2ಕೋಟಿಗೂ ಹೆಚ್ಚು ಪ್ರೀಮಿಯಂ ಸಂಗ್ರಹಣೆ: ಸೈಯದ್ ಬಶೀರ್ ಅಹ್ಮದ್ ಗೆ ಸನ್ಮಾನ!

0
276

ಹೊಸಪೇಟೆ (ವಿಜಯನಗರ): ಜಾಗೃತಿ ಬೆಳಕು

2 ಕೋಟಿಗೂ ಹೆಚ್ಚು ಪ್ರಿಮಿಯಂ ಸಂಗ್ರಹಣೆ
ಹೊಸಪೇಟೆ ಶಾಖೆಯ ಚೇರಮನ್ ಕ್ಲಬ್ ಪ್ರತಿನಿಧಿ ಸೈಯದ್ ಬಷೀರ್ ಅಹ್ಮದ್‌ಗೆ ಸನ್ಮಾನ,

ಪ್ರೀಮಿಯಂ ಸಂಗ್ರಹಣೆಯಲ್ಲಿ ಅತ್ಯದ್ಭುತ ಸಾಧನೆ ಮಾಡಿ 2 ಕೋಟಿಗೂ ಹೆಚ್ಚು ಪ್ರಿಮಿಯಂ ಸಂಗ್ರಹಿಸಿ ಹೊಸಪೇಟೆ ಶಾಖೆಗೆ ಕೀರ್ತಿ ತಂದಿರುವ ಭಾರತೀಯ ಜೀವ ವಿಮಾ ನಿಗಮದ ಹೊಸಪೇಟೆ ಶಾಖೆಯ ಚೇರಮನ್ ಕ್ಲಬ್ ಪ್ರತಿನಿಧಿಯಾದ ಶ್ರೀ ಸೈಯದ್ ಬಷೀರ್ ಅಹ್ಮದ್ ಇವರಿಗೆ ಆ.೧೦ರಂದು ಹೈದರಾಬಾದಿನ ನೊವಾಟೆಲ್ ಹೋಟೆಲ್‌ನಲ್ಲಿ ನಡೆದ ಮೀಟ್ ಚೇರಮನ್ ವರ್ಣರಂಜಿತ ಮಹಾ ಸಮ್ಮೇಳನದಲ್ಲಿ ಭಾರತೀಯ ಜೀವ ವಿಮಾ ನಿಗಮದ ಚೇರ್ಮನ್ ಎಮ್.ಆರ್.ಕುಮಾರ್ ರವರು ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಭಾರತದ 12.5 ಲಕ್ಷ ಪ್ರತಿನಿಧಿಗಳಲ್ಲಿ ಕೇವಲ 67 ಪ್ರತಿನಿಧಿಗಳು ಮಾತ್ರ ಈ ಪ್ರಶಸ್ತಿಗೆ ಅರ್ಹತೆ ಪಡೆದಿದ್ದು, ಅದರಲ್ಲಿ ರಾಯಚೂರು ವಿಭಾಗದಿಂದ ಕೇವಲ ಶ್ರೀ ಸೈಯದ್ ಬಷೀರ್ ಅಹ್ಮದ್ ದಂಪತಿಗೆ ಮಾತ್ರ ಈ ಪ್ರಶಸ್ತಿ ಮತ್ತು ಗೌರವ ಸಿಕ್ಕಿದ್ದು ಇವರ ಯಶಸ್ಸಿಗೆ ಹೊಸಪೇಟೆ ಶಾಖೆಯ ಶಾಖಾಧಿಕಾರಿ ಶ್ರೀ ಎನ್.ಯಂಕಪ್ಪ, ಉಪ ಶಾಖಾಧಿಕಾರಿ ಶ್ರೀ ಶ್ರೀನಿವಾಸ್, ಅಭಿವೃದ್ಧಿ ಅಧಿಕಾರಿ ಶ್ರೀ ಚೇತನ್‌ರಾಜ್ ಸಾಲಿಯಾನ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಪ್ರತಿನಿಧಿಗಳು ಶುಭ ಹಾರೈಸಿ ಅಭಿನಂದಿಸಿದ್ದಾರೆ.
ಈ ಸಭೆಯಲ್ಲಿ ಭಾರತೀಯ ಜೀವ ವಿಮಾ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಮಿನಿ ಐಪಿ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಮಲ್ ಕುಮಾರ್, ಚೀಫ್ ಸಿ.ಎಲ್.ಐ.ಎ. ಶಾಂತಾ ವರ್ಕೆ ಮತ್ತು ದಕ್ಷಿಣ ಮಧ್ಯ ವಲಯದ ವಲಯ ವ್ಯವಸ್ಥಾಪಕರಾದ ಎಮ್.ಜಗನ್ನಾಥ ಹಾಜರಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here