್ತ ನಾರಿಯರು ಹಾಗೂ ವೀರಭದ್ರನ ವೇಷಧಾರಿಯು. ಡೋಲು ಕುಣಿತ. ನಂಬಿಕೋಲು. ಬಾಜು ಬಜಂತ್ರಿ ಸಂಭ್ರಮದಿಂದ ಜರುಗಿತು.
ವೈವಿಧ್ಯಮಯವಾದ ಪವಾಡಗಳು ಶಿವ ಹಾಗೂ ಪಾರ್ವತಿಯ ಸ್ಮರಣೆ ವಿಶ್ವಕರ್ಮ ಕುಲದೇವತೆಯ ಸ್ಮರಣೆ ಒಡಪುಗಳು ಗಮನ ಸೆಳೆದವು. ಸಂಸ್ಕೃತಿ ಜೀವಂತ ಆಚರಣೆ ನಮಗೆ ರಕ್ತಗತವಾಗಿದೆ ಎಂದು ನಿರೂಪಿಸುವತ್ತಿತ್ತು. ವಿಶ್ವಕರ್ಮಸಮಾಜ ಹಾಗೂ ಶ್ರೀ ವಿಶ್ವಕರ್ಮ ಸೇವಾ ಟ್ರಸ್ಟ್ (ರಿ) ಸರ್ವ ಪದಾಧಿಕಾರಿಗಳು ಸಮಾಜದ ಮುಖಂಡರು ಡೋಲು ಕುಣಿತ ನಂದಿಕೋಲು. ಬ್ಯಾಂಡ್ ಸಂಗೀತದೊಂದಿಗೆ ಹೆಜ್ಜೆ ಹಾಕಿದರು. ಬೀದಿ ಬದಿಯಲ್ಲಿ ರಾರಾಜೀಸುವ ವಿಶ್ವಕರ್ಮ ಸಮಾಜದ ಫಲಕಗಳು ಗಮನಸೆಳೆದವು.
ನಂತರ ಮಹಾಮಂಗಳಾರತಿ ಕಾರ್ಯಕ್ರಮ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ವಿಶ್ವಕರ್ಮ ಸಮಾಜ ಮುಖಂಡರಾದ ಕಮ್ಮಾರ ಕಾಳೆಸ್ರೀಪ್ಪ. ಈಶ್ವರಪ್ಪ. ಸೂರ್ಯನಾರಾಯಣಪ್ಪ.
ರಾಮಕೃಷ್ಣಪ್ಪ ಕೋಳಿ ಹನುಮಂತಪ್ಪ ಅಕ್ಷಾಲಿ ನಾಗರಾಜಪ್ಪ.ಈ ದಿನ ಸಂಭ್ರಮದ ಆಚರಣೆ ಗೆ ಸರ್ವ ವಿಶ್ವಕರ್ಮ ಸಮಾಜದ ಹಿರಿಯರು ಹಾಗೂ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರುಎರಡನೇ ದಿನದ ಕಾರ್ಯಕ್ರಮ ಉಪನಯನ ಹಾಗೂ ಚಂಡಿಕಾ ಹೋಮ ಮಹಾ ಮಂಗಳಾರತಿ ಪೂರ್ಣಾವತಿ ದಿನಾಂಕ 6.03.2026 ರಂದುಈ ಕಾರ್ಯಕ್ರಮದಲ್ಲಿ ಶ್ರೀ ಆನೆಗುಂದಿ ಮಹಾಸಂಸ್ಥಾನ ಗಿಣಿಗೇರಿ ಮಠ ಪೀಠಾಧೀಶರಾದ ದೇವೇಂದ್ರ ಮಹಾಸ್ವಾಮಿಗಳು ಹಾಗೂ ನಾಗಲಿಂಗ ಮಹಾಸ್ವಾಮಿಗಳು ಮತ್ತು ಶ್ರೀಮದಾನೆ ಆನೆಗುಂದಿ ಮಹಾಸಂಸ್ಥಾನ ಲೇಬಗಿರಿ ಪರಮಪೂಜ್ಯ ಶ್ರೀ ಶ್ರೀ ಪರಮ ಪೂಜ್ಯ ನಾಗಮೂರ್ತೆಯೇಂದ್ರ ಸ್ವಾಮೀಜಿಗಳು ಕಾರ್ಯಕ್ರಮದ ಮುಂದಾಳತ್ವ ವಹಿಸಿ ಉಪನಯನ ಭಾಗವಹಿಸಿದ 35ಕ್ಕೂ ಹೆಚ್ಚು ಬ್ರಹ್ಮೋಪದೇಶ ಸಂಧ್ಯಾವಂದನ ಆಚಾರ ವಿಚಾರ ಸಂಸ್ಕೃತಿಯ ಬಗ್ಗೆ ಬೋಧನೆ ಮಾಡಲಾಯಿತು ತದನಂತರ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರು ಹಾಗೂ ಶ್ರೀ ವಿಶ್ವಕರ್ಮ ಸೇವಾ ಟ್ರಸ್ಟ್ ಸರ್ವ ಪದಾಧಿಕಾರಿಗಳು ಭಾಗವಹಿಸಿ ಅನ್ನಸಾರ್ಪಣೆ ಅತ್ಯಂತ ಸಾಂಗೋಪಂಗವಾಗಿ ಸಾಗಿತು ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಯಿತು.
ವರದಿ :ಮಹಮ್ಮದ್ ಗೌಸ್
