ವಿಜಯನಗರ/ಹೊಸಪೇಟೆ,(ಜಾಗೃತಿ ಬೆಳಕು ನ್ಯೂಸ್)
ಮಾ.1: ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ “ನಮ್ಮ ಪೊಲೀಸ್ – ನಮ್ಮ ಹೆಮ್ಮೆ”, “ಫಿಟ್ನೆಸ್ ಫಾರ್ ಆಲ್” ಹಾಗೂ “ಡ್ರಗ್ಸ್ ಫ್ರೀ ಕರ್ನಾಟಕ” ಎಂಬ ಧ್ಯೇಯ ವಾಕ್ಯದಡಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವಕರಿಗಾಗಿ 5 ಕಿಮೀ ಹಾಗೂ 10 ಕಿಮೀ ಮ್ಯಾರಥಾನ್ ಓಟವನ್ನು ಭಾನುವಾರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಟಿಬಿ ಡ್ಯಾಂ ಪ್ರವೇಶ ದ್ವಾರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ನ್ಯಾಯಾಧೀಶರ ನೇತೃತ್ವದಲ್ಲಿ ಬಲೂನ್ ಹಾರಿಸುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಯುವಕರು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡು ಮಾದಕ ವಸ್ತುಗಳಿಂದ ದೂರವಿರಬೇಕು. ಕ್ರೀಡೆ ಮತ್ತು ವ್ಯಾಯಾಮದ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

5 ಕಿಮೀ ಓಟವು ಟಿಬಿ ಡ್ಯಾಂ ಪ್ರವೇಶ ದ್ವಾರದಿಂದ ಆರಂಭವಾಗಿ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. ಅದೇ ರೀತಿ 10 ಕಿಮೀ ಮ್ಯಾರಥಾನ್ ವೈಕುಂಠ ಅತಿಥಿ ಗೃಹದಿಂದ ಆರಂಭವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತು. ಮ್ಯಾರಥಾನ್‌ನಲ್ಲಿ ವಿದ್ಯಾರ್ಥಿಗಳು, ಯುವಕರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಕೆಂಬಲ ಸೂಚಿಸಿದ್ದಾರೆ.ಈ ಮ್ಯಾರಥಾನ್‌ನ ವಿಶೇಷ ಆಕರ್ಷಣೆಯಾಗಿ ಅಂಗವಿಕಲರಾಗಿರುವ ಶಾಶವಲಿ ಅವರು ಧೈರ್ಯದಿಂದ ಓಟದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಜೊತೆಗೆ ಒಂದೇ ಕುಟುಂಬದ ಇಬ್ಬರು ಸಹೋದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವುದು ಗಮನಾರ್ಹ ಸಂಗತಿಯಾಗಿದ್ದು, ಇದು ಇತರರಿಗೆ ಪ್ರೇರಣೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ತಿಳಿಸಿದ್ದಾರೆ.
ಪುರುಷರಲ್ಲಿ,5, ಕಿಲೋ ಮೀಟರ್ ಓಟದಲ್ಲಿ ಸ್ಥಾನಪಡಿದವರು
1)ತಿಪ್ಪೇಶ್ ಯಾದವ್2)ಬಸವರಾಜ ಹಿರೆಮಠ3)ಚೇತನ್
1) ಕೆ. ಕವಿತಾ,,2) ಸುವರ್ಣ3)ಗೋಪಿಕ ಟಿ.ಬಿ.
ಮಹಿಳೆಯರಲ್ಲಿ.
10 ಕಿ.ಮೀ ಓಟದಲ್ಲಿ ಪುರುಷರಲ್ಲಿ
1)ಚಂದ್ರಶೇಖರ ಬಸವರಾಜ2)ಗೋವಿಂದರಾಜ್3)ಜಿ. ವಿನಯ್
ಮಹಿಳೆಯರಲ್ಲಿ.1)ಉಷಾ ರೋಹಿಣಿ2) ಸೌಮ್ಯ3)ಗೋಪಿಕಾ
ವಿಶೇಷ ಚೇತನ ವಿದ್ಯಾರ್ಥಿ ವಿಶೇಷವಾಗಿ ಅವರನ್ನು ಗೌರವಿಸುವ ಮೂಲಕ ಶಾಷಾವಲಿ ರವರಿಗೆ ವಿಶೇಷ ಬಹುಮಾನ ನೀಡಲಾಯಿತು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹10,000, ದ್ವಿತೀಯ ಸ್ಥಾನ ಪಡೆದವರಿಗೆ ₹5,000 ಮತ್ತು ತೃತೀಯ ಸ್ಥಾನ ಪಡೆದವರಿಗೆ ₹3,000 ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿತು.

ಈ ಕಾರ್ಯಕ್ರಮದ ಮೂಲಕ ಆರೋಗ್ಯದ ಮಹತ್ವ, ಫಿಟ್ನೆಸ್ ಬಗ್ಗೆ ಜಾಗೃತಿ ಹಾಗೂ ಮಾದಕ ವಸ್ತು ವಿರೋಧಿ ಸಂದೇಶವನ್ನು ಸಮಾಜಕ್ಕೆ ಜಾಗೃತಿಗೊಳಿಸುವ ಕೆಲಸಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ ಯಂದು ಜನಸಾಮಾನ್ಯರ ಮನೆ ಮಾತಾಗಿತ್ತು.


ಕೋಟ್…
“ಡಿವೈಎಸ್ಪಿ ಮಂಜುನಾಥ್ ಅವರ ಆದೇಶದ ಮೇರೆಗೆ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಹುಲುಗಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಾಬಯ್ಯ, ವಿನಾಯಕ್, ಶ್ರೀನಾಥ್, ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ರಾತ್ರಿ ಪೂರ್ತಿ ಶ್ರಮಿಸಿ ಮ್ಯಾರಥಾನ್ ಮಾರ್ಗದಲ್ಲಿ ಬ್ಯಾರಿಕೇಡ್‌ಗಳು ಮತ್ತು ಟೇಪ್‌ಗಳನ್ನು ಅಳವಡಿಸಿದರು. ಇದರ ಪರಿಣಾಮವಾಗಿ ಸಂಚಾರಿಗಳಿಗೆ ಹಾಗೂ ಸ್ಪರ್ಧಿಗಳಿಗೆ ಯಾವುದೇ ಅಡಚಣೆ ಉಂಟಾಗದೇ ಮ್ಯಾರಥಾನ್ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು. ಪೊಲೀಸ್ ಸಿಬ್ಬಂದಿಯ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.” ಪೊಲೀಸ್ ಸಿಬ್ಬಂದಿಗಳು ರಸ್ತೆ ಸುರಕ್ಷತೆಯ ಬಗ್ಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಕಾರ್ಯಕ್ರಮದ ಫೋಟೋ ಕಳುಹಿಸಲಾಗಿದೆ.

ವರದಿ :ಮಹಮ್ಮದ್ ಗೌಸ್


