ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಎಂ.ದಾದಾ ಖಲಂದರ್ ನೇಮಕ!
ವಿಜಯನಗರ/ಹೊಸಪೇಟೆ(ಜಾಗೃತಿ ಬೆಳಕು ನ್ಯೂಸ್)
ಫೆ, 25.ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಎಂ.ದಾದಾ ಖಲಂದರ್ ಇವರನ್ನು ವಿಜಯನಗರ ಜಿಲ್ಲಾ ಅಧ್ಯಕ್ಷ, ಹಾಗೂ ಮಾಜಿ ಶಾಸಕರಾದ ಸಿರಾಜ್ ಶೇಖ್ ರವರ ಶಿಫಾರಸ್ಸಿನ ಮೇರೆಗೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಎಂ.ದಾದಾ ಖಲಂದರ್ ನೇಮಕ ಮಾಡಿ ಬೆಂಗಳೂರು ಕೇಂದ್ರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆದೇಶ ಪತ್ರವನ್ನು ಕೊಡುವ ಮೂಲಕ ಪಕ್ಷದ ಜವಾಬ್ದಾರಿಯನ್ನು ವಹಿಸಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ ಎಂ ಹಾಲಪ್ಪ, ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನೆಳ್ಳಪ್ಪ ವಿಜಯನಗರ ಜಿಲ್ಲಾ ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ ಜಿಲ್ಲಾ ಕಾರ್ಯದರ್ಶಿ ಸಂಗಪ್ಪ ಮುಖಂಡರಾದ ತಾರಾ ಭಾಷ, ಎಂ.ಡಿ.ರಫೀಕ್, ಶಫೀ ಕುರೇಷಿ, ಪೀರಾ ಸಾಬ್, ಜೀಲಾನ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.
ವರದಿ :ಮಹಮ್ಮದ್ ಗೌಸ್

